ನಿರುದ್ಯೋಗ ಯುವಕರಿಗೆ ಗುಡ್ ನ್ಯೂಸ್, ಸ್ವಯಂ ಉದ್ಯೋಗ ಆರಂಭಿಸಲು 30,000 ಸಹಾಯಧನ.

ನಮಸ್ಕಾರ ಕರ್ನಾಟಕ, ಹಿಂದುಳಿದ ವರ್ಗದ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಆರಂಭಿಸಲು ಬೆಂಬಲದ ರೂಪವಾಗಿ ವಿವಿಧ ನಿಗಮಗಳು ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಒದಗಿಸುತ್ತಿವೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಫಲಾನುಭವಿಗಳಿಗೆ ದೊರೆಯುವ ನೆರವಿನ ವಿವರ:

ಸ್ವಯಂ ಉದ್ಯೋಗ ಆರಂಭಿಸಲು ಘಟಕದ ವೆಚ್ಚ 1 ಲಕ್ಷ ರೂ. ಇದ್ದರೆ, 20,000 ರೂ. ಸಹಾಯಧನ ನೀಡಲಾಗುತ್ತದೆ, ಬಾಕಿ 80,000 ರೂ. ಬ್ಯಾಂಕಿನಿಂದ ಸಾಲ ರೂಪದಲ್ಲಿ ಲಭ್ಯವಿರುತ್ತದೆ.

ಘಟಕದ ವೆಚ್ಚ 2 ಲಕ್ಷ ರೂ. ಇದ್ದರೆ, 30,000 ರೂ. ಸಹಾಯಧನವನ್ನು ದೊರೆಯುತ್ತದೆ, ಬಾಕಿ 1.7 ಲಕ್ಷ ರೂ. ಬ್ಯಾಂಕಿನಿಂದ ಸಾಲವಾಗಿ ಪಡೆಯಬಹುದು.

ಅರ್ಜಿ ಸಲ್ಲಿಸಲು ಕನಿಷ್ಠ ಅರ್ಹತೆಗಳು:

ಅಭ್ಯರ್ಥಿಯ ವಯಸ್ಸು 18 ರಿಂದ 55 ವರ್ಷದೊಳಗೆ ಇರಬೇಕು.

ಕನಿಷ್ಠ 7ನೇ ತರಗತಿಯ ವಿದ್ಯಾರ್ಹತೆ ಅಗತ್ಯವಿದೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಆಧಾರ್ ಕಾರ್ಡ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್
ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರಗಳು
ರೇಷನ್ ಕಾರ್ಡ್

ಆಸಕ್ತ ಅಭ್ಯರ್ಥಿಗಳು ತಮ್ಮ ಸಂಬಂಧಪಟ್ಟ ನಿಗಮವನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇತರೆ ವಿಷಯಗಳು:

ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ DBT ಪೇಮೆಂಟ್! ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ

ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, PUC ಪಾಸ್ ಆದವರಿಗೆ ಸಿಗಲಿದೆ 20 ಸಾವಿರ ಸ್ಕಾಲರ್ಶಿಪ್.

Leave a Reply

Your email address will not be published. Required fields are marked *

rtgh