ಹಲೋ ಸ್ನೇಹಿತರೆ, ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕಾರ್ಡುದಾರರಿಗೆ ಪ್ರಸ್ತುತ ನಗದು ಅಥವಾ ಅಕ್ಕಿ ನೀಡುವುದನ್ನು ಬದಲಿಸಿ ಬೇಳೆಕಾಳುಗಳು, ಸಕ್ಕರೆ ಅಥವಾ ಅಡುಗೆ ಎಣ್ಣೆಯನ್ನು ವಿತರಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಘೋಷಿಸಿದರು. ಇತ್ತೀಚಿನ ಸಮೀಕ್ಷೆಯ ಪ್ರಕಾರ 93% ಬಿಪಿಎಲ್ ಕಾರ್ಡು ಬಳಕೆದಾರರು ನಗದುಗಿಂತ ಈ ಅಗತ್ಯ ವಸ್ತುಗಳನ್ನು ಪಡೆಯಲು ಆದ್ಯತೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗಿದ್ದು, ಅನ್ನಭಾಗ್ಯದ ಯೋಜನೆಯ 5 ಕೆಜಿ ಅಕ್ಕಿಗೆ ನೀಡುತ್ತಿದ್ದ ಹಣದ ಬದಲು ತೊಗರಿಬೇಳೆ, ಸಕ್ಕರೆ, ತಾಳೆ ಎಣ್ಣೆ ಹಾಗೂ ಅಯೋಡೈಸ್ಡ್ ಉಪ್ಪು ನೀಡಲು ಚಿಂತನೆ ನಡೆಸಿದೆ.
ಇದನ್ನು ಓದಿ: ಇಂದಿನಿಂದ ‘ಇ-ಶ್ರಮ್ ಕಾರ್ಡ್’ ಮಾಡಿಸಿದವರಿಗೆ ಸಿಗಲಿದೆ ಈ ಎಲ್ಲಾ ಸೌಲಭ್ಯ.!
ಈ ಅಗತ್ಯ ವಸ್ತುಗಳನ್ನು ನೀಡಲು ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಿದೆ. ಹಣಕಾಸು ಅನುಮೋದನೆಗಾಗಿ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಪಡಿತರ ಚೀಟಿ ಇರುವವರಿಗೆ ತಲಾ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಅಕ್ಕಿ ಪೂರೈಕೆ ಕೊರತೆಯಿಂದಾಗಿ 5 ಕೆಜಿ ಅಕ್ಕಿ ಕೊಟ್ಟು ಉಳಿದ 5 ಕೆಜಿಗೆ ಹಣ ಪಾವತಿಸುತ್ತಿತ್ತು. ಇದಕ್ಕೆ ಸರ್ಕಾರ ಪ್ರತಿ ತಿಂಗಳು ಬರೋಬ್ಬರಿ 700 ಕೋಟಿ ರೂ. ಅಧಿಕ ಹಣ ಭರಿಸಬೇಕಾಗುತಿತ್ತು. ಈಗಾಗಲೇ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡಲಾಗುತ್ತಿದೆ. ಇದೀಗ ಅನ್ನಭಾಗ್ಯದ ಹಣದ ಬದಲು ಇತರೆ ದಿನಸಿ ಪದಾರ್ಥಗಳನ್ನು ನೀಡಲು ನಿರ್ಧಾರ ಕೈಗೊಂಡಿದೆ.
ಇತರೆ ವಿಷಯಗಳು:
ಜ್ವರ, ನೋವು, ಅಲರ್ಜಿಗೆ ನೀಡುವ ಈ 156 ಔಷಧಿಗಳ ಮಾರಾಟ ನಿಷೇಧ.!
ಆಯುಷ್ಮಾನ್ ಫಲಾನುಭವಿಗಳಿಗೆ ಗುಡ್ ನ್ಯೂಸ್!ಈಗ ಸಿಗಲಿದೆ ಇನ್ನಷ್ಟು ಹೆಚ್ಚು ವಿಮಾ ರಕ್ಷಣೆ