ಬೆಂಗಳೂರು ಸೇರಿ ಮಲೆನಾಡಿನಲ್ಲಿ ಮತ್ತೆ ಹೆಚ್ಚಲಿದೆ ಮಳೆ, ಆರೆಂಜ್ ಅಲರ್ಟ್ ಘೋಷಣೆ.

ನಮಸ್ಕಾರ ಕರ್ನಾಟಕ, ರಾಜ್ಯಾದ್ಯಂತ, ವಿಶೇಷವಾಗಿ ಬೆಂಗಳೂರಿನಲ್ಲಿ, ಮಳೆ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮಲೆನಾಡಿನಾದ್ಯಂತ ಮಳೆಯ ಪ್ರಮಾಣ ಇನ್ನು ಹೆಚ್ಚುವಾಗುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಮತ್ತು ಕೊಡಗು ಜಿಲ್ಲೆಗಳಾದ್ಯಂತ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಕರಾವಳಿಯಲ್ಲಿಯೂ ಸಹ ಸಣ್ಣ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ. ಮೈಸೂರು, ಮಂಡ್ಯ, ಮತ್ತು ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ನಿರೀಕ್ಷೆ ಇದ್ದು, ಗುಡುಗು ಸಹಿತ ಮಳೆ ಬೀಳಬಹುದು.

ದಕ್ಷಿಣ ಒಳನಾಡಿನ ಜಿಲ್ಲೆಗಳ ಅನೇಕ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಸಣ್ಣ ಪ್ರಮಾಣದ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಶಿವಮೊಗ್ಗ, ತುಮಕೂರು, ಮೈಸೂರು, ಮಂಡ್ಯ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾವೇರಿ, ಗದಗ, ಧಾರವಾಡ, ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಕೋಲಾರ, ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಇದೇ ಸಂದರ್ಭದಲ್ಲಿ, ಕೊಪ್ಪ, ಅರಕಲಗೂಡು, ಕಳಸ, ಬೆಳ್ಳೂರು, ಕಮ್ಮರಡಿ, ಚಿಕ್ಕಮಗಳೂರು, ನಾಯಕನಹಟ್ಟಿ, ಬೇಲೂರು, ದಾವಣಗೆರೆ, ಹಳಿಯಾಳ, ಬರಗೂರು, ಕಡೂರು, ಪರಶುರಾಂಪುರ, ಹಿರೇಕೆರೂರು, ಕುಣಿಗಲ್, ನಾಪೋಕ್ಲು, ಹಾಸನ, ಕುಣಿಗಲ್, ಭದ್ರಾವತಿ, ಹಾವೇರಿ, ಕವಡಿಮಟ್ಟಿ, ನಾಗಮಂಗಲ, ಚಾಮರಾಜನಗರ, ಚಿತ್ರದುರ್ಗ, ದೊಡ್ಡಬಳ್ಳಾಪುರ, ತಿಪಟೂರು, ವಿರಾಜಪೇಟೆ, ನಾಗಮಂಗಲ, ಕುಶಾಲನಗರ, ಶ್ರವಣಬೆಳಗೊಳ, ಚನ್ನಗಿರಿ, ಹಾರಂಗಿ, ಬಾಳೆಹೊನ್ನೂರು, ಹರಪನಹಳ್ಳಿ, ಕೊಟ್ಟೂರು, ಕಿರವತ್ತಿ, ಕೊಟ್ಟಿಗೆಹಾರ, ಸಿದ್ದಾಪುರ, ಧಾರವಾಡ, ಹಡಗಲಿ, ಆಗುಂಬೆ, ಸಿರಾ, ಕೃಷ್ಣರಾಜಪೇಟೆ, ಹುಂಚದಕಟ್ಟೆ, ಮಾಗಡಿ, ಕುಡತಿನಿ, ಮಧುಗಿರಿ, ಮತ್ತು ದೇವನಹಳ್ಳಿಯಲ್ಲಿ ಈಗಾಗಲೇ ಮಳೆ ಬೀಳುತ್ತಿದೆ.

ಇತರೆ ವಿಷಯಗಳು:

ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ, ಪಿಎಂ ಸೂರ್ಯಘರ್ ಯೋಜನೆಗೆ ಅರ್ಜಿ ಆಹ್ವಾನ.

ರಾಜ್ಯದ ರೈತರಿಗೆ ಸಿಹಿ ಸುದ್ದಿ, ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.

Leave a Reply

Your email address will not be published. Required fields are marked *

rtgh