ದಿನನಿತ್ಯ ಎಲ್ಲಾ ವಸ್ತುಗಳ ಬೆಲೆಯು ಏರಿಕೆಯಲ್ಲಿರುವ ಜನಸಾಮಾನ್ಯರಿಗೆ ಶಾಕಿಂಗ್ ಸುದ್ದಿ ಎದುರಾಗಿದ್ದು, ಈರುಳ್ಳಿ, ಬೆಳ್ಳುಳ್ಳಿಯ ದರ ಕೂಡ ಹೆಚ್ಚಳವಾಗುತ್ತಿದೆ.
ಹಬ್ಬಗಳು ಸಮೀಪಿಸುತ್ತಿರುವ ಬೆನ್ನಲ್ಲೇ ಈರುಳ್ಳಿಯ ದರ ಕೆಜಿಗೆ 70 ರೂಪಾಯಿ ಸಮೀಪಿಸಿದ್ದು, ಬೆಳ್ಳುಳ್ಳಿ 400 ರ ಗಡಿಯನ್ನು ದಾಟಿದೆ. ವೆಜ್ ಇರಲಿ, ನಾನ್ ವೆಜ್ ಇರಲಿ ಈರುಳ್ಳಿ, ಎಲ್ಲಾ ಅಡುಗೆಗು ಬೆಳ್ಳುಳ್ಳಿ ಬೇಕೇ ಬೇಕು. ತರಕಾರಿಯನ್ನು ತರಲು ಹೋದ ಜನರು ಈರುಳ್ಳಿ, ಬೆಳ್ಳುಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಗೌರಿ ಗಣೇಶನ ಹಬ್ಬದ ವೇಳೆಗೆ ಇನ್ನಷ್ಟು ಬೆಲೆ ಹೆಚ್ಚಾಗುವಂತಹ ಸಾಧ್ಯತೆಯಿದೆ.
ಧಾರಾಕಾರದ ಮಳೆಯಿಂದಾಗಿ ಕೆಲವು ಕಡೆ ಬೆಳೆಯು ನಾಶವಾಗಿದ್ದರಿಂದ ಸದ್ಯ ಬೆಳ್ಳುಳ್ಳಿಯ ಬೆಲೆಯು ಪ್ರತಿ ಕೆ.ಜಿಗೆ 400 ರೂಪಾಯಿ ಇದೆ. ಕೊಳೆ ರೋಗವು ಬಂದು ಈರುಳ್ಳಿಯು ಇಳುವರಿಯು ಕಡಿಮೆಯಾದ ಪರಿಣಾಮ ಸದ್ಯ ದರ ಹೆಚ್ಚಳವಾಗಿದ್ದು ಕೆ.ಜಿಗೆ 60-70 ರೂಪಾಯಿದೆ. ಮುಂದಿನ ದಿನದಲ್ಲಿ ಈರುಳ್ಳಿಯ ದರ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ಇದೇ ಅವಧಿಯಲ್ಲಿ ಶುಂಠಿಯ ಬೆಲೆಯು ಹಿಂದೆಂದೂ ಕಾಣದಂತಹ ರೀತಿಯಲ್ಲಿ ಕೆಜಿಗೆ 80 ರೂ.ಗೆ ಹೆಚ್ಚಳವಾಗಿದ್ದು, ಇದೀಗ ಕೆಜಿಗೆ 300 ರೂ.ಗೆ ಮಾರಾಟವಾಗುತ್ತಿದೆ. ಬಳ್ಳಾರಿ, ಕುನ್ನೂರು & ನಾಸಿಕ್ನಂತಹ ಪ್ರಮುಖ ಪ್ರದೇಶಗಳಲ್ಲಿ ಈರುಳ್ಳಿಯ ರೈತರ ಮೇಲೆಯು ತೀವ್ರವಾದ ಪರಿಣಾಮವನ್ನು ಬೀರಿರುವ ಅಕಾಲಿಕ & ಅತಿಯಾದ ಮಳೆಯಿಂದಾಗಿ ಕೊರತೆಯು ಪ್ರಾಥಮಿಕವಾಗಿ ಕಾರಣವಾಗಿದೆ.
ಇತರೆ ವಿಷಯಗಳು:
ಮದ್ಯದ ದರ ಇಳಿಕೆ ಬೆನ್ನಲ್ಲೇ ಬಿಯರ್ ದರ 30% ಹೆಚ್ಚಳ!
ಇನ್ಮುಂದೆ ಆಸ್ತಿ ನೋಂದಣಿಗೆ ವೈಯಕ್ತಿಕ ಗುರುತಿನ ದಾಖಲೆ ಕಡ್ಡಾಯ!