1 ರಿಂದ 15 ವರ್ಷದೊಳಗಿನ ಮಕ್ಕಳ ಪೋಷಕರ ಗಮನಕ್ಕೆ: ಆಧಾರ್ ಕಾರ್ಡ್ ಮಾಡಿಸಲು ಹೊಸ ನಿಯಮ ಜಾರಿ.

ನಮಸ್ಕಾರ ಕರ್ನಾಟಕ, ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಬೇಕಾದರೆ, ಕೆಲವು ಮುಖ್ಯ ನಿಯಮಗಳು ಮತ್ತು ಸೂಚನೆಗಳನ್ನು ತಿಳಿದುಕೊಳ್ಳುವುದು ಅತಿ ಮುಖ್ಯವಾಗಿದೆ. ಇಂದಿನ ಕಾಲದಲ್ಲಿ ಶಾಲೆಗಳ ಪ್ರವೇಶ, ಸರ್ಕಾರದ ಯೋಜನೆಗಳ ಲಾಭ ಅಥವಾ ಉಳಿತಾಯ ಖಾತೆಯ ತೆರವು, ಇವುಗಳಿಗೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಇದು ಒಂದು ಬಹುಮುಖ್ಯ ಗುರುತಿನ ಚೀಟಿಯಾಗಿದೆ, ಇದರಿಂದ ಜನರು ಆನ್ಲೈನ್‌ನಲ್ಲಿ ಅನೇಕ ಕೆಲಸಗಳನ್ನು ಸುಲಭವಾಗಿ ಮಾಡಬಹುದು.

ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಲು ನಿಮಗೆ ಮಕ್ಕಳ ಜನನ ಪ್ರಮಾಣಪತ್ರ, ಆಸ್ಪತ್ರೆಯ ಡಿಸ್ಚಾರ್ಜ್ ಪ್ರಮಾಣಪತ್ರ, ಶಾಲಾ ಗುರುತಿನ ಚೀಟಿ ಅಥವಾ ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಅಥವಾ ಪಾಸ್ಪೋರ್ಟ್ ಅಗತ್ಯವಿರುತ್ತದೆ.

ಆಧಾರ್ ಕಾರ್ಡ್ ಮಾಡಿಸಲು ನೀವು ಮೊದಲಿಗೆ ಮಕ್ಕಳ ಜನನ ಪ್ರಮಾಣಪತ್ರ ಮತ್ತು ಪೋಷಕರ ಗುರುತಿನ ಚೀಟಿಗಳನ್ನು ಸಿದ್ಧಪಡಿಸಬೇಕು. ನಂತರ, ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಬಹುದು. ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವರ ಫೋಟೋ ಮಾತ್ರ ತೆಗೆದುಕೊಳ್ಳಲಾಗುತ್ತದೆ, ಇತರ ಮಾಹಿತಿಯನ್ನು ಪೋಷಕರ ವಿವರಗಳ ಆಧಾರದಿಂದ ಆಧಾರ್ ಕಾರ್ಡ್‌ನಲ್ಲಿ ದಾಖಲಿಸಲಾಗುತ್ತದೆ. 5 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಅವರ ಫೋಟೋ, ಬೆರಳಚ್ಚು ಮತ್ತು ಬಯೋಮೆಟ್ರಿಕ್ ಡೇಟಾ ಅಗತ್ಯವಿರುತ್ತದೆ. 15 ವರ್ಷಗಳ ನಂತರ, ಅವರ ಬಯೋಮೆಟ್ರಿಕ್ ಡೇಟಾವನ್ನು ಮತ್ತೆ ನವೀಕರಿಸಬೇಕು.

ಇತರೆ ವಿಷಯಗಳು :

ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್ ಅಪ್ಡೇಟ್, ಇನ್ಮುಂದೆ ಒಟ್ಟು 1.78 ಲಕ್ಷದ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮಿ ಹಣ.

ಸ್ವಂತ ಮನೆ ಇಲ್ಲದವರಿಗೆ ಸಿಹಿ ಸುದ್ದಿ, 3 ಕೋಟಿ ಹೊಸ ಮನೆಗಳು ಬಿಡುಗಡೆ, ಇಂದೇ ಈ ಕೆಲಸ ಮಾಡಿ ಸ್ವಂತ ಮನೆ ಪಡೆದುಕೊಳ್ಳಿ.

Leave a Reply

Your email address will not be published. Required fields are marked *

rtgh