ಉದ್ಯೋಗಿಗಳಿಗೆ ಶಾಕ್: ಇನ್ಮುಂದೆ 3 ತಿಂಗಳಿಗೊಮ್ಮೆ ವೇತನ ಖಾತೆಗೆ!

ಹಲೋ ಸ್ನೇಹಿತರೆ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗೆ ವರ್ಗದವರಿಗೆ ಪ್ರತೀ ತಿಂಗಳು ವೇತನ ಕೈ ಸೇರದೆ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ವೇತನದ ಜೊತೆ ಪ್ರೋತ್ಸಾಹ ಧನ ವಿತರಣೆ ಕೂಡ ವಿಳಂಬವಾಗಿದ್ದು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ತಾಲೂಕು ಸಿಬ್ಬಂದಿಗೆ ಮೂರು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಇದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ ಎಂಬ ಆರೋಪ ಬರುತ್ತಿದೆ.

Govt Employee Salary

ಈ ಬಗ್ಗೆ ಅಧಿಕಾರಿಗಳು ಮತ್ತು ಸಚಿವರ ಗಮನಕ್ಕೆ ಉದ್ಯೋಗಿಗಳು ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಹಣ ಬಿಡುಗಡೆಗೆ ರಾಜ್ಯದ ಸರ್ಕಾರದ ಮೊತ್ತವನ್ನು ಸೇರಿಸಿ ನೀಡಲಾಗುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಎರಡು ತಿಂಗಳಿಂದ ಗೌರವ ಧನ ನೀಡಿಲ್ಲ ಎಂದು ಹೇಳಲಾಗಿದೆ.

ಇನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಮೂರು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ವೇತನ ವಿಳಂಬದಿಂದಾಗಿ ತೊಂದರೆ ಉಂಟಾಗಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಕೊಡಗು, ಹಾಸನ ಜಿಲ್ಲೆಗಳಲ್ಲಿ ವೇತನ ವಿಳಂಬವಾಗಿದೆ ಎಂದು ದೂರು ನೀಡಲಾಗಿದೆ.

ಇದನ್ನು ಓದಿ: ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆಗೆ ಅನುಮೋದನೆ! 23 ಲಕ್ಷ ನೌಕರರಿಗೆ ಲಾಟರಿ

ಕೇಂದ್ರ ಸರ್ಕಾರವು ಮೂರ್ನಾಲ್ಕು ತಿಂಗಳಿಗೊಮ್ಮೆ ಅನುದಾನ ನೀಡುತ್ತಿದ್ದೂ ಈಗ ಎರಡು ತಿಂಗಳ ಅನುದಾನ ಬಾಕಿ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಅಂಗನವಾಡಿ ನೌಕರರ ವೆಚ್ಚ ಭರಿಸಬೇಕಿದೆ. ಕೇಂದ್ರ ಸರ್ಕಾರ ಸರಿಯಾದ ಸಮಯಕ್ಕೆ ಅನುದಾನ ಬಿಡುಗಡೆ ಮಾಡದ ಕಾರಣ ವೇತನ ವಿಳಂಬವಾಗಿದೆ.

ಆಶಾ ಕಾರ್ಯಕರ್ತೆಯರು ಪ್ರತೀ ತಿಂಗಳು ಪ್ರೋತ್ಸಾಹ ಧನಕ್ಕೆ ಕಾಯುವಂತಾಗಿದೆ. ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ವರ್ಷದ ಪ್ರಾರಂಭದಲ್ಲಿ ಒಂದೆರಡು ತಿಂಗಳು ಪ್ರೋತ್ಸಾಹ ಧನ ಜಮೆ ಆಗಿದ್ದು, ನಂತರ ಮೂರ್ನಾಲ್ಕು ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತದೆ. ಹೊರಗುತ್ತಿಗೆ, ತಾತ್ಕಾಲಿಕ ನೌಕರರಿಗೆ ಟಿಎ, ಡಿಎ ನೀಡಿಲ್ಲ. ಇನ್ನು ಪ್ರಭಾರ ಭತ್ಯೆ, ಪ್ರಯಾಣ ಭತ್ಯೆಯನ್ನು ಮೂರ್ನಾಲ್ಕು ವರ್ಷಗಳಿಂದ ಬಾಕಿ ಇದ್ದು, ಮೂರು ತಿಂಗಳಿಗೊಮ್ಮೆ ವೇತನ ಪಡೆಯುವ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.

ಇತರೆ ವಿಷಯಗಳು:

ಗಂಗಾ ಕಲ್ಯಾಣ ಯೋಜನೆಯಡಿ 4 ಲಕ್ಷ, ಅರ್ಜಿ ಸಲ್ಲಿಸಲು ಆ.31 ಕೊನೆಯ ದಿನಾಂಕ!

16 ಸಾವಿರಕ್ಕೂ ಅಧಿಕ ಗೃಹಲಕ್ಷ್ಮಿಯರಿಗೆ GST ಶಾಕ್: ಇನ್ಮುಂದೆ ಇವರಿಗೆ ಹಣ ಬರಲ್ಲ!

Leave a Reply

Your email address will not be published. Required fields are marked *

rtgh