ಹಲೋ ಸ್ನೇಹಿತರೇ, ಪದವಿ ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ ಈಗ AI ಏರ್‌ಪೋರ್ಟ್ ಸರ್ವೀಸ್ ಲಿಮಿಟೆಡ್ ನಲ್ಲಿ. ಆಸಕ್ತ ನಿರುದ್ಯೋಗಿ ಭಾರತೀಯ ಪ್ರಜೆಗಳು ಕೂಡಲೇ ಅರ್ಜಿ ಸಲ್ಲಿಸಿ. ಮಾಸಿಕ ರೂ.28,000 ವೇತನವನ್ನು ಆರಂಭದಲ್ಲೇ ನೀಡಲಾಗುವುದು. ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಸೀನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ಯಾವುದೇ ಪದವಿ ಪಾಸಾದ ಭಾರತೀಯ ಪ್ರಜೆಗಳಿಂದ ಎಐ ಏರ್‌ಪೋರ್ಟ್ ಸರ್ವೀಸ್ ಲಿಮಿಟೆಡ್ ಮುಂಬೈನಲ್ಲಿ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳನ್ನು ನಿಗದಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದ್ದು, ಹುದ್ದೆಯ ಅವಧಿ 3 ವರ್ಷ ಇರಲಿದೆ. ಆದರೆ ಈ ಹುದ್ದೆಗಳ ಅವಧಿಯನ್ನು ಎಐ ಏರ್‌ಪೋರ್ಟ್ ಸರ್ವೀಸ್ ಲಿಮಿಟೆಡ್ ವಿಸ್ತರಣೆ ಮಾಡುವ ಅವಕಾಶ ಇರುತ್ತದೆ. ಮಾಸಿಕವಾಗಿ ರೂ.28000 ವರೆಗೆ ವೇತನ ನೀಡಲಾಗುತ್ತದೆ. ಯಾವುದೇ ಡಿಗ್ರಿ ಪಾಸಾಗಿ, ಒಂದು ಡೀಸೆಂಟ್ ಜಾಬ್‌ಗಾಗಿ ಸರ್ಚ್ ಮಾಡುತ್ತಿರುವ ನಿರುದ್ಯೋಗಿಗಳು ಈಗಲೇ ಅರ್ಜಿ ಸಲ್ಲಿಸಿ.
- ನೇಮಕಾತಿ ಸಂಸ್ಥೆ – ಎಐ ಏರ್‌ಪೋರ್ಟ್ ಸರ್ವೀಸ್ ಲಿಮಿಟೆಡ್ (ಎಐಎಎಸ್‌ಎಲ್)
- ಹುದ್ದೆಗಳ ಹೆಸರು – ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್
- ಹುದ್ದೆಗಳ ಸಂಖ್ಯೆ – 1049
- ಮಾಸಿಕ ವೇತನ – ರೂ.28000
- ಹುದ್ದೆಯ ವಿಧ – ಗುತ್ತಿಗೆ ಆಧಾರಿತ ಪೋಸ್ಟ್‌ಗಳು
- ಉದ್ಯೋಗ ಸ್ಥಳ – ಮುಂಬೈ
- ಸೀನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ – 343
- ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ – 706
ಹುದ್ದೆವಾರು ಗರಿಷ್ಠ ವಯಸ್ಸಿನ ಅರ್ಹತೆಗಳು
ಸೀನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ / 33 ವರ್ಷಗಳು
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ / 28 ವರ್ಷಗಳು
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು 3 ವರ್ಷ ವಯಸ್ಸಿನ ಸಡಿಲಿಕೆ ಅನ್ವಯವಾಗಲಿದೆ. ಎಸ್‌ಸಿ / ಎಸ್‌ಟಿ ಕೆಟಗರಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ವಿದ್ಯಾರ್ಹತೆ
- ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳಿಂದ ಯಾವುದೇ ವಿಷಯದಲ್ಲಿ ಪದವಿ ಪಾಸ್ ಮಾಡಿರಬೇಕು.
- ಜತೆಗೆ ಕಂಪ್ಯೂಟರ್ ಬಳಕೆಯ ಜ್ಞಾನ ಹೊಂದಿರಬೇಕು.
- ಹಿಂದಿ ಜತೆಗೆ ಇಂಗ್ಲಿಷ್ ಮಾತನಾಡುವ, ಬರೆಯುವ ಕೌಶಲ ಇರುವವರಿಗೆ ಆಧ್ಯತೆ ನೀಡಲಾಗುತ್ತದೆ.
- ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಏರ್‌ಲೈನ್ / ಜಿಹೆಚ್‌ಎ / ಕಾರ್ಗೊ / ಏರ್‌ಲೈನ್ ಟಿಕೆಟಿಂಗ್ ಎಕ್ಸ್‌ಪೀರಿಯನ್ಸ್ ಅಥವಾ ಏರ್‌ಲೈನ್ ಡಿಪ್ಲೊಮ ಅಥವಾ ಸರ್ಟಿಫೈಡ್ ಕೋರ್ಸ್ ಗಳಾದ ಡಿಪ್ಲೊಮ ಇನ್ IATA-UFTAA ಅಥವಾ IATA-FIATA ಅಥವಾ IATA-DGR ಅಥವಾ IATA CARGO ಕೋರ್ಸ್‌ಗಳನ್ನು ಪಡೆದಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಹುದ್ದೆವಾರು ಮಾಸಿಕ ವೇತನ ವಿವರ
ಸೀನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ / Rs.28,605.
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ / Rs.27,450.
ಅರ್ಜಿ ಸಲ್ಲಿಸುವುದು ಹೇಗೆ?
ಮೇಲೆ ತಿಳಿಸಿದ ಅರ್ಹತೆಗಳನ್ನು ಜುಲೈ 01ಕ್ಕೆ ಸರಿಯಾಗಿ ಹೊಂದಿರುವ ಅಭ್ಯರ್ಥಿಗಳು ಗೂಗಲ್ ಫಾರ್ಮ್ ಲಿಂಕ್ https://forms.gle/S5rQCeWWZbz9Qewt8 ಗೆ ಭೇಟಿ ನೀಡಿ, ಕೇಳಲಾದ ಮಾಹಿತಿಗಳನ್ನು ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 01-07-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 14-07-2024
ಅರ್ಜಿ ಸಲ್ಲಿಸಲು ದಾಖಲೆಗಳು
- ಆಧಾರ್ ಕಾರ್ಡ್
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
- ಹುದ್ದೆಗೆ ನಿಗದಿತ ವಿದ್ಯಾರ್ಹತೆ – ಪದವಿ ಪ್ರಮಾಣಪತ್ರ
- ಕಾರ್ಯಾನುಭವದ ಪ್ರಮಾಣ ಪತ್ರಗಳು
- ಜನ್ಮ ದಿನಾಂಕ ಪ್ರಮಾಣ ಪತ್ರ
- ಇ-ಮೇಲ್ ವಿಳಾಸ
- ಮೊಬೈಲ್ ನಂಬರ್
- ಪಾಸ್‌ಪೋರ್ಟ್ ಅಳತೆ ಭಾವಚಿತ್ರ
- ಪಾನ್ ನಂಬರ್
- ಇತರೆ ಬೇಸಿಕ್ ವಿವರಗಳು
ಹುದ್ದೆಗಳ ಕುರಿತ ಇತರೆ ಹೆಚ್ಚಿನ ಮಾಹಿತಿಗಳು, ಆಯ್ಕೆ ವಿಧಾನ ತಿಳಿಯಲು ಎಐ ಏರ್‌ಪೋರ್ಟ್ ಸರ್ವೀಸ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್ ವಿಳಾಸ http://www.aiasl.in/ ಗೆ ಭೇಟಿ ನೀಡಿ ಅಧಿಸೂಚನೆ ಓದಿರಿ.
ಇತರೆ ವಿಷಯಗಳು :
SCDCC Bank jobs: ಸಹಕಾರಿ ಬ್ಯಾಂಕ್‌ನಲ್ಲಿ ಒಟ್ಟು 123 ಹುದ್ದೆಗಳ ನೇಮಕ, ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ.