ಹಲೋ ಸ್ನೇಹಿತರೆ, ಕೇಂದ್ರ ಸರ್ಕಾರವು ರೈತರಿಗೆ ಹೈನುಗಾರಿಗೆ ಆಸಕ್ತಿ ಹೊಂದಿರುವವರಿಗೆ ಹಾಗೇ ಹೊಸ ಬ್ಯುಸಿನೆಸ್ ಆರಂಭದ ಕನಸು ಹೊಂದಿರುವವರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕೇಂದ್ರ ಸರ್ಕಾರವು ಜಾನುವಾರು ಸಾಕಣೆದಾರರ ಜೀವನೋಪಾಯವನ್ನು ಸುಧಾರಿಸಲು ಮತ್ತು ಅವರ ಜೀವನದ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ‘ಉದ್ಯಮಿ ಮಿತ್ರ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ಕುರಿ, ಕೋಳಿ, ಹಂದಿ ಸಾಕಣೆಗೆ ಸಹಾಯಧನ ಸಿಗಲಿದೆ.
ಮೇಕೆಗಳು: 100 ರಿಂದ 500 ಮೇಕೆಗಳನ್ನು ಸಾಕುವ ರೈತನಿಗೆ ಶೇ.50 ಸಹಾಯಧನ ಸಿಗುತ್ತದೆ. 100 ಮೇಕೆಗಳನ್ನು ಸಾಕಲು ರೂ.20 ಲಕ್ಷ ನೀಡುವ ಈ ಯೋಜನೆಯಡಿ ರೈತರಿಗೆ ತಲಾ ರೂ.5 ಲಕ್ಷದಂತೆ ಎರಡು ಬಾರಿ ಸಬ್ಸಿಡಿ ನೀಡಲಾಗುತ್ತದೆ. 200 ಮೇಕೆ ಸಾಕಾಣಿಕೆಗ ಘಟಕ ಸ್ಥಾಪನೆಗೆ 40 ಲಕ್ಷ ರೂ., 300 ಮೇಕೆ ಸಾಕಣೆಗೆ 60 ಲಕ್ಷ ರೂ., 400 ಮೇಕೆ ಸಾಕಣೆಗೆ 80 ಲಕ್ಷ ರೂ., 500 ಮೇಕೆ ಸಾಕಾಣಿಕೆಗೆ 1 ಕೋಟಿ ರೂ. ಜೊತೆಗೆ ಎಲ್ಲದಕ್ಕೂ ಶೇ. 50 ರಷ್ಟು ರಿಯಾಯಿತಿ. ನೀಡಲಾಗುತ್ತದೆ.
ಕೋಳಿ ಸಾಕಾಣಿಕೆಗೆ ಶೇ.50 ಬಂಡವಾಳ ಸಹಾಯಧನ, 1,000 ದೇಶಿ ಕೋಳಿಗಳ ಫಾರಂ ಸ್ಥಾಪಿಸಿ ಮೊಟ್ಟೆ ಉತ್ಪಾದಿಸಿ, 4 ವಾರದ ಮರಿಗಳನ್ನು ಉತ್ಪಾದಿಸಿ ಮೊಟ್ಟೆಕೇಂದ್ರದ ಮೂಲಕ ಮಾರಾಟ ಮಾಡಲು ಗರಿಷ್ಠ 25 ಲಕ್ಷ ರೂ. ಬೇಕಾಗುತ್ತದೆ.
ಇದನ್ನು ಓದಿ: ಕಾರು ಚಾಲಕರಿಗೆ ಟೋಲ್ ತೆರಿಗೆಯಿಂದ ಮುಕ್ತಿ! ಸಾರಿಗೆ ಸಚಿವರ ಪ್ರಕಟಣೆ
ಹಂದಿ ಸಾಕಾಣಿಕೆ: 50 ರಿಂದ 100 ಹಂದಿ ಸಾಕಾಣಿಕೆ ಘಟಕಗಳ ಸ್ಥಾಪನೆಗೂ ಸಹ ಒಟ್ಟು ಯೋಜನಾ ವೆಚ್ಚದ ಶೇ.50ರಷ್ಟು ಸಹಾಯಧನ, ಗರಿಷ್ಠ 15 ಲಕ್ಷದಿಂದ 30 ಲಕ್ಷ ರೂ. ವೆಚ್ಚದ ಘಟಕ ಸ್ಥಾಪನೆಗೆ ಅಂದರೆ 100 ಹೆಣ್ಣು ಹಂದಿಗಳು ಮತ್ತು 25 ಗಂಡು ಹಂದಿಗಳ ಘಟಕಗಳನ್ನು ಸ್ಥಾಪಿಸಲು ಒಟ್ಟು ಯೋಜನಾ ವೆಚ್ಚ ಮತ್ತು ಗರಿಷ್ಠ 30 ಲಕ್ಷ ರೂಪಾಯಿಗಳ ಬಂಡವಾಳದ ಮೇಲೆ ಸಿಗಲಿದೆ 50 ಪ್ರತಿಶತ ಸಬ್ಸಿಡಿ.
ಅರ್ಹ ಕಂಪನಿಗಳು ಯೋಜನೆಗಾಗಿ ಬ್ಯಾಂಕ್ ಸಾಲದ ನೆರವು ಅಥವಾ ಬ್ಯಾಂಕ್ ಗ್ಯಾರಂಟಿ ಪಡೆಯಬೇಕು. ಯೋಜನೆಯ ಮೌಲ್ಯಮಾಪನಕ್ಕೂ ಅನುಮೋದನೆಯನ್ನು ನೀಡಬೇಕು. ಈ ಯೋಜನೆಗಳ ಲಾಭ ಪಡೆಯಲು ಇಚ್ಛಿಸುವ ರೈತರು https://nim.udyamimitra.in/ ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಇತರೆ ವಿಷಯಗಳು:
ಮೈಕ್ರೋ ಕ್ರೆಡಿಟ್: 2.5 ಲಕ್ಷಕ್ಕೆ ಸಿಗಲಿದೆ 1.5 ಲಕ್ಷ ಸಹಾಯಧನ!
ಮಹಿಳೆಯರಿಗೆ 11,000 ರೂ. ಪ್ರೋತ್ಸಾಹಧನ! ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ