ಹಲೋ ಸ್ನೇಹಿತರೆ, ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ಕೌನ್ಸೆಲಿಂಗ್ ಮೂಲಕ ನೇಮಕ ಮಾಡಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಆಗಸ್ಟ್ 31 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಹೇಗೆ ಅರ್ಜಿ ಸಲ್ಲಿಸುವುದು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಕಳೆದ ವರ್ಷ ಕಾರ್ಯ ನಿರ್ವಹಿಸಿದ ಅಭ್ಯರ್ಥಿಗಳು ಆಯಾ ಕಾಲೇಜಿನಲ್ಲಿಯೇ ಮತ್ತೆ ಉಪನ್ಯಾಸಕರಾಗಿ ಮುಂದುವರೆಯಲು ಬಯಸಿದಲ್ಲಿ ಕೌನ್ಸೆಲಿಂಗ್ ನಡೆಸದೆ ಮುಂದುವರಿಸಲು ಅವಕಾಶ ನೀಡುವಂತೆ ನಿರ್ದೇಶನ ನೀಡಲಾಗಿದೆ. ಅಂತಹ ಅಭ್ಯರ್ಥಿಗಳು ಕಂಟಿನ್ಯೂಷನ್ ಆಪ್ಷನ್ ಆಯ್ಕೆ ಮಾಡುವ ಸಂಬಂಧಿಸಿದ ಕಾಲೇಜು ಪ್ರಾಂಶುಪಾಲರಿಂದ ಕಾರ್ಯಭಾರ ಮಾಹಿತಿ ಪಡೆದುಕೊಳ್ಳುವಂತೆ ಮಾಹಿತಿ ತಿಳಿಸಿದ್ದಾರೆ.
ಸೆಪ್ಟಂಬರ್ 7 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಸೆಪ್ಟೆಂಬರ್ 8ರಂದು ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗುವುದು. ಸೆ. 9 ಮತ್ತು 10 ರಂದು ಅರ್ಜಿ ತಿದ್ದುಪಡಿಗೆ ಮಾಡಲು ಅವಕಾಶ ನೀಡಲಾಗಿದೆ. ಸೆ. 11ರಂದು ಕಾರ್ಯಭಾರ ಪ್ರಕಟಿಸಲಿದ್ದು, ಸೆ. 17 ರಂದು ಮೆರಿಟ್ ಪಟ್ಟಿ ಅನ್ವಯ ಕಾಲೇಜುಗಳಲ್ಲಿ ಕೌನ್ಸೆಲಿಂಗ್ ನಡೆಸಲಾಗುವುದು.
ಇದನ್ನು ಓದಿ: ಅಕ್ಟೋಬರ್ 1 ರಿಂದ ಸಣ್ಣ ಉಳಿತಾಯ ಯೋಜನೆಗಳಿಗೆ ಹೊಸ ನಿಯಮ ಜಾರಿ.!
ಮೊದಲನೇ ಸುತ್ತಿನ ಕೌನ್ಸೆಲಿಂಗ್ ಮುಗಿದ ನಂತರವೂ ಉಳಿದ ಹುದ್ದೆಗಳಿಗೆ ಮುಂದಿನ ಸುತ್ತಿನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಯುಜಿಸಿ ನಿಗದಿ ಮಾಡಿದ ವಿದ್ಯಾರ್ಹತೆ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಸೇವಾವಧಿ ಮತ್ತು ವಿದ್ಯಾರ್ಹತೆಗೆ ತಕ್ಕಂತೆ ಗೌರವಧನ ನಿಗದಿಪಡಿಸಬೇಕು. ಕನಿಷ್ಠ 31 ಸಾವಿರ ರೂ.ಗಳಿಂದ ಗರಿಷ್ಠ 40 ಸಾವಿರ ರೂಪಾಯಿವರೆಗೆ ಗೌರವಧನ ನೀಡಲಾಗುವುದು.
ಕಲಾ, ವಾಣಿಜ್ಯ, ಭಾಷಾ ವಿಷಯಗಳು ಗರಿಷ್ಠ 15 ಗಂಟೆಗಳು, ವಿಜ್ಞಾನ ವಿಷಯ ಪ್ರಾಯೋಗಿಕ ತರಗತಿಗಳಿರುವ ವಿಷಯಗಳಿಗೆ ಗರಿಷ್ಠ 19 ಗಂಟೆಗಳ ಕಾರ್ಯಾಭಾರ ಹಂಚಿಕೆ ಮಾಡಲಾಗುತ್ತದೆ. ನಿಗದಿತ ಅವಧಿಗಿಂತ ಕಡಿಮೆ ಕಾರ್ಯಭಾರ ಇದ್ದಲ್ಲಿ ಗಂಟೆಗಳ ಆಧಾರದ ಮೇಲೆ ಅದಕ್ಕೆ ಅನುಗುಣವಾಗಿ ಗೌರವಧನ ಪರಿಗಣಿಸಬೇಕೆಂದು ಹೇಳಲಾಗಿದೆ.
ಇತರೆ ವಿಷಯಗಳು:
ಎಲ್ಲಾ ಶಾಲೆ ಕಾಲೇಜುಗಳಿಗೆ 7 ದಿನ ರಜೆ! ಪಟ್ಟಿ ಚೆಕ್ ಮಾಡಿ
ಇಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ! ಬ್ಯಾಂಕಿಂಗ್ ಸೇವೆಗಳು ಏನಿರತ್ತೆ? ಏನಿರಲ್ಲ