ರೇಷನ್‌ ಕಾರ್ಡ್‌ದಾರರಿಗೆ ಅನ್ನಭಾಗ್ಯ ಹಣದ ಬದಲು ದಿನಸಿ ಕಿಟ್ ವಿತರಣೆ!

ಹಲೋ ಸ್ನೇಹಿತರೆ, ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗಿದ್ದು, ಅನ್ನಭಾಗ್ಯದ 5 ಕೆಜಿ ಅಕ್ಕಿಗೆ ನೀಡುತ್ತಿದ್ದ ಹಣದ ಬದಲು ತೊಗರಿಬೇಳೆ, ಸಕ್ಕರೆ, ತಾಳೆ ಎಣ್ಣೆ ಹಾಗೂ ಅಯೋಡೈಸ್ಡ್ ಉಪ್ಪು ನೀಡಲು ಸರ್ಕಾರ ಚಿಂತನೆ ನಡೆಸಿದೆ.

Distribution of grocery kit to ration card holders

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ, ಅನ್ನಭಾಗ್ಯದ ಹಣದ ಬದಲು ತೊಗರಿಬೇಳೆ, ಸಕ್ಕರೆ, ತಾಳೆ ಎಣ್ಣೆ ಹಾಗೂ ಅಯೋಡೈಸ್ಡ್ ಉಪ್ಪು ನೀಡಲು ತಿರ್ಮಾನಿಸಿದ್ದೂ, ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಿದೆ. ಹಣಕಾಸು ಅನುಮೋದನೆಗಾಗಿ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಇದನ್ನು ಓದಿ: ಮಧ್ಯಮ ವರ್ಗದವರಿಗೆ ಎಚ್ಚರಿಕೆ.. ಅಕ್ಟೋಬರ್ 1 ರಿಂದ ಹೊಸ ನಿಯಮ!

ರಾಜ್ಯ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ 10 ಕೆಜಿ ಅಕ್ಕಿ ಕೊಡುವುದಾಗಿ ಚುನಾವಣೆ ಸಮಯದಲ್ಲಿ ಭರವಸೆ ನೀಡಿತ್ತು. ಆದರೆ ಅಕ್ಕಿ ಕೊರತೆಯಿಂದಾಗಿ 5 ಕೆಜಿ ಅಕ್ಕಿ ಕೊಟ್ಟು ಉಳಿದ 5 ಕೆಜಿ ಅಕ್ಕಿಗೆ ನಗದು ಪಾವತಿಸಲಾಗುತ್ತಿತ್ತು. ಇದಕ್ಕೆ ಸರ್ಕಾರ ಪ್ರತಿ ತಿಂಗಳು ಬರೋಬ್ಬರಿ 700 ಕೋಟಿ ರೂ. ಅಧಿಕ ಹಣ ಭರಿಸಬೇಕಾಗುತ್ತದೆ. ಈಗಾಗಲೇ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ವಿತರಿಸಲಾಗುತ್ತಿದೆ ಅದ್ದರಿಂದ ಇದೀಗ ಅನ್ನಭಾಗ್ಯದ ಹಣದ ಬದಲು ಇತರೆ ದಿನಸಿ ಪದಾರ್ಥಗಳನ್ನು ನೀಡಲು ನಿರ್ಧರಿಸಿದೆ.

ಇತರೆ ವಿಷಯಗಳು:

ಯೂಟ್ಯೂಬ್ ವೀಕ್ಷಕರಿಗೂ ತಟ್ಟಿದ ಬೆಲೆ ಏರಿಕೆ ಬಿಸಿ! ಪ್ರೀಮಿಯಂ ದರ 58% ಹೆಚ್ಚಳ

ಜನಸಾಮಾನ್ಯರಿಗೆ ದೊಡ್ಡ ಗುಡ್ ನ್ಯೂಸ್.. ಈಗಾ ₹5 ಲಕ್ಷ ಅಲ್ಲ ₹10 ಲಕ್ಷ!

Leave a Reply

Your email address will not be published. Required fields are marked *

rtgh