ನಮಸ್ಕಾರ ಕರ್ನಾಟಕ, ಗಂಗಾ ಕಲ್ಯಾಣ ಯೋಜನೆಯಿಂದ 4 ಲಕ್ಷದ ಸಬ್ಸಿಡಿ: ರಾಜ್ಯ ಸರ್ಕಾರವು ರೈತರಿಗೆ ಬೋರ್ವೆಲ್ ಕೊರಿಸಲು 4 ಲಕ್ಷದ ಸಬ್ಸಿಡಿಯನ್ನು ನೀಡುವ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶವು ಬರಗಾಲದಲ್ಲಿ ನೀರಿನ ತೊಂದರೆ ಅನುಭವಿಸುತ್ತಿರುವ ರೈತರ ನೆರವಾಗುವುದಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:
- ಅರ್ಜಿದಾರನ ವಯಸ್ಸು ಕನಿಷ್ಠ 18 ವರ್ಷ ಇರಬೇಕು.
- ಅರ್ಜಿದಾರನು 2 ಎಕರೆ ಅಥವಾ 5 ಎಕರೆ ಜಮೀನನ್ನು ಒಂದೇ ಸ್ಥಳದಲ್ಲಿ ಹೊಂದಿರಬೇಕು.
- ಜಮೀನಿನಲ್ಲಿ ಯಾವುದೇ ನೀರಾವರಿ ವ್ಯವಸ್ಥೆ ಇರಬಾರದು.
- ಅರ್ಜಿದಾರರು ನಿಗಮಕ್ಕೆ ಸೇರಿದವರಾಗಿರಬೇಕು.
- ಕೊಡಗು, ಉತ್ತರ ಕನ್ನಡ, ಚಿಕ್ಕಮಂಗಳೂರು, ಶಿವಮೊಗ್ಗ, ಮತ್ತು ಹಾಸನ ಜಿಲ್ಲೆಗಳಲ್ಲಿ 1 ಅಥವಾ 2 ಎಕರೆ ಜಮೀನನ್ನು ಹೊಂದಿರುವ ರೈತರು ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಕಡಿಮೆ ಇರಬೇಕು.

ಅರ್ಜಿಗೆ ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್
ಜಮೀನಿನ ಪಹಣಿ
ಅರ್ಜಿದಾರನ ಭಾವಚಿತ್ರ
BPL ರೇಷನ್ ಕಾರ್ಡ್
ಮೊಬೈಲ್ ಸಂಖ್ಯೆ
ಅರ್ಜಿಯನ್ನು ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು:
ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು, ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸೈಬರ್ ಸೆಂಟರ್‌ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಆಗಸ್ಟ್ 31, ಆದ್ದರಿಂದ ತಡಮಾಡದೆ ಇಂದೇ ಅರ್ಜಿ ಸಲ್ಲಿಸಿ, ಯೋಜನೆಯ ಸಬ್ಸಿಡಿ ಪ್ರಯೋಜನವನ್ನು ಪಡೆದುಕೊಳ್ಳಿ.
ಇತರೆ ವಿಷಯಗಳು:
ಹೊಸ ವಾಹನ ಖರೀದಿಸುವ ಪ್ಲಾನ್ ಇದ್ಯಾ?, ರಾಜ್ಯ ಸರ್ಕಾರದಿಂದ ಸಿಗಲ್ಲಿದೆ ದೊಡ್ಡ ಮೊತ್ತದ ಸಹಾಯಧನ.
ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ, ಪಿಎಂ ಸೂರ್ಯಘರ್ ಯೋಜನೆಗೆ ಅರ್ಜಿ ಆಹ್ವಾನ.