ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್, ಸಿಗಲ್ಲಿದೆ ಪ್ರತಿ ತಿಂಗಳು ₹5,000/- ರೂಪಾಯಿ ಪೆನ್ಷನ್, ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರವು ವಯೋವೃದ್ದರಿಗೆ ಅನೇಕ ರೀತಿಯ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಿರಿಯ ನಾಗರಿಕರಿಗೆ ಹಲವು ರೀತಿಯ ಪೆನ್ಷನ್ ಯೋಜನೆಗಳು ಜಾರಿಯಲ್ಲಿವೆ. ಕೇಂದ್ರ ಸರಕಾರವು ಜಾರಿಗೆ ತಂದ ವಿವಿಧ ಪಿಂಚಣಿ ಯೋಜನೆಗಳಲ್ಲಿ ₹5,000/- ರೂಪಾಯಿ ಪಿಂಚಣಿ ಯೋಜನೆ ಕೂಡ ಒಂದು. ಈ ಪಿಂಚಣಿ ಯೋಜನೆಯಲ್ಲಿ ಅರ್ಹ ಪಿಂಚಣಿದಾರರು ಪ್ರತಿ ತಿಂಗಳು ₹5,000/- ರೂಪಾಯಿ ಹಣವನ್ನು ಪಡೆಯಬಹುದು. ಏನಿದು ಯೋಜನೆ.? ಹಾಗು ಈ ಪಿಂಚಣಿ ಯೋಜನೆಗೆ ಹೇಗೆ ಅರ್ಜಿಯನ್ನು ಸಲ್ಲಿಸುವುದು.? ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಅಟಲ್ ಪಿಂಚಣಿ ಯೋಜನೆ (Atal Pension Yojana) :- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಅಟಲ್ ಪಿಂಚಣಿ ಯೋಜನೆ (Atal Pension Yojana)ಯನ್ನು ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ವೃದ್ಯಾಪದಲ್ಲಿ ಅವರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು.

ಈ ಅಟಲ್ ಪಿಂಚಣಿ ಯೋಜನೆ (Atal Pension Yojana)ಯು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ವೃದ್ಯಾಪ್ಯದಲ್ಲಿ ವಿಮೆಯ ರೂಪದಲ್ಲಿ ಅವರಿಗೆ ಕೆಲಸ ಮಾಡುತ್ತದೆ. ಸಣ್ಣ ಸಣ್ಣ ವ್ಯಾಪಾರಿಗಳು ಹಾಗೂ ಸಣ್ಣ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ, ಈ ಅಟಲ್ ಪಿಂಚಣಿ ಯೋಜನೆ (Atal Pension Yojana)ಯ ಸೌಲಭ್ಯವನ್ನು ಪಡೆಯಬಹುದಾಗಿದೆ.

ಅಟಲ್ ಪಿಂಚಣಿ ಯೋಜನೆಯ ನಿಯಮಗಳೇನು.?

ಈ ಅಟಲ್ ಪಿಂಚಣಿ ಯೋಜನೆಯಲ್ಲಿ (Atal Pension Yojana) ನೀವು ಪ್ರತೀ ತಿಂಗಳು ಹಣವನ್ನು ಹೂಡಿಕೆ ಮಾಡಬೇಕು. ನೀವು ಹೂಡಿಕೆಯನ್ನು ಮಾಡಬಹುದಾದ ಕನಿಷ್ಠ ಪ್ರೀಮಿಯಂ ಮೊತ್ತ ₹210/- ರೂಪಾಯಿ ಹಣವನ್ನು ನೀವು ಹೂಡಿಕೆ ಮಾಡಿದರೆ, ಈ ಅಟಲ್ ಪಿಂಚಣಿ ಯೋಜನೆ (Atal Pension Yojana)ಯ ಮೂಲಕ ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಹಣವನ್ನು ನೀವು ಪಡೆಯಲಿದ್ದು, ಕಾರ್ಮಿಕರು ವರ್ಷಕ್ಕೆ ಒಟ್ಟು ₹60,000/- ರೂಪಾಯಿ ಪಿಂಚಣಿ ಹಣ ಪಡೆಯಬಹುದು.

ಈ ಅಟಲ್ ಪಿಂಚಣಿ ಯೋಜನೆಗೆ (Atal Pension Yojana) 18ನೇ ವಯಸ್ಸಿನಿಂದ 60 ವಯಸ್ಸಿನವರೆಗೆ ಪ್ರತಿ ತಿಂಗಳು ₹210/- ರೂಪಾಯಿ ಹಣವನ್ನು ನೀವು ಹೂಡಿಕೆ ಮಾಡುತ್ತಾ ಬಂದಿದ್ದರೆ, ನಿಮಗೆ ಪ್ರತಿ ತಿಂಗಳು ₹5,000/- ರೂಪಾಯಿಯನ್ನು ನೀವು ಪಡೆಯಬಹುದು. ಈ ಪಿಂಚಣಿ ಯೋಜನೆಯಲ್ಲಿ ತ್ರೈಮಾಸಿಕವಾಗಿ ಕೂಡ ನೀವು ಹಣವನ್ನ ಹೂಡಿಕೆಯನ್ನು ಮಾಡಬಹುದು. ಅಂದರೆ ತೈಮಾಸಿಕ ₹626/- ರೂಪಾಯಿ ಹಣವನ್ನು ನೀವು ಹೂಡಿಕೆ ಮಾಡಬೇಕು.

ಈ ಅಟಲ್ ಪಿಂಚಣಿ ಯೋಜನೆ (Atal Pension Yojana)ಯ ಅಡಿಯಲ್ಲಿ ಅರ್ಧ ವಾರ್ಷಿಕವಾಗಿಯೂ ಕೂಡ ನೀವು ಹಣವನ್ನ ಹೂಡಿಕೆ ಮಾಡುವ ಅವಕಾಶ ಕೂಡ ಇರುತ್ತದೆ. ಅಂದರೆ ನೀವು ವರ್ಷಕ್ಕೆ ಎರಡು ಬಾರಿ ₹1,239/- ರೂಪಾಯಿ ಹಣವನ್ನ ಪಾವತಿಸಬೇಕು. ನೀವೇನಾದರೂ 18ನೇ ವಯಸ್ಸಿನಿಂದ ಹಿಡಿದು 60 ವರ್ಷಗಳ ತನಕ ಪ್ರತಿ ತಿಂಗಳು ₹42/- ರೂಪಾಯಿಯನ್ನು ಹೂಡಿಕೆ ಮಾಡುತ್ತಾ ಬರುತ್ತಿದ್ದರೆ,ನಿಮಗೆ ವೃದ್ಯಾಪದಲ್ಲಿ ತಿಂಗಳಿಗೆ ₹1,000/- ರೂಪಾಯಿ ಹಣವನ್ನ ಪಡೆಯಬಹುದು.

ಈ ಅಟಲ್ ಪಿಂಚಣಿ ಯೋಜನೆ (Atal Pension Yojana)ಯಲ್ಲಿ ನಿಮಗೆ ಅನುಕೂಲ ಆಗುವಂತೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.ನೀವು ವೃದ್ಯಪದಲ್ಲಿ ತಿಂಗಳಿಗೆ ಒಂದು ಸಾವಿರ ಅಥಾವ ಎರಡು ಸಾವಿರ ಮೂರು ಸಾವಿರ ನಾಲ್ಕು ಸಾವಿರ ಮತ್ತು ಐದು ಸಾವಿರ ರೂಪಾಯಿಯನ್ನು ಪಡೆಯುವ ಆಯ್ಕೆಗಳಿವೆ.ನಿಮಗೆ ಯಾವುದು ಉತ್ತಮ ಅನಿಸುತ್ತದೆಯೋ ಅದನ್ನು ನೀವು ಹೂಡಿಕೆ ಆರಂಭ ಮಾಡಿ ಲಾಭ ಪಡೆಯಿರಿ.

ಏನೆಲ್ಲಾ ಅರ್ಹತೆಗಳಿರಬೇಕು.?

ಈ ಅಟಲ್ ಪಿಂಚಣಿ ಯೋಜನೆಗೆ (Atal Pension Yojana) ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 40 ವರ್ಷ ಒಳಗೆ ಹೊಂದಿರಬೇಕು.
ಈ ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣವಾದ ಸೌಲಭ್ಯವನ್ನು ನೀವು ಪಡೆಯಲು ನಿವು 60 ವರ್ಷಗಳವರೆಗೆ ಹೂಡಿಕೆಯನ್ನು ಮಾಡಬೇಕು.
ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳು ಹಣವನ್ನು ಆಟೋ ಡೆಬಿಟ್ ಆಗುವ ಹಾಗೆ ನೋಡಿಕೊಳ್ಳಬೇಕು. ನೀವು ಈ ಯೋಜನೆಗೆ ಸೇರಿದ ನಂತರ ಅರ್ಧವಾರ್ಷಿಕ ಹಾಗೂ ತ್ರೈಮಾಸಿಕ ರೀತಿಯಾಗಿ ನೀವು ಹೂಡಿಕೆ ಮಾಡಬಹುದು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್ ಅಪ್ಡೇಟ್, ಇನ್ಮುಂದೆ ಒಟ್ಟು 1.78 ಲಕ್ಷದ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮಿ ಹಣ.

ಸ್ವಂತ ಮನೆ ಇಲ್ಲದವರಿಗೆ ಸಿಹಿ ಸುದ್ದಿ, 3 ಕೋಟಿ ಹೊಸ ಮನೆಗಳು ಬಿಡುಗಡೆ, ಇಂದೇ ಈ ಕೆಲಸ ಮಾಡಿ ಸ್ವಂತ ಮನೆ ಪಡೆದುಕೊಳ್ಳಿ.

ಮತ್ತೆ ಕುಸಿದ ಚಿನ್ನ ಬೆಳ್ಳಿಯ ಬೆಲೆ, ಇಂದು ಚಿನ್ನದ ಬೆಲೆ ಎಷ್ಟು?

Leave a Reply

Your email address will not be published. Required fields are marked *

rtgh