ಹಲೋ ಸ್ನೇಹಿತರೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಫಲಾನುಭವಿಗಳಿಗೆ ಹೆಚ್ಚು ಅನುಕೂಲ ನೀಡಲು ಅಕ್ಟೋಬರ್ ನಿಂದ ಗೋಧಿ ಹಂಚಿಕೆಯನ್ನು ಹೆಚ್ಚಳ ಮಾಡಲಾಗಿದೆ. 2022ರ ಮೇನಿಂದ ಯೋಜನೆಗೆ ನಿಗದಿಯಾಗಿದ್ದ 1.82 ಕೋಟಿ ಟನ್ ಗೋಧಿಯನ್ನು 71 ಲಕ್ಷ ಟನ್ಗೆ ಮಿತಿಗೊಳಿಸಲಾಗಿತ್ತು.
ದೇಶಿಯ ಮಟ್ಟದಲ್ಲಿ ಗೋಧಿಯ ಉತ್ಪಾದನೆ ಕಡಿಮೆಯಾಗಿದ್ದ ಕಾರಣ ಸರ್ಕಾರ ಈ ಕ್ರಮ ಕೈಗೊಳ್ಳಲಾಗಿತ್ತು. ಇದೀಗ
ಈ ಯೋಜನೆಯಡಿ ಸರ್ಕಾರ 100 ದಿನಗಳನ್ನು ಪೂರ್ಣಗೊಳಿಸಿದ್ದು, ಯೋಜನೆಗೆ ಹೆಚ್ಚುವರಿಯಾಗಿ 35 ಲಕ್ಷ ಟನ್ ಗೋಧಿ ಹಂಚಿಕೆಗೆ ಒಪ್ಪಿಗೆ ನೀಡಲಾಗಿದೆ.
ಇದನ್ನು ಓದಿ: ಪೋಷಕರಿಗೆ ಭರ್ಜರಿ ಗುಡ್ ನ್ಯೂಸ್! ನಾಳೆಯಿಂದಲೇ ‘NPS ವಾತ್ಸಲ್ಯ’ ಯೋಜನೆಗೆ ಚಾಲನೆ
ಕೇಂದ್ರ ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ಈ ಬಗ್ಗೆ ಮಾಹಿತಿ ನೀಡಿದ್ದು, ಮತ್ತೆ ಫಲಾನುಭವಿಗಳಿಗೆ ಗೋಧಿ ಮತ್ತು ಅಕ್ಕಿಯನ್ನು ಸಮ ಪ್ರಮಾಣದಲ್ಲಿ ವಿತರಿಸಲು ಸರ್ಕಾರ ಮುಂದಾಗಿದ್ದು, ಮುಂದಿನ ವರ್ಷದ ಮಾರ್ಚ್ ವರೆಗೂ ಈ ಹಂಚಿಕೆ ಕಾರ್ಯ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ 2023 -24ನೇ ಆರ್ಥಿಕ ವರ್ಷದಲ್ಲಿ 11.29 ಕೋಟಿ ಟನ್ ಗೋಧಿ ಉತ್ಪಾದನೆ ಆಗಿದ್ದು, ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ದೇಶದ 80 ಕೋಟಿ ಬಡವರಿಗೆ ಉಚಿತವಾಗಿ 5 ಕೆಜಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ.
ಇತರೆ ವಿಷಯಗಳು:
ಕಲ್ಯಾಣ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗುಡ್ ನ್ಯೂಸ್! 5,000 ಕೋಟಿ ಮೀಸಲು
75,000/- ನೀಡುವ ಸ್ಕಾಲರ್‌ಶಿಪ್ ಯೋಜನೆ! ಅರ್ಜಿ ಸಲ್ಲಿಸಲು ಇದೇ ತಿಂಗಳು ಕೊನೆಯ ಅವಕಾಶ