ಹಲೋ ಸ್ನೇಹಿತರೆ, ರಾಜ್ಯ ಸರ್ಕಾರವು ಮತ್ತೊಂದು ಯೋಜನೆ ಜಾರಿಗೆ ತರಲಾಗುತ್ತಿದ್ದು, ಈ ಯೋಜನೆಯಡಿ ಗ್ರಾಮಪಂಚಾಯಿತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ. ಈ ಕುರಿತು ಸಚಿವರಾದ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿನ ವಿದ್ಯುತ್ ಬಳಕೆ ಮೇಲೆ ನಿಗಾ ಇರಿಸಲು ಹಾಗೂ ವಿದ್ಯುತ್ ಬಳಕೆ ವೆಚ್ಚ ಕಡಿಮೆ ಮಾಡಲು ರಾಜ್ಯದ 50 ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸುವ “ಹೊಂಬೆಳಕು” ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿದಂತೆ “ಹೊಂಬೆಳಕು” ಯೋಜನೆಯನ್ನು ಜಾರಿಗೆ ಹಾಗೂ ಇದರ ಅನುಷ್ಠಾನಕ್ಕಾಗಿ ₹25 ಕೋಟಿ ವೆಚ್ಚ ಮಾಡಲಾಗುವುದು. ಸೌರ ಬೀದಿ ದೀಪಗಳು ಪರಿಸರ ಸ್ನೇಹಿಯಾಗಿದ್ದು, ಇಂಧನ ಬಳಕೆಯಾಗದಿರುವುದರಿಂದ ಗ್ರಾಮ ಪಂಚಾಯತಿಗಳಿಗೆ ವಿದ್ಯುತ್ ವೆಚ್ಚದ ಬಗ್ಗೆ ಹೊರೆ ಕಡಿಮೆಯಾಗಲಿದೆ ಎಂದರು.
ಇದನ್ನು ಓದಿ: ಕುರಿ, ಕೋಳಿ, ಹಂದಿ ಸಾಕಣೆ ಬ್ಯುಸಿನೆಸ್ ಆರಂಭಕ್ಕೆ ಸಬ್ಸಿಡಿ! 10 ಲಕ್ಷ ವೆಚ್ಚಕ್ಕೆ ಸಿಗಲಿದೆ 5 ಲಕ್ಷ ಸಬ್ಸಿಡಿ
ಈ ಸೌರ ಬೀದಿದೀಪಗಳಲ್ಲಿ ಎಲ್.ಇ.ಡಿ ತಂತ್ರಜ್ಞಾನವನ್ನು ಹೊಂದಿದ್ದು, ದೀರ್ಘ ಕಾಲ ಬಾಳಿಕೆ ಬರುತ್ತದೆ. ಈ ವರ್ಷ ಸುಮಾರು 16,500 ಸೋಲಾರ್ ಬೀದಿ ದೀಪಗಳನ್ನು ಅಳವಡಿಕೆ ಮಾಡುವ ಗುರಿ ಹೊಂದಲಾಗಿದೆ. ಗ್ರಾಮೀಣ ಜನರು ಪ್ರಕಾಶಮಾನ ಬೆಳಕನ್ನು ಪಡೆಯುವುದರೊಂದಿಗೆ ವಿದ್ಯುತ್ ವೆಚ್ಚದ ಮಿತವ್ಯಯದಿಂದ ಗ್ರಾಮ ಪಂಚಾಯತಿಗಳು ಅಭಿವೃದ್ಧಿಯಾಗಲಿದೆ ಎಂದು ಹೇಳಿದ್ದಾರೆ.
ಇತರೆ ವಿಷಯಗಳು:
ಅನ್ನದಾತರಿಗೆ ಬಂಪರ್ ಆಫರ್.!! ಮಿನಿ ಟ್ಯ್ರಾಕ್ಟರ್ ಯೋಜನೆಗೆ ಅರ್ಜಿ ಆಹ್ವಾನ
ಗ್ಯಾರಂಟಿ ಮೂಲಕ ಪ್ರತೀ ಕುಟುಂಬದ ಖಾತೆಗೆ 60,000! ನಿಮಗೆ ಸಿಗ್ತಾ ಇಲ್ವಾ ತಕ್ಷಣ ಹೀಗೆ ಮಾಡಿ