ಹಲೋ ಸ್ನೇಹಿತರೆ, ರಾಜ್ಯದಲ್ಲಿನ ಕೃಷಿ ನೀರಾವರಿ ಪಂಪ್‍ಸೆಟ್ ಬಳಕೆದಾರರು ತಮ್ಮ ವಿದ್ಯುತ್ ಪಂಪ್‍ಸೆಟ್‍ನ ಆರ್.ಆರ್.ಸಂಖ್ಯೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ 2024-25ನೇ ಸಾಲಿನಲ್ಲಿ ದರ ಪರಿಷ್ಕರಣೆ ಮಾಡುವ ಆದೇಶದ ನಿಟ್ಟಿನಲ್ಲಿ ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡಿದೆ.
ಈ ಕಾರಣಕ್ಕಾಗಿ ಹೆಸ್ಕಾಂಗಳು 10 ಹೆಚ್‌ಪಿ ಪಂಪ್ ಸೆಟ್ ಹೊಂದಿರುವ ರೈತರ ಆಧಾರ್ ಸಂಖ್ಯೆ ಸಂಗ್ರಹ ಮಾಡುತ್ತಿದೆ. ಈಗಾಗಲೇ ಇರುವ ಕೃಷಿ ಪಂಪ್‍ಸೆಟ್‍ನ ವಾರಸುದಾರರು ಮರಣ ಹೊಂದಿದ್ದಲ್ಲಿ ಪ್ರಸ್ತುತ ಪಹಣಿಯಲ್ಲಿರುವ ಕೆಲವು ಮಾಹಿತಿಯನ್ನು ಇಲಾಖೆಗೆ ಕಳುಹಿಸಲಾಗುತ್ತದೆ.
ಮಾಹಿತಿಗಳಾದ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಹಿಂದಿನ ವಾರಸುದಾರರ ಮರಣ ಪ್ರಮಾಣ ಪತ್ರ, ಛಾಪಾಕಾಗದ ಹಾಗೂ ಪಹಣಿಯು ಜಂಟಿ ಖಾತೆಯಾಗಿದ್ದರೆ ಉಳಿದವರ ಒಪ್ಪಿಗೆ ಪತ್ರ, ಕ್ರಯಪತ್ರದ ದಾಖಲೆಯನ್ನು ಸಮೀಪದ ಬೆಸ್ಕಾಂ ಶಾಖಾ ಕಚೇರಿ ಅಥವಾ ಸಂಬಂಧಿಸಿದ ಪವರ್ ಮ್ಯಾನ್ ಅಥವಾ ಮೀಟರ್ ರೀಡರ್‍ಗಳಿಗೆ ಸಲ್ಲಿಸಿ ಪ್ರಸ್ತುತ ಆರ್.ಆರ್.ಸಂಖ್ಯೆಯಲ್ಲಿರುವ ಹೆಸರನ್ನು ಬದಲಾವಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಇತರೆ ವಿಷಯಗಳು:
ಜ್ವರ, ನೋವು, ಅಲರ್ಜಿಗೆ ನೀಡುವ ಈ 156 ಔಷಧಿಗಳ ಮಾರಾಟ ನಿಷೇಧ.!
ಆಯುಷ್ಮಾನ್ ಫಲಾನುಭವಿಗಳಿಗೆ ಗುಡ್ ನ್ಯೂಸ್!ಈಗ ಸಿಗಲಿದೆ ಇನ್ನಷ್ಟು ಹೆಚ್ಚು ವಿಮಾ ರಕ್ಷಣೆ