ಹಲೋ ಸ್ನೇಹಿತರೆ, ದೇಶದಲ್ಲಿ ಮೋಟಾರು ವಾಹನ ಬಳಕೆಯಿಂದ ಉಂಟಾಗುವ ರಸ್ತೆ ಅಪಘಾತಗಳಿಗೆ ಬಲಿಯಾದವರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಸರಕಾರ ರೂಪಿಸಿದ್ದು, ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಆರಂಭಿಸಿದೆ ಎಂದು ಗುರುವಾರ ಸಂಸತ್ತಿಗೆ ಸಚಿವರು ಮಾಹಿತಿ ನೀಡಿದರು. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಲೋಕಸಭೆಯಲ್ಲಿ ಲಿಖಿತದ ಮೂಲಕ ಉತ್ತರ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈ ಯೋಜನೆಯಡಿ, ಅರ್ಹ ಸಂತ್ರಸ್ತರಿಗೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ-ಜನ ಆರೋಗ್ಯ ಯೋಜನೆ ಅಡಿಯಲ್ಲಿ ಎಂಪಾನೆಲ್ ಮಾಡಿದಂತಹ ಆಸ್ಪತ್ರೆಗಳಲ್ಲಿ ಆಘಾತ ಮತ್ತು ಪಾಲಿಟ್ರಾಮಾ ಆರೈಕೆಗೆ ಸಂಬಂಧಿಸಿದ ಆರೋಗ್ಯ ಪ್ರಯೋಜನ ಪ್ಯಾಕೇಜ್ಗಳನ್ನು ನೀಡಲು ಸೂಚಿಸಲಾಗಿದೆ, ಅಪಘಾತದ ದಿನಾಂಕದಿಂದ ಗರಿಷ್ಠ ಏಳು ದಿನಗಳವರೆಗೆ ಗರಿಷ್ಠ 1.5 ಲಕ್ಷ ರೂಪಾಯಿ ವರೆಗೆ ನೀಡಲಾಗುತ್ತದೆ.
ಇದನ್ನು ಓದಿ: ಕೊನೆಗೂ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3 ರಷ್ಟು ಏರಿಕೆ ಮಾಡಿದ ಸರ್ಕಾರ.!
“ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (NHA) ಸಹಯೋಗದೊಂದಿಗೆ ಯಾವುದೇ ವರ್ಗದ ರಸ್ತೆಯಲ್ಲಿ ವಾಹನಗಳಿಂದ ಉಂಟಾಗುವ ರಸ್ತೆ ಅಪಘಾತಗಳ ಸಂತ್ರಸ್ತರಿಗೆ ನಗದುರಹಿತ ಚಿಕಿತ್ಸೆಯನ್ನ ಒದಗಿಸಲು ಸಚಿವಾಲಯವು ಈ ಯೋಜನೆಯನ್ನು ರೂಪಿಸಿರುತ್ತದೆ ಮತ್ತು ಪ್ರಾಯೋಗಿಕ ಆಧಾರದ ಮೇಲೆ ಜಾರಿಗೆ ತರಲಾಗಿದೆ” ಎಂದು ಸಚಿವರು ಹೇಳಿದರು.
ಆದಾಯದ ಮೂಲಗಳು ಮತ್ತು ಅದರ ಬಳಕೆಯನ್ನು ಕೇಂದ್ರ ಮೋಟಾರು ವಾಹನ ಅಪಘಾತ ನಿಧಿ ನಿಯಮಗಳ, 2022ರ ಅಡಿಯಲ್ಲಿ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಇತರೆ ವಿಷಯಗಳು:
ಆಭರಣ ಪ್ರಿಯರಿಗೆ ಬಿಗ್ ಶಾಕ್, ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್, ಸಿಇಟಿ, ನೀಟ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ.