ರೈತರ ಜಮೀನ ಪಕ್ಕಾ-ಪೋಡಿ!! ಸೆ. 2ರಿಂದ ಅಭಿಯಾನ ಶುರು!

ಸೆಪ್ಟೆಂಬರ್ 2ರಿಂದ ಪೋಡಿ ದುರಸ್ತಿಯ ಅಭಿಯಾನವನ್ನು ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಇದರಿಂದಾಗಿ 10 ಲಕ್ಷ ರೈತರ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವು ಸಿಗುವ ನಿರೀಕ್ಷೆ ಕೂಡ ಇದೆ.

Akrama Sakrama Scheme

ವಿಕಾಸಸೌಧದಲ್ಲಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತಹಶೀಲ್ದಾರ್, ಜಿಲ್ಲಾಧಿಕಾರಿಗಳು, ಮತ್ತಿತರ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಸಚಿವರು, ರಾಜ್ಯಾದ್ಯಂತ ಅಭಿಯಾನದ ಮಾದರಿಯಲ್ಲಿ ಸೆಪ್ಟೆಂಬರ್ 2 ರಿಂದ ನಮೂನೆಯನ್ನು ಒಂದರಿಂದ ಐದರವರೆಗೆ ಪೋಡಿಯ ದುರಸ್ತಿಯನ್ನು ನಿರ್ವಹಿಸಬೇಕು ಎಂದು ಮಾಹಿತಿಯನ್ನು ತಿಳಿಸಿದ್ದಾರೆ.

ಅಕ್ರಮ -ಸಕ್ರಮದಡಿ ಮಂಜೂರಾಗಿದ್ದರೂ, ದಶಕಗಳಿಂದ ಪೋಡಿ ದುರಸ್ತಿಯು ಬಾಕಿಯಿದ್ದು, ಲಕ್ಷಾಂತರ ರೈತರು ವರ್ಷದಿಂದ ಪ್ರಯತ್ನಿಸುತ್ತಿದ್ದರೂ ಕೆಲವರ ಜಮೀನುಗಳು ಮಾತ್ರ ಪೋಡಿ ದುರಸ್ತಿಯಾಗಿದೆ. ಇದರಿಂದಾಗಿ ಹಲವು ರೈತರು ತೊಂದರೆಗೊಳಗಾಗಿದ್ದಾರೆ. ಸೆಪ್ಟೆಂಬರ್ 2ರಿಂದ ಅಭಿಯಾನದ ಮಾದರಿಯಲ್ಲಿ ಒಂದರಿಂದ 5 ನಮೂನೆಯನ್ನು ಪೋಡಿಯ ದುರಸ್ತಿಯ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳದ್ದಾರೆ.

ಮಂಜೂರಾದ ಜಮೀನಿಗೆ ಪೋಡಿಯಾಗದೆ ಇರುವ ಕಾರಣ RTC ಯು ಇಲ್ಲದಂತಾಗಿದ್ದು, ರೈತರಿಗೆ ತೊಂದರೆಯಾಗಿದೆ. ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯಂತೆ ಸಮಸ್ಯೆಗೆ ಶಾಶ್ವತವಾದ ಪರಿಹಾರಕ್ಕೆ ಕ್ರಮವನ್ನು ವಹಿಸಲಾಗಿದೆ. ಸಮಸ್ಯೆಯನ್ನು ಮುಕ್ತ ಪೋಡಿ ದುರಸ್ತಿಗೆ ನಮೂನೆಯ ಒಂದರಿಂದ ಐದರ ಕಡತಗಳನ್ನು ಡಿಜಿಟಲ್ ಕಡತಗಳನ್ನಾಗಿ ತಯಾರಿಸಲಾಗುತ್ತದೆ. ಡಿಜಿಟಲ್ ಆ್ಯಪ್ ನಿಂದ ಸರಳ ವೇಗ & ಪಾರದರ್ಶಕವಾಗಿ ಮೂಲ ಮಂಜೂರಿಯನ್ನು ದಾಖಲೆಗಳನ್ನು ಸುರಕ್ಷಿತವಾಗಿಡಬಹುದು ಎಂದು ಹೇಳಲಾಗಿದೆ.

ಇಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ! ಬ್ಯಾಂಕಿಂಗ್ ಸೇವೆಗಳು ಏನಿರತ್ತೆ? ಏನಿರಲ್ಲ

ರಾಜ್ಯಾದ್ಯಂತ 5 ದಿನ ಗಾಳಿ, ಮಳೆ! ಮೀನುಗಾರರಿಗೆ ವಿಶೇಷ ಸೂಚನೆ

Leave a Reply

Your email address will not be published. Required fields are marked *

rtgh