ಹಲೋ ಸ್ನೇಹಿತರೇ, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವ ದೃಷ್ಟಿಯಿಂದ ಅಂದಿನ ಬಿಜೆಪಿ ಸರ್ಕಾರ ಭಾಗ್ಯಲಕ್ಷೀ ಯೋಜನೆಯನ್ನು ಜಾರಿಗೆ ತಂದಿತು. 2006ರಿಂದ ಆರಂಭವಾಗಿರುವ ಈ ಯೋಜನೆಯ ಮೊತ್ತವು ಕೆಲವು ಫಲಾನುಭವಿಗಳ ಕೈ ಸೇರುವ ಸಮಯ ಸಮೀಪಿಸುತ್ತಿದೆ ಎಂದು ತಿಲಿಸಿದ್ದಾರೆ.

ಬಾಂಡ್ ಮೆಚ್ಯುರಿಟಿ ಆದ ಬಗ್ಗೆ ಲೆಕ್ಕಚಾರ ಆರಂಭವಾಗಿದೆ. ಈ ವಿಷಯದ ಬಗ್ಗೆ ಸ್ವತಃ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ರವರೆ ಈಗಾಗಲೇ ಸ್ಪಷ್ಟನೆಯನ್ನು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಲಕ್ಷ್ಮಿ ಹೆಬ್ಬಳ್ಕರ್ ರವರು, ‘ಮುಂಚೆ ಅವರು ಭಾಗ್ಯಲಕ್ಷೀ ಅಂತಾ ಘೋಷಣೆಯನ್ನು ಮಾಡಿದ್ದರು. ಆದ್ರೆ ಇದೀಗ ಸುಕನ್ಯ ಸಮೃದ್ಧಿ ಯೋಜನೆ ಎಂದು ಬದಲಾಗಿದೆ. ಆ ಹೆಸರು ಬದಲಾಗಿದೆ. ಮೊದಲು LIC ಅವರು ಇದನ್ನು ಮಾಡುತ್ತಿದ್ದರು. ಭಾಗ್ಯಲಕ್ಷೀ ಬಾಂಡ್ ಎಂದು LIC ಅವರು ಕೊಡುತ್ತಿದ್ದರು. ಆದ್ರೆ ಈಗ ನಾವು ಪೋಸ್ಟ್ ಆಫೀಸ್‌ನಲ್ಲಿ ಒಂದು ಹೆಣ್ಣು ಮಗು ಜನಿಸಿದ ದಿನದಿಂದ ಹದಿನೆಂಟು ವರ್ಷದ ವರೆಗೆ ವರ್ಷಕ್ಕೆ ಇಂತಿಷ್ಟು ಎಂದು ಹಣವನ್ನು ಹಾಕುತ್ತೇವೆ’ ಎಂದರು.
‘ಭಾಗ್ಯಲಕ್ಷೀ ಯೋಜನೆಯೇ ಸುಕನ್ಯ ಸಮೃದ್ಧಿ ಯೋಜನೆ ಅಂತಾ ಹೆಸರು ಬದಲಾಗಿದೆ. ಮೊದಲು ಎಲ್‌ಐಸಿ ಅವರು ಬಾಂಡ್ ಕೊಡುತ್ತಿದ್ದರು. ಈಗ ಪೋಸ್ಟ್ ಆಫೀಸ್‌ನಲ್ಲಿ ಈ ಯೋಜನೆ ಮಾಡಲಾಗುತ್ತಿದೆ.
ಇನ್ನು ಓದಿ: ಗಣೇಶ ಹಬ್ಬದಂದೇ ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ!
ಮಗುವಿನ 21ನೇ ವಯಸ್ಸಿಗೆ ಹಣ ಕೊಡುತ್ತೇವೆ. ಒಂದು ವೇಳೆ ಆ ಮಗುವಿಗೆ ವಿದ್ಯಾಭ್ಯಾಸಕ್ಕೆ ಬೇಕು ಅಂದ್ರೆ 19 ವರ್ಷಕ್ಕೆ ಒಂದುವರೆ ಲಕ್ಷ ರೂಪಾಯಿ ಹಣವನ್ನು ಕೊಡುತ್ತೇವೆ. ಇಲ್ಲಾವಾದರೆ 21ನೇ ವಯಸ್ಸಿಗೆ ಒಂದು ಲಕ್ಷದ ಎಂಬತ್ತು ಸಾವಿರದವರೆಗೂ ಆಗುತ್ತದೆ. ಅದನ್ನು ಕೊಡುತ್ತೇವೆ’ ಎಂದು ಹೇಳಿದರು.
‘ನಾನು ಈಗಾಗಲೇ ಎರಡು ಲಕ್ಷ ಮೌಲ್ಯದ ಹಣವನ್ನು ನೀಡುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡೆ. ಯಾರ್ಯಾರದು ಈಗಾಗಲೇ ಭಾಗ್ಯಲಕ್ಷೀ ಬಾಂಡ್ ಮೆಚ್ಯುರಿಟಿ ಆಗಿದೆ ಅವರ ಹಣವನ್ನು ಲೆಕ್ಕಚಾರ ಮಾಡಿ ನೀಡಲು ನಮ್ಮ ಅಧಿಕಾರಿಗಳು ಸನ್ನದ್ಧರಾಗುತ್ತಿದ್ದಾರೆ. ಸರ್ಕಾರದ ಈ ಯೋಜನೆಯು ಖಂಡಿತಾ ಫಲಾನುಭವಿಗಳಿಗೆ ಸಿಗುವಂತೆ ನಾವು ಮಾಡುತ್ತೇವೆ’ ಎಂದು ಭರವಸೆಯನ್ನು ನೀಡಿದ್ದಾರೆ.
‘ಸರ್ಕಾರದಿಂದ ಅನೇಕ ಜನಪರ ಯೋಜನೆಗಳು ಬರುತ್ತದೆ. ಅದರ ಲಾಭವನ್ನು ಪಡೆದುಕೊಳ್ಳಿ. ಜೀವನಕ್ಕೆ ಅದರಿಂದ ಸಿಗುವಂತಹ ಉಪಯೋಗವನ್ನು ಪಡೆದುಕೊಳ್ಳಿ ಎಂದು ಜನರಿಗೆ ಕರೆಯನ್ನು ನೀಡಿದ ಸಚಿವರು, ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದ್ರೆ ಕೆಲವು ಪ್ರಮುಖ ಯೋಜನೆಗಳು, ಜನ ಸಾಮಾನ್ಯರ ಯೋಜನೆಗಳು ಉಳಿಯುತ್ತವೆ. ಇದನ್ನೇ ನಾವು ಮೈಲುಗಲ್ಲು ಎನ್ನುತ್ತೇವೆ’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಇತರೆ ವಿಷಯಗಳು:
ದ್ಯೋಗಾಕಾಂಕ್ಷಿಗಳಿಗೆ `ಪ್ಲಿಪ್ ಕಾರ್ಟ್’ ನಿಂದ 1 ಲಕ್ಷ ಉದ್ಯೋಗ ಸೃಷ್ಟಿ!
ನಿರುದ್ಯೋಗಿಗಳಿಗೆ ಸಂತಸದ ಸುದ್ದಿ.!! ಕೇಂದ್ರದ ಈ ಯೋಜನೆಗೆ ಅರ್ಜಿ ಆಹ್ವಾನ