ಹಲೋ ಸ್ನೇಹಿತರೆ, ಜನಸಾಮಾನ್ಯರಿಗೆ ದಿನಕಳೆದಂತೆ ಬೆಲೆ ಏರಿಕೆ ಶಾಕ್ ಎದುರಾಗುತ್ತಿದ್ದು, ಬೆಳ್ಳುಳ್ಳಿ ಹಾಗೂ ಈರುಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಕೆಜಿಗೆ 400 ರೂ. ಬೆಳ್ಳುಳ್ಳಿ ದರ ಗಡಿ ದಾಟಿದ್ರೆ, ಈರುಳ್ಳಿ ದರ ಕೆಜಿಗೆ 80 ರೂ.ಗೆ ಮಾರಾಟವಾಗುತ್ತಿದೆ. ದೇಶದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯಲ್ಲಿ ಮಧ್ಯಪ್ರದೇಶ ಶೇಕಡ 70ರಷ್ಟು ಪಾಲು ಹೊಂದಿದೆ.
ಮಧ್ಯಪ್ರದೇಶದಿಂದ ಆಮದು ಇಳಿಕೆಯಾಗಿರುವುದರಿಂದ ಬೆಳ್ಳುಳ್ಳಿ ಬೆಲೆ 400 ರ ಗಡಿ ದಾಟಿದೆ. ರಾಜ್ಯದಲ್ಲಿ ಮಳೆಯಿಂದ ಬೆಳ್ಳುಳ್ಳಿ ಬೆಳೆ ಹಾನಿಗೊಳಗಾಗಿದ್ದೂ, ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಕೇಂದ್ರ ಸರ್ಕಾರ ದೇಶದ ರೈತರ ಆರ್ಥಿಕ ಹಿತ ದೃಷ್ಟಿಯಿಂದ ಬೆಳ್ಳುಳ್ಳಿ ಮೇಲಿನ ಆಮದು ಸುಂಕವನ್ನು 100ರಷ್ಟು ಹೆಚ್ಚಿಸಿದೆ.
ಬೆಳ್ಳುಳ್ಳಿ ಜೊತೆ ಈರುಳ್ಳಿ ದರ ಕೂಡ ಏರಿಕೆ ಕಂಡಿದ್ದು, ಭಾರಿ ಮಳೆಯಿಂದ ಗುಣಮಟ್ಟದ ಈರುಳ್ಳಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ದರ 52 ರೂ. ದಾಟಿದ್ದು, ಸೂಪರ್ ಮಾರ್ಕೆಟ್ ಗಳಲ್ಲಿ ಪ್ರಸ್ತುತ 80 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಇತರೆ ವಿಷಯಗಳು:
16000 ಕ್ಕೂ ಹೆಚ್ಚು ಗೃಹಲಕ್ಷ್ಮಿ ಖಾತೆ ರದ್ದು!
ಉದ್ಯೋಗಿಗಳಿಗೆ ಶಾಕ್: ಇನ್ಮುಂದೆ 3 ತಿಂಗಳಿಗೊಮ್ಮೆ ವೇತನ ಖಾತೆಗೆ!