ನಮಸ್ಕಾರ ಕರ್ನಾಟಕ, ರಾಜ್ಯ ಸರ್ಕಾರಿ ನೌಕರರು ಕಾಯುತ್ತಿದ್ದ ವೇತನ ಹೆಚ್ಚಳದ ಸಿಹಿ ಸುದ್ದಿ ಇಂದು ದೊರೆಯುವ ಸಾಧ್ಯತೆಯಿದೆ. 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಬಗ್ಗೆ ಇಂದು ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂಬ ಮಾಹಿತಿ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಸಂಜೆ ನಡೆಯಲಿರುವ ಸಂಪುಟ ಸಭೆಯಲ್ಲಿ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯ ಶಿಫಾರಸುಗಳ ಜಾರಿ ಕುರಿತು ಚರ್ಚೆ ನಡೆಯಲಿದೆ. ಈ ಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯವೂ ಸೇರಿಸಲಾಗಿದೆ.
ಸರ್ಕಾರಿ ನೌಕರರ ಸಂಘಟನೆಗಳು ಮುಷ್ಕರ ಎಚ್ಚರಿಕೆ ನೀಡಿರುವ ಹಿನ್ನೆಲೆ, ಇಂದು ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರದಲ್ಲಿ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
7ನೇ ವೇತನ ಆಯೋಗವು ಶೇ.27.5ರಷ್ಟು ವೇತನ ಪರಿಷ್ಕರಣೆ ಶಿಫಾರಸು ಮಾಡಿದ್ದು, ಈಗಾಗಲೇ ಮಾರ್ಚ್ 2023 ರಿಂದ ಶೇ.17ರಷ್ಟು ಮಧ್ಯಂತರ ಪರಿಹಾರ ನೀಡಲಾಗಿದೆ. ಇನ್ನು ಗರಿಷ್ಠ ಶೇ.10.5ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ಆಯೋಗ ಶಿಫಾರಸು ಮಾಡಿದೆ.
ಇದರ ಅನ್ವಯ, ರಾಜ್ಯ ಸರ್ಕಾರಿ ನೌಕರರಿಗೆ ಶೇ.8 ರಿಂದ ಶೇ.8.5ರಷ್ಟು ಅಂತಿಮ ವೇತನ ಹೆಚ್ಚಳ ದೊರೆಯಬಹುದಾಗಿದೆ. ಒಟ್ಟಾರೆ, ಮೂಲವೇತನದ ಶೇ.25 ರಿಂದ ಶೇ.25.5ರಷ್ಟು ಏರಿಕೆ ಸಾಧ್ಯವೆಂದು ನಿರೀಕ್ಷಿಸಲಾಗಿದೆ.
ಇತರೆ ವಿಷಯಗಳು :
SCDCC Bank jobs: ಸಹಕಾರಿ ಬ್ಯಾಂಕ್‌ನಲ್ಲಿ ಒಟ್ಟು 123 ಹುದ್ದೆಗಳ ನೇಮಕ, ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ.