ರಾಜ್ಯ ಸಾರಿಗೆ ಇಲಾಖೆಯಿಂದ ಹೊಸ ಮಾದರಿ ವ್ಯವಸ್ಥೆ! RC ಕಾರ್ಡ್‌ DL ಜೊತೆಗೆ QR ಕೋಡ್‌ ವಿತರಣೆ

ಹಲೋ ಸ್ನೇಹಿತರೆ, ರಾಜ್ಯದಲ್ಲಿ ವಾಹನ ಚಾಲಕರಿಗೆ ನೀಡಲಾಗುವ DL ಮತ್ತು RC ಪ್ರಮಾಣಪತ್ರದ ಸ್ವರೂಪ ಬದಲಿಸಲಾಗುತ್ತಿದ್ದು, ಈಗ ಮೈಕ್ರೋ ಚಿಪ್‌ ಜತೆಗೆ ಕ್ಯೂಆರ್‌ ಕೋಡ್‌ ಅಳವಡಿಸಿದ ಡಿಎಲ್‌ ಮತ್ತು ಆರ್‌ಸಿ ಸಾರ್ಟ್‌ ಕಾರ್ಡ್‌ ವಿತರಿಸಲು ರಾಜ್ಯ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

Change in format of DL and RC certificate

ದೇಶದಾದ್ಯಂತ ಡಿಎಲ್‌ ಮತ್ತು ಆರ್‌ಸಿಗಳ ಸ್ವರೂಪ ಒಂದೇ ರೀತಿಯಲ್ಲಿರಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿಯಮ ಅನುಷ್ಠಾನಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. MORTH ನೀಡಿರುವ ಮಾರ್ಗಸೂಚಿಯಂತೆ ಡ್ರೈವಿಂಗ್‌ ಲೈಸೆನ್ಸ್ ಮತ್ತು ರಿಜಿಸ್ಟ್ರೇಷನ್‌ ಸರ್ಟಿಫಿಕೆಟ್‌ ಮುದ್ರಿಸಿ, ವಿತರಿಸುವ ಖಾಸಗಿ ಸಂಸ್ಥೆಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಗುತ್ತಿಗೆದಾರರನ್ನು ಅಂತಿಮಗೊಳಿಸಿ ಸೆಪ್ಟೆಂಬರ್‌ನಿಂದ ಹೊಸ ಬಗೆಯ ಡಿಎಲ್‌ ಮತ್ತು ಆರ್‌ಸಿ ವಿತರಿಸಲು ಸಾರಿಗೆ ಇಲಾಖೆ ನಿರ್ಧರ ಕೈಗೊಂಡಿದೆ.

ಹೊಸಬಗೆಯ ಡಿಎಲ್‌ನಲ್ಲಿ ಹಲವು ವಿವರಗಳನ್ನು ಅಳವಡಿಸಲಾಗುತ್ತಿದ್ದೂ. ಈವರೆಗೆ ಡಿಎಲ್‌ನಲ್ಲಿ ಚಾಲಕರ ಹೆಸರು, ಜನನ ದಿನಾಂಕ, ವಿಳಾಸ, ರಕ್ತದ ಗುಂಪು ವಿವರಗಳು ಇರುತ್ತಿದ್ದವು. ಹೊಸ ಡಿಎಲ್‌ನಲ್ಲಿ ಆ ವಿವರಗಳ ಜತೆಗೆ ಡಿಎಲ್‌ ಹೊಂದಿರುವವರು ಅಂಗಾಂಗ ದಾನಿಯಾಗಿದ್ದಾರೆಯೇ ಎಂಬುದನ್ನು ಸಹ ಉಲ್ಲೇಖಿಸಲಾಗುತ್ತದೆ. ಜೊತೆಗೆ ಡಿಎಲ್‌ ನಲ್ಲಿ ಮೊಬೈಲ್‌ ಸಂಖ್ಯೆ, ಅವರ ಸಂಬಂಧಿಕರ ಅಥವಾ ತಕ್ಷಣದಲ್ಲಿ ಸಂಪರ್ಕಿಸಬಹುದಾದವರ ಮಾಡಬಹುದಾದ ಮೊಬೈಲ್‌ ಸಂಖ್ಯೆಗಳನ್ನೂ ನಮೂದಿಸಲಾಗುತ್ತದೆ.

ಇದನ್ನು ಓದಿ: ಕೊನೆಗೂ ಇಳಿಕೆಯಾದ ಬಂಗಾರದ ಬೆಲೆ; 10 ಗ್ರಾಂ ಚಿನ್ನದ ಬೆಲೆ ಇಷ್ಟೇನಾ? 

ಸದ್ಯ ಈಗಿರುವ ಡಿಎಲ್‌ ಮತ್ತು ಆರ್‌ಸಿಯಲ್ಲಿ ಒಂದು ಬದಿಯಲ್ಲಿ ಮಾತ್ರ ಎಲ್ಲ ವಿವರಗಳಿದ್ದು, ಇನ್ನೊಂದು ಬದಿಯಲ್ಲಿ ಮೈಕೋಚಿಪ್‌ ಅಳವಡಿಸಲಾಗಿದೆ. ಹೊಸ ಡಿಎಲ್‌ ಮತ್ತು ಆರ್‌ಸಿಯ ಎರಡೂ ಬದಿಯಲ್ಲಿ ವಾಹನ ಮತ್ತು ವಾಹನ ಮಾಲೀಕರ ಅಥವಾ ಚಾಲಕರ ವಿವರಗಳನ್ನು ನಮೂದಿಸಲಾಗುತ್ತದೆ. ಡಿಎಲ್‌ ಮತ್ತು ಆರ್‌ಸಿಗಳನ್ನು ಲೇಸರ್‌ ಪ್ರಿಂಟಿಂಗ್‌ನಲ್ಲಿ ಮುದ್ರಿಸಲಾಗುತ್ತದೆ. ಇನ್ನು ಕ್ಯೂಆರ್‌ ಕೋಡನ್ನು ಸ್ಕ್ಯಾನ್‌ ಮಾಡಿದರೆ ಡಿಎಲ್‌ ಮತ್ತು ಆರ್‌ಸಿಗೆ ಸಂಬಂಧಿಸಿದ ಎಲ್ಲ ವಿವರಗಳು ದೊರೆಯುವಂತೆ ಮಾಡಲಾಗುತ್ತದೆ.

ಇತರೆ ವಿಷಯಗಳು:

ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ DBT ಪೇಮೆಂಟ್! ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ

ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, PUC ಪಾಸ್ ಆದವರಿಗೆ ಸಿಗಲಿದೆ 20 ಸಾವಿರ ಸ್ಕಾಲರ್ಶಿಪ್.

Leave a Reply

Your email address will not be published. Required fields are marked *

rtgh