ಹಲೋ ಸ್ನೇಹಿತರೆ, ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ರೈತರಿಗೆ ಗಂಗಾಕಲ್ಯಾಣ ನೀರಾವರಿ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಗೆ ಅವಕಾಶ ನೀಡಲಾಗಿದೆ. ಹೇಗೆ ಅರ್ಜಿ ಸಲ್ಲಿಸಬಹುದು? ಅರ್ಹತೆಗಳು, ಅಗತ್ಯ ದಾಖಲೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಅಭಿವೃದ್ಧಿ ನಿಗಮಗಳಾದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಬರುವ ಹಿಂದುಳಿದ ವರ್ಗಗಳ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ನೀಡಲಾಗುತ್ತದೆ.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ
- ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
- ಯಾವುದೇ ನೀರಾವರಿ ಸೌಲಭ್ಯ ಹೊಂದಿರಬಾರದು.
- ಹಾಲಿ ಜಮೀನುಗಳು ಕೃಷಿ ಚಟುವಟಿಕೆಯಲ್ಲಿರಬೇಕು.
- ವಯಸ್ಸು 18 ರಿಂದ 60 ವರ್ಷದೊಳಗಿರಬೇಕು.
- ಫಲಾನುಭವಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.
- ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 4 ಲಕ್ಷ ಸಬ್ಸಿಡಿ ಮೂಲಕ ರಾಜ್ಯದ ರೈತರಿಗೆ ಬೋರ್ವೆಲ್ ಕೊರಸಿಕೊಳ್ಳುವ ಅವಕಾಶವನ್ನು ನೀಡಿದೆ.
- ಕುಟುಂಬ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98 ಸಾವಿರ ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 1.20 ಲಕ್ಷಗಳು ಒಳಗಿರಬೇಕು.
ಇದನ್ನು ಓದಿ: ವಾಹನ ಚಾಲಕರಿಗೆ ಬಿಗ್ ಶಾಕ್! ದೋಷಯುಕ್ತ ನಂಬರ್ ಪ್ಲೇಟ್ ಕಂಡುಬಂದಲ್ಲಿ ಕಠಿಣ ಕ್ರಮ
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
- ಆಧಾರ್ ಕಾರ್ಡ್
- ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
- ಸ್ವಂತ ಜಮೀನಿನ ಪಹಣಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಅರ್ಜಿದಾರರ ಭಾವಚಿತ್ರ
- ಬಿಪಿಎಲ್ ರೇಷನ್ ಕಾರ್ಡ್
- ಮೊಬೈಲ್ ಸಂಖ್ಯೆ
ಅರ್ಜಿದಾರರು ಸೇವಾಸಿಂಧು ಪೋರ್ಟಲ್ ನಲ್ಲಿ ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಆಗಸ್ಟ್ 31 ರೊಳಗಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇತರೆ ವಿಷಯಗಳು:
ಇಂದಿನಿಂದ ಟಿಕೆಟ್ ಖರೀದಿಗೆ QR ಕೋಡ್ ಸ್ಕ್ಯಾನ್ ಮಾಡಿ! ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಯಾತ್ರಿಕರಿಗೆ ಹೊಸ ನಿಯಮ! ನೋಂದಣಿ ಶುಲ್ಕ ರದ್ದು, ಅನುಕೂಲಕರ ಶುಲ್ಕ ಡಬಲ್