ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗೆ ಮಾಸಿಕ ವೇತನ ಕೈ ಸೇರದೆ ಕಚೇರಿಗಳಿಗೆ ಅಲೆದಾಡುತ್ತಿರುವ ಸಂಗತಿ ಬಳಕೆಗೆ ಬಂದಿದೆ.
ವೇತನದ ಜೊತೆ ಪ್ರೋತ್ಸಾಹ ಧನ ಕೂಡ ವಿಳಂಬವಾಗಿದ್ದು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ತಾಲೂಕು ಸಿಬ್ಬಂದಿಗೆ ಮೂರು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಇದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಅಧಿಕಾರಿಗಳು ಮತ್ತು ಸಚಿವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಹಣ ಬಿಡುಗಡೆಗೆ ಅನುಗುಣವಾಗಿ ರಾಜ್ಯದ ಮೊತ್ತವನ್ನು ಸೇರಿಸಿ ನೀಡಲಾಗುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಎರಡು ತಿಂಗಳಿಂದ ಗೌರವ ಧನ ನೀಡಿಲ್ಲವೆನ್ನಲಾಗಿದೆ.
ಇನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದ ಸಿಬ್ಬಂದಿಗೂ, ಅಧಿಕಾರಿಗಳು 3 ತಿಂಗಳಿಗೊಮ್ಮೆ ವೇತನವನ್ನು ನೀಡಲಾಗುತ್ತಿದೆ. ವೇತನದ ವಿಳಂಬದಿಂದಾಗಿ ತೊಂದರೆಗಳು ಕೂಡ ಎದುರಾಗಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಹಾಸನ, ಕೊಡಗು ಜಿಲ್ಲೆಗಳಲ್ಲಿ ವೇತನದ ವಿಳಂಬವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಸಹ ಓದಿ: ಯಾತ್ರಿಕರಿಗೆ ಹೊಸ ನಿಯಮ! ನೋಂದಣಿ ಶುಲ್ಕ ರದ್ದು, ಅನುಕೂಲಕರ ಶುಲ್ಕ ಡಬಲ್
ಕೇಂದ್ರ ಸರ್ಕಾರವು ಮೂರ್ನಾಲ್ಕು ತಿಂಗಳಿಗೊಮ್ಮೆ ಅನುದಾನವನ್ನು ನೀಡುತ್ತದೆ. ಈಗ 2 ತಿಂಗಳ ಅನುದಾನವು ಬಾಕಿ ಇದೆ. ಕೇಂದ್ರ & ರಾಜ್ಯ ಸರ್ಕಾರಗಳು ಜಂಟಿಯಾಗಿ ಅಂಗನವಾಡಿಯ ವೆಚ್ಚವನ್ನು ಭರಿಸಬೇಕಿದೆ. ಕೇಂದ್ರ ಸರ್ಕಾರವು ಸಕಾಲಕ್ಕೆ ಅನುದಾನವನ್ನು ಬಿಡುಗಡೆ ಮಾಡದ ಕಾರಣದಿಂದ ವೇತನವು ವಿಳಂಬವಾಗಿದೆ.
ಆಶಾ ಕಾರ್ಯಕರ್ತೆಯರು ಮಾಸಿಕ ಪ್ರೋತ್ಸಾಹ ಧನಕ್ಕೆ ಕಾಯುವಂತಾಗಿದೆ. ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಮುಂತಾದ ಜಿಲ್ಲೆಗಳಲ್ಲಿ ವರ್ಷದ ಪ್ರಾರಂಭಿಕ ಒಂದೆರಡು ತಿಂಗಳು ಪ್ರೋತ್ಸಾಹ ಜಮೆಯಾಗಲಿದ್ದು, ನಂತರ ಮೂರ್ನಾಲ್ಕು ತಿಂಗಳಿಗೊಮ್ಮೆ ವೇತನವನ್ನು ಪಾವತಿ ಮಾಡಲಾಗುತ್ತದೆ. ಹೊರಗುತ್ತಿಗೆ, ತಾತ್ಕಾಲಿಕ ನೌಕರರಿಗೆ TA, DA ನೀಡಿಲ್ಲ. ಇನ್ನು ಪ್ರಭಾರದ ಭತ್ಯೆ, ಪ್ರಯಾಣದ ಭತ್ಯೆ ವರ್ಷಗಳಿಂದ ಬಾಕಿ ಇದ್ದು, 3 ತಿಂಗಳಿಗೊಮ್ಮೆ ವೇತನವನ್ನು ಪಡೆಯುವಂತಹ ಅಧಿಕಾರಿಗಳು, ಸಿಬ್ಬಂದಿಗೆ ಸಂಕಷ್ಟವು ಎದುರಾಗಿದೆ ಎಂದು ಹೇಳಲಾಗಿದೆ.
ಇತರೆ ವಿಷಯಗಳು:
ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆಗೆ ಅನುಮೋದನೆ! 23 ಲಕ್ಷ ನೌಕರರಿಗೆ ಲಾಟರಿ
ಇಂದಿನಿಂದ ಟಿಕೆಟ್ ಖರೀದಿಗೆ QR ಕೋಡ್ ಸ್ಕ್ಯಾನ್ ಮಾಡಿ! ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್