BPL ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 kg ಅಕ್ಕಿಯ ಹಣದ ಬದಲು ಫಲಾನುಭವಿಗಳ ಬೇಡಿಕೆಯ ಅನ್ವಯ ತೊಗರಿ ಬೇಳೆ, ಸಕ್ಕರೆ, ತಾಳೆ ಎಣ್ಣೆ, ಅಯೋಡೈಸ್ಡ್ ಉಪ್ಪು ನೀಡಲು ಆಹಾರ ಇಲಾಖೆಯು ಚಿಂತನೆಯನ್ನು ನಡೆಸಿದೆ. ಈ ಮೂಲಕ ಫಲಾನುಭವಿಗಳ ಬೇಡಿಕೆಗೆ ರಾಜ್ಯ ಸರ್ಕಾರವು ಸ್ಪಂದಿಸಲು ಮುಂದಾಗಿದೆ.
ಬೇಳೆ, ಎಣ್ಣೆ, ಸಕ್ಕರೆ, ಉಪ್ಪು ಸೇರಿ ಅಡುಗೆಗೆ ಬೇಕಾದ ಉತ್ಪನ್ನಗಳನ್ನು ನೀಡುವುದರಿಂದ ಬಡವರಿಗೆ ಅನುಕೂಲವಾಗುತ್ತದೆ. ಅಪೌಷ್ಟಿಕ ಸಮಸ್ಯೆಯೂ ಸ್ವಲ್ಪ ದೂರವಾಗುತ್ತದೆ. ಖಾತೆಗೆ ಹಣ ಹಾಕಿದರೆ ಆ ಹಣವನ್ನು ಮನೆಯ ಯಜಮಾನ ಅಥವಾ ಮಕ್ಕಳು ಡ್ರಾ ಮಾಡಿಕೊಂಡು ಇತರೆ ಖರ್ಚಿಗೆ ಬಳಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಬೇಡಿಕೆಯಂತೆ ಹೆಚ್ಚುವರಿ ಐದು ಕೆಜಿ ಅಕ್ಕಿ ಹಣದ ಬದಲು ದಿನಸಿ ನೀಡಲು ಚಿಂತನೆ ನಡೆಸಲಾಗಿದೆ.
ಒಂದು ಕುಟುಂಬದಲ್ಲಿ 4 ಜನ ಸದಸ್ಯರಿದ್ದರೆ ಕೆಜಿಗೆ 34 ರೂಪಾಯಿಯಂತೆ ಪ್ರತಿ ಸದಸ್ಯರಿಗೆ 170 ರೂಪಾಯಿ ಸೇರಿ 680 ರೂಪಾಯಿ ಖಾತೆಗೆ ಪಾವತಿಸಲಾಗುತ್ತಿದೆ. ತೊಗರಿ ಬೇಳೆ, ತಾಳೆ ಎಣ್ಣೆ, ಸಕ್ಕರೆ, ಉಪ್ಪು ನೀಡಲು ಇದಕ್ಕಿಂತ ಕಡಿಮೆ ಹಣವು ವೆಚ್ಚವಾಗುತ್ತದೆ. ಈ ನಿಟ್ಟಿನಲ್ಲಿ ಚರ್ಚೆಗಳು ನಡೆದು ಹಣಕಾಸು ಇಲಾಖೆಯು ಅನುಮೋದನೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ರಾಜ್ಯದ ತೊಗರಿ ಮಂಡಳಿ, ಸಕ್ಕರೆ ನಿರ್ದೇಶನಾಲಯ, ಕರ್ನಾಟಕ ಆಯಿಲ್ ಫೆಡರೇಶನ್ ನೊಂದಿಗೆ ಆಹಾರ ಇಲಾಖೆ ಸಭೆ ನಡೆಸಿದ್ದು, ಟೆಂಡರ್ ಮೂಲಕ ಗುಜರಾತ್ ನಿಂದ ಉಪ್ಪು ತರಿಸಿಕೊಳ್ಳಲು ಚಿಂತನೆ ನಡೆದಿದೆ. ರಾಜ್ಯದಾದ್ಯಂತ ಬಿಪಿಎಲ್ ಪಡಿತರ ಕಾರ್ಡ್ ದಾರರ ಪೈಕಿ ಶೇಕಡ 93 ರಷ್ಟು ಫಲಾನುಭವಿಗಳು 5ಕೆಜಿ ಹೆಚ್ಚುವರಿ ಅಕ್ಕಿ ಹಣದ ಬದಲು ಬೇಳೆ, ಸಕ್ಕರೆ, ಎಣ್ಣೆ, ಉಪ್ಪು ನೀಡಲು ಬೇಡಿಕೆ ಇಟ್ಟಿದ್ದು, ಇದಕ್ಕೆ ಸ್ಪಂದಿಸಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಇತರೆ ವಿಷಯಗಳು:
ಜ್ವರ, ನೋವು, ಅಲರ್ಜಿಗೆ ನೀಡುವ ಈ 156 ಔಷಧಿಗಳ ಮಾರಾಟ ನಿಷೇಧ.!
ಆಯುಷ್ಮಾನ್ ಫಲಾನುಭವಿಗಳಿಗೆ ಗುಡ್ ನ್ಯೂಸ್!ಈಗ ಸಿಗಲಿದೆ ಇನ್ನಷ್ಟು ಹೆಚ್ಚು ವಿಮಾ ರಕ್ಷಣೆ