ಹಲೋ ಸ್ನೇಹಿತರೆ, ಸರ್ಕಾರ ನೌಕರರಿಗೆ ಸಿಹಿ ಸುದ್ದಿ ನೀಡುವುದರ ಮೂಲಕ ಸೆಪ್ಟೆಂಬರ್ ನಲ್ಲಿ ಕೇಂದ್ರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಿದೆ. ತುಟ್ಟಿಭತ್ಯೆ ಶೇ. 3 ಅಥವಾ ಶೇಕಡಾ 4 ಕ್ಕೆ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ. ಹಾಗದರೆ ಯಾವ ವೇತನ ಆಯೋಗದಡಿ DA ಹೆಚ್ಚಾಗಲಿದೆ? ಎಷ್ಟು ಏರಿಕೆಯಾಗಲಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

ಡಿಎ ಹೆಚ್ಚಳವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆಯಿದೆ. ಶೇ. 3ರಷ್ಟು ಹೆಚ್ಚಳವು ದೃಢಪಟ್ಟಿದೆ, ಆದರೆ ಹಣದುಬ್ಬರ ಪರಿಸ್ಥಿತಿಗಳನ್ನು ಅವಲಂಬಿಸಿ ನೌಕರರ ಅದೃಷ್ಟ ಖುಲಾಯಿಸಿದರೆ ಶೇಕಡಾ 4 ರಷ್ಟಾಗಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ತುಟ್ಟಿಭತ್ಯೆ ಮೂಲ ವೇತನದ ಶೇಕಡಾ 50 ರಷ್ಟಿದೆ. 7 ನೇ ವೇತನ ಆಯೋಗದ ಪ್ರಕಾರ ಡಿಎಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಬಹುದು ಎಂದು ಹೇಳಲಾಗುತ್ತಿವದೆ. ಶೇ.50ಕ್ಕಿಂತ ಹೆಚ್ಚಿನ ತುಟ್ಟಿಭತ್ಯೆ ವಿಧಿಸಿದರೆ ಡಿಎಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ರಾಜ್ಯದಲ್ಲಿ 8ನೇ ವೇತನ ಆಯೋಗ ರಚನೆಯಾಗುವವರೆಗೂ ಇದು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ. ಮಾರ್ಚ್ 2024 ರಲ್ಲಿ ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಮೂಲ ವೇತನದ ಶೇಕಡಾ 4 ರಿಂದ 50 ಕ್ಕೆ ಹೆಚ್ಚಿಸಿತ್ತು.
ಇತರೆ ವಿಷಯಗಳು:
300 ರೂ.ಗೆ ಎಲ್‌ಪಿಜಿ ಸಿಲೆಂಡರ್! ಗ್ರಾಹಕರು ಇಂದೇ ಪ್ರಯೋಜನ ಪಡೆಯಿರಿ
SSLC, PUC ಫೆೇಲಾದ್ರೆ ನೋ ಟೆನ್ಷನ್! ಮತ್ತೆ ತರಗತಿ ಹಾಜರಾಗಲು ಅವಕಾಶ ಕೊಟ್ಟ ಶಿಕ್ಷಣ ಇಲಾಖೆ