ನಮಸ್ಕಾರ ಕರ್ನಾಟಕ, ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ನಿರಂತರ 3 ದಿನಗಳಿಂದ ಇಳಿಕೆ ಕಂಡುಬಂದಿದೆ. ಇಂದಿನ ಚಿನ್ನದ ಬೆಲೆ ಏನೆಂದು ನಿಮಗೆ ತಿಳಿದಿದೆಯೆ?
ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿರುವುದರಿಂದ ಚಿನ್ನದ ಪ್ರಿಯರಿಗೆ ಶಾಕ್ ಆಗಿತ್ತು. ಚಿನ್ನವನ್ನು ಕೊಳ್ಳಲು ಯೋಚಿಸುತ್ತಿದ್ದವರಿಗೆ ಬೆಲೆ ಹೆಚ್ಚಾದ ಕಾರಣದಿಂದಾಗಿ ಸಂಕಷ್ಟವಾಗಿತ್ತು. ಆದರೆ, ಕೇಂದ್ರ ಬಜೆಟ್ ಮಂಡನೆಯ ನಂತರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆದರೆ, ದ್ರಷ್ಟಿಗೋಚರವಾದ ಬೃಹತ್ ಇಳಿಕೆ ಅಲ್ಲ.
ಬೆಲೆ ಸ್ವಲ್ಪ ಕಡಿಮೆಯಾದರೂ, ಚಿನ್ನದ ಪ್ರಿಯರಿಗೆ ಅದು ನೆಮ್ಮದಿಯ ವಿಷಯವಾಗಿದೆ. ಇಂದಿನ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 95 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 104 ರೂಪಾಯಿ ಕಡಿಮೆಯಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂಗೆ 6,400 ರೂಪಾಯಿ, ಹಾಗೂ 10 ಗ್ರಾಂಗೆ 64,000 ರೂಪಾಯಿ.
ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದ್ದು, ಒಂದು ಗ್ರಾಂಗೆ ₹84.50 ಹಾಗೂ 8 ಗ್ರಾಂಗೆ ₹676. 10 ಗ್ರಾಂ ಬೆಳ್ಳಿ ₹845 ಹಾಗೂ 1 ಕಿಲೋಗ್ರಾಂ ₹84,500. ಹೀಗೆ, ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಪ್ರಮುಖ ಇಳಿಕೆ ಕಂಡುಬಂದಿದೆ. ಇದರಿಂದ ಚಿನ್ನ ಬೆಳ್ಳಿ ಖರೀದಿ ಮಾಡಬೇಕೆಂದುಕೊಂಡವರಿಗೆ ಸಂತೋಷ ತಂದಿದೆ. ಕೇಂದ್ರ ಸರ್ಕಾರ ಬಜೆಟ್ ಮಂಡನೆಯ ಸಂದರ್ಭದಲ್ಲಿ ಚಿನ್ನದ ಮೇಲಿನ ಸುಂಕ ಕಡಿಮೆ ಮಾಡಿದ್ದು, ಇಂದಿನಿಂದ ಜಾರಿಗೆ ಬಂದಿದೆ. ಚಿನ್ನ ಖರೀದಿಗೆ ಉತ್ಸುಕರಾಗಿರುವವರಿಗೆ ಇದು ಉತ್ತಮ ಸೌಕರ್ಯ ನೀಡಿದೆ.
ಸದ್ಯ, ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,415 ರೂಪಾಯಿ, 24 ಕ್ಯಾರೆಟ್ ಚಿನ್ನದ ಬೆಲೆ 6,995 ರೂಪಾಯಿ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,400 ರೂಪಾಯಿ ಹಾಗೂ ಚೆನ್ನೈನಲ್ಲಿ 6,430 ರೂಪಾಯಿ.