ನಾಳೆಯಿಂದಲೇ ಹೊಸ ನಿಯಮ ಜಾರಿ! ಶುಲ್ಕ ಪಾವತಿಸದಿದ್ದರೆ ಬಿಲ್ ನೀಡುವ ದಿನವೇ ವಿದ್ಯುತ್ ಸಂಪರ್ಕ ಕಡಿತ

ಹಲೋ ಸ್ನೇಹಿತರೆ, ವಿದ್ಯುತ್‌ ಬಿಲ್‌ ಪಾವತಿದಾರರಿಗೆ ಹೊಸ ನಿಯಮ ರೂಪಿಸಿದ್ದೂ, ವಿದ್ಯುತ್ ಬಿಲ್ ಬಂದ 30 ದಿನದೊಳಗೆ ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸರ್ಕಾರ ಆದೇಶಿಸಿದೆ. ಹೆಚ್ಚುವರಿ ಭದ್ರತಾ ಠೇವಣಿ ಮೊತ್ತವನ್ನು ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿಯ ಪ್ರಕಾರ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.

Electricity bill payment

ಸೆಪ್ಟೆಂಬರ್ 1ರಿಂದ ಈ ನಿಯಮ ಅನ್ವಯವಾಗಲಿದ್ದೂ. ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್ಮೆಂಟ್ ಗಳು, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ನಿಗದಿ ಪಡಿಸಿದ ಅವಧಿಯೊಳಗೆ ಶುಲ್ಕ ಪಾವತಿಸಬೇಕು. ಮೀಟರ್ ರೀಡಿಂಗ್ ಗೆ ಬರುವ ದಿನ ಪ್ರತಿ ತಿಂಗಳ ಮೊದಲ 15 ದಿನದಲ್ಲಿಯೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಇದನ್ನು ಓದಿ: ಎಲ್ಲಾ ಶಾಲೆ ಕಾಲೇಜುಗಳಿಗೆ 7 ದಿನ ರಜೆ! ಪಟ್ಟಿ ಚೆಕ್‌ ಮಾಡಿ

ಇದುವರೆಗೆ ಪ್ರತಿ ತಿಂಗಳ ಮೊದಲ 15 ದಿನದಲ್ಲಿ ಮೀಟರ್ ಮಾಪನ ಮಾಡಿದ ನಂತರ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಲೈನ್ ಮ್ಯಾನ್ ಗಳೊಂದಿಗೆ ಸ್ಥಳಕ್ಕೆ ತೆರಳುತ್ತಿದ್ದರು. ಇನ್ನು ಮುಂದೆ ಮೀಟರ್ ರೀಡರ್ ಮಾಡುವವರ ಜೊತೆಗೇ ಲೈನ್ ಮ್ಯಾನ್ ಗಳು ಬಂದು ವಿದ್ಯುತ್ ಬಾಕಿ ಬಿಲ್ ಉಳಿಸಿಕೊಂಡಲ್ಲಿ ವಿದ್ಯುತ್ ಸ್ಥಗಿತಗೊಳಿಸಲಿದ್ದಾರೆ.

ವಿದ್ಯುತ್ ಬಿಲ್ ಪಾವತಿಗೆ ಬಿಲ್ ನೀಡಿದ‌ ಸಮಯದಲ್ಲಿ 15 ದಿನಗಳು ಯಾವುದೇ ಬಡ್ಡಿ ಇಲ್ಲದೆ ಕಾಲಾವಕಾಶ ನೀಡಲಾಗುತ್ತದೆ. ಅಂತಿಮ ದಿನಾಂಕದ ನಂತರವೂ ಬಡ್ಡಿಯೊಂದಿಗೆ ಪಾವತಿ ಮಾಡಲು 15 ದಿನ ಕಾಲಾವಕಾಶ ನೀಡಲಾಗುವುದು. ಗ್ರಾಹಕರು ಶುಲ್ಕ ಪಾವತಿಸದಿದ್ದಲ್ಲಿ ಮುಂದಿನ ಮೀಟರ್ ರೀಡಿಂಗ್ ದಿನವೇ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುತ್ತದೆ. ವಿದ್ಯುತ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಹಣ 100ರೂ. ಗಳಿಗಿಂತ ಅಧಿಕವಾಗಿದ್ದಲ್ಲಿ ಅಂತಹ ಸಂಪರ್ಕಗಳನ್ನು ನಿಲ್ಲಿಸಲಾಗುವುದು ಎಂದು ಹೇಳಲಾಗಿದೆ.

ಇತರೆ ವಿಷಯಗಳು:

ಮದ್ಯದ ದರ ಇಳಿಕೆ ಬೆನ್ನಲ್ಲೇ ಬಿಯರ್ ದರ 30% ಹೆಚ್ಚಳ!

ಕೇಕ್ ಪ್ರಿಯರಿಗೆ ಬೇಸರದ ಸುದ್ದಿ: ಕೃತಕ ಬಣ್ಣ ಬಳಸಿದ ಕೇಕ್ ನಿಷೇಧ..!

Leave a Reply

Your email address will not be published. Required fields are marked *

rtgh