ರಾಜ್ಯದ ರೈತರೇ ಗಮನಿಸಿ, ಮೊಬೈಲ್ ಆಪ್ ಮೂಲಕ ಈ ರೀತಿ ಬೆಳೆ ವಿವರ ದಾಖಲಿಸಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರೈತ ಬಾಂಧವರೇ, ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ವಿವರಗಳನ್ನು ಮೊಬೈಲ್ ಆಪ್ ಮೂಲಕ ಸರಳವಾಗಿ ದಾಖಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಈ ಮಾಹಿತಿ ‘ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ 2024-25’ ರಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಈ ಪ್ರಕ್ರಿಯೆಯನ್ನು ಸರಳಗೊಳಿಸಲು, ತಾಲ್ಲೂಕು ಆಡಳಿತವು ತರಬೇತಿ ಹೊಂದಿದ ಖಾಸಗಿ ಸಿಬ್ಬಂದಿಗಳನ್ನು ನೇಮಿಸಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಹಾಗೂ ಬೃಹತ್ ನೀರಾವರಿ ಇಲಾಖೆಗಳ ಸಿಬ್ಬಂದಿಗಳು ರೈತರಿಗೆ ಬೆಳೆ ವಿವರ ದಾಖಲಿಸುವಲ್ಲಿ ಮಾರ್ಗದರ್ಶನ ನೀಡುವರು.

ಆಗಸ್ಟ್ 15 ರಿಂದ ಸೆಪ್ಟೆಂಬರ್ 31 ರವರೆಗೆ, ಬೆಳೆ ವಿವರಗಳನ್ನು ದಾಖಲಿಸದ ರೈತರ ತಾಕುಗಳನ್ನು ಖಾಸಗಿ ಸಿಬ್ಬಂದಿಗಳಿಂದ ಸಮೀಕ್ಷೆ ಮಾಡಲಾಗುವುದು. ಈ ವಿವರಗಳನ್ನು ಸರ್ಕಾರದ ಪ್ರಮುಖ ಯೋಜನೆಗಳಾದ ಕನಿಷ್ಟ ಬೆಂಬಲ ಬೆಲೆ ಯೋಜನೆ, ಬೆಳೆ ವಿಮಾ ಯೋಜನೆ, ಪ್ರಕೃತಿ ವಿಕೋಪದ ಪರಿಹಾರ ವಿತರಣೆಯಂತಹ ಯೋಜನೆಗಳಲ್ಲಿ ಬಳಸಲಾಗುವುದು.

ರೈತರು ಅಥವಾ ಖಾಸಗಿ ಸಿಬ್ಬಂದಿಗಳು ದಾಖಲಿಸಿದ ಬೆಳೆ ವಿವರಗಳನ್ನು, ಪಹಣಿಯಲ್ಲಿ ದಾಖಲಿಸಿ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಮೇಲ್ವಿಚಾರಕರಿಂದ ಪರಿಶೀಲಿಸಲಾಗುವುದು. ಈ ಸಮೀಕ್ಷೆ ಕೃಷಿ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳ ನೇರ ಮೇಲ್ವಿಚಾರಿಕೆಯಲ್ಲಿ ನಡೆಯುವುದು.

ಬೆಳೆ ಸಮೀಕ್ಷೆಯ ವಿವರಗಳ ಬಗ್ಗೆ ಆಕ್ಷೇಪಣೆಗಳಿದ್ದರೆ, ರೈತರು ‘beledarshak’ ಆಪ್ ಮೂಲಕ ಅಥವಾ ಖುದ್ದಾಗಿ ಕೃಷಿ, ತೋಟಗಾರಿಕೆ ಅಥವಾ ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಸಲ್ಲಿಸಲು ಅಕ್ಟೋಬರ್ 15 ರವರೆಗೆ ಸಮಯಾವಕಾಶವಿದೆ.

ಇದೇ ಸಂದರ್ಭದಲ್ಲಿ, ತಿರಸ್ಕರಿಸಿದ ಬೆಳೆ ವಿವರಗಳ ಮರುಸಮೀಕ್ಷೆ ನಡೆಸಲು ಆಪ್ ಬಿಡುಗಡೆ ಆಗಲಿದ್ದು, ಸೂಪರ್‌ವೈಸರ್‌ಗಳು PRs ಆಪ್ ನಲ್ಲಿ ತ್ವರಿತವಾಗಿ ಮರುಸಮೀಕ್ಷೆ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

rtgh