ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ BPL ಕಾರ್ಡ್.!

BPL ಕಾರ್ಡ್ ಹೊಂದಿರುವ ಪಡಿತರ ಚೀಟಿದಾರರು 1 ಬಾರಿ ತಮ್ಮ ರೇಷನ್‌ ಕಾರ್ಡ್‌ ನಲ್ಲಿ ಇರುವ ಎಲ್ಲಾ ಸದಸ್ಯರ ‘EKYC’ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಇದು ಕಡ್ಡಾಯವಾಗಿದೆ.

BPL Ration Card Kannada

ಆದ್ದರಿಂದ ಯಾರು ಕಳೆದ ಹಲವು ವರ್ಷಗಳಿಂದ ತಮ್ಮ BPL ರೇಷನ್‌ ಕಾರ್ಡ್‌ ಗೆ ಈವರೆಗೆ ನೋಂದಣಿಯಾಗಿಲ್ಲ ಅಂತಹ ಕುಟುಂಬದವರು ಆಗಸ್ಟ್ 31 ರೊಳಗೆ ತಪ್ಪದೇ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಇಕೆವೈಸಿ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸಲು ಮಾಹಿತಿಯನ್ನು ತಿಳಿಸಿದೆ.

ನಿಗಧಿಪಡಿಸಿದಂದ ಕೊನೆಯ ದಿನಾಂಕದೊಳಗೆ EKYC ಮಾಡಿಸದಿದ್ದಲ್ಲಿ ಮಾಡಿಸದ ಸದಸ್ಯರನ್ನು ಅನರ್ಹರೆಂದು ಪರಿಗಣಿಸಿ ಅಂತ ಅವರ ಹೆಸರನ್ನು BPL ಪಡಿತರ ಚೀಟಿಯ ಹೆಸರಿನಿಂದ ತೆಗೆದು ಹಾಕಲಾಗುತ್ತದೆ. EKYC ಮಾಡಿಸುವುದು ಸಂಪೂರ್ಣವಾಗಿ ಉಚಿತವಾಗಿದೆ ಎಂದು ಪಡಿತರ ಚೀಟಿದಾರರ ಗಮನಕ್ಕೆ ತರಲಾಗಿದೆ.

ಸರ್ಕಾರದ ಮಾನದಂಡಗಳ ಅನ್ವಯ ಒಂದೇ ಕುಟುಂಬದಲ್ಲಿ ಒಂದಂಕ್ಕಿಂತ ಹೆಚ್ಚು ರೇಷನ್‌ ಕಾರ್ಡ್ ಇರುವುದು ಹಾಗೂ ಅನರ್ಹ ಪಡಿತರ ಚೀಟಿ ಪಡೆದುಕೊಂಡಿರುವವರು & ಆರ್ಥಿಕವಾಗಿ ಸಬಲರಾಗಿದ್ದು, ಸುಳ್ಳು ಮಾಹಿತಿಯನ್ನು ನೀಡಿ BPL ಪಡಿತರ ಚಿಟಿಯನ್ನು ಪಡೆದುಕೊಂಡಿರುವವರು ತಕ್ಷಣ ತಾಲ್ಲೂಕು ಕಚೇರಿ/ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ತಮ್ಮ ರೇಷನ್‌ ಕಾರ್ಡ್‌ ಅನ್ನು ಹಿಂದಿರುಗಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮಾಹಿತಿಯನ್ನು ತಿಳಿಸಿದೆ. 6 ತಿಂಗಳಿನಿಂದ ಪಡಿತರವನ್ನು ಪಡೆಯದ BPL ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡುವುದರ ಕುರಿತಂತೆ ಆಹಾರ ಇಲಾಖೆಯು ಚಿಂತನೆಯನ್ನು ನಡೆಸಿದೆ.

ಭೂ ಕಾಯ್ದೆ ತಿದ್ದುಪಡಿ: ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ!

ಅನ್ನಭಾಗ್ಯ ಯೋಜನೆಯಡಿ ಹಣ ಸ್ಥಗಿತ! ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆ ಒಪ್ಪಿಗೆ

Leave a Reply

Your email address will not be published. Required fields are marked *

rtgh