ಇಂದಿನಿಂದ ಮಕ್ಕಳಿಗೆ ವಾರದ 6 ದಿನವೂ ಮೊಟ್ಟೆ ವಿತರಣೆ ಕಾರ್ಯ ಆರಂಭ!

ಹಲೋ ಸ್ನೇಹಿತರೆ, ತಿಂಗಳ ಆರಂಭದಲ್ಲಿ ರಾಜ್ಯದ ಸರ್ಕಾರಿ ಶಾಲಾ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಮಾಹಿತಿಯಂತೆ ಇಂದಿನಿಂದಲೇ ವಾರದಲ್ಲಿ 6 ದಿನವೂ ಮೊಟ್ಟೆ ವಿತರಣೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Egg For Govt Students

ಮಕ್ಕಳಲ್ಲಿ ಅಪೌಷ್ಠಿಕತೆ ಸಮಸ್ಯೆ ನಿವಾರಣೆಗೆ ರಜಾ ದಿನ ಹೊರತುಪಡಿಸಿ, ಸದ್ಯಕ್ಕೆ ಮಕ್ಕಳಿಗೆ ವಾರಕ್ಕೆ 2 ದಿನ ಮೊಟ್ಟೆ ನೀಡಲಾಗುತ್ತಿತ್ತು. ಇದೀಗ ವಾರದ 6 ದಿನವೂ ಮೊಟ್ಟೆ ವಿತರಣೆಗೆ ನಿರ್ಧರಿಸಲಾಗಿದೆ. ಇಂದಿನಿಂದ 6 ದಿನ ಮೊಟ್ಟೆ ವಿತರಣೆ ಮಾಡುವ ಸಾಧ್ಯತೆ ಇದೆ. ವಾರದ 6 ದಿನವೂ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ವಾರ್ಷಿಕ 1,400 ಕೋಟಿ ರು. ವೆಚ್ಚವಾಗಲಿದೆ ಎಂದು ಹೇಳಿದರು

ಇದನ್ನು ಓದಿ: ಆವಾಸ್ ಯೋಜನೆಯಲ್ಲಿ ಮಹತ್ವದ ತಿದ್ದುಪಡಿ!ಇನ್ಮುಂದೆ ಇವರಿಗೂ ಸಿಗಲಿದೆ ಯೋಜನೆಯ ಪ್ರಯೋಜನ

ಈ ಮಹತ್ವದ ಕ್ರಮದಲ್ಲಿ, ಕರ್ನಾಟಕ ಸರ್ಕಾರವು ಮಧ್ಯಾಹ್ನದ ಊಟದ ಯೋಜನೆಯ ಅಂಗವಾಗಿ ಪ್ರತಿ ಮಗುವಿಗೆ ವಾರಕ್ಕೆ ಆರು ಮೊಟ್ಟೆಗಳನ್ನು ನೀಡಲು ಪ್ರಾರಂಭಿಸುವುದಾಗಿ ಸೂಚನೆ ಪ್ರಕಟಿಸಿಲಾಗಿತ್ತು. ಈ ಹಿನ್ನಲೆಯಲ್ಲಿ ಈ ಯೋಜನೆಗೆ ಈಗ ಅಧಿಕೃತವಾಗಿ ಚಾಲನೆ ಸಿಗಲಿದೆ.

ಮಧ್ಯಾಹ್ನದ ಊಟ ಯೋಜನೆಗೆ ಮೂರು ವರ್ಷಗಳ ಪಾಲುದಾರಿಕೆಯನ್ನು ಸ್ಥಾಪಿಸಲು ಸರ್ಕಾರವು ಅಜೀಂ ಪ್ರೇಮ್‌ಜಿ ಫೌಂಡೇಶನ್‌ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಗಿತ್ತು. ಅದರಂತೆ ಸರ್ಕಾರ ಕ್ರಮ ಕೈಗೊಳ್ಳಲು ರೆಡಯಾಗಿದೆ

ಇತರೆ ವಿಷಯಗಳು:

ಪ್ರೀಮಿಯಂ ಮದ್ಯದ ಬ್ರ್ಯಾಂಡ್‌ ಇಂದಿನಿಂದ ಹೊಸ ಬೆಲೆಯಲ್ಲಿ! ಯಾವುದರ ಬೆಲೆ ಎಷ್ಟಿದೆ?

ಪೊಲೀಸ್ ಆಯುಕ್ತರಿಂದ ಗಣೇಶನ ಹಬ್ಬ ಆಚರಣೆಗೆ ವಿಶೇಷ ಸೂಚನೆ! ನಿಯಮಗಳ ಪಟ್ಟಿ ರಿಲೀಸ್

Leave a Reply

Your email address will not be published. Required fields are marked *

rtgh