ಚಿನ್ನ ಗ್ರಾಹಕರಿಗೆ ಗುಡ್ ನ್ಯೂಸ್, ಇಳಿಕೆ ಕಂಡ ಚಿನ್ನದ ಬೆಲೆ, ಇಲ್ಲಿದೆ ನೋಡಿ ಸಂಪೂರ್ಣ ಬೆಲೆ ಮಾಹಿತಿ.

ರಾಜರ ಕಾಲದಲ್ಲಿ ಅವರಲ್ಲಿದ್ದ ಬೆಳ್ಳಿ(Silver), ಬಂಗಾರ(Gold), ವಜ್ರ(Diamond) ವೈಢೂರ್ಯಗಳಿಂದ ಸಂಪತ್ತನ್ನು ಅಳೆಯುತ್ತಿದ್ದರು. ಬಂಗಾರ, ಬೆಳ್ಳಿ, ರತ್ನ ಮುತ್ತು ಹವಳಗಳನ್ನು ರಸ್ತೆ ಬದಿಗಳಲ್ಲಿ ಮಾರಾಟ ಮಾಡುತ್ತಿದ್ದರು.ಈಗ ಚಿನ್ನದಂಗಡಿಗಳಲ್ಲಿ(Jewelry Shops) ಸರ್ಪಗಾವಲಿನೊಂದಿಗೆ ಚಿನ್ನವನ್ನು(Gold) ಭದ್ರವಾಗಿ ಮಾರಾಟ ಮಾಡಲಾಗುತ್ತಿದೆ ಎಂಬುದಷ್ಟೇ ವ್ಯತ್ಯಾಸ

ಅಂದಿಗೂ ಇಂದಿಗೂ ಚಿನ್ನದ ಬೇಡಿಗೆ ತಗ್ಗಿಲ್ಲ. ಅದೇ ರೀತಿ ಬೆಲೆ ಕೂಡ ಏರಿಕೆಯಾಗುತ್ತಿದೆ. ವಿವಾಹ ಸಮಾರಂಭಗಳಲ್ಲಿ ಮಿರ ಮಿರ ಮಿಂಚುವ ಚಿನ್ನವನ್ನು ಕೊಳ್ಳಬೇಕಾದರೆ ಸಾಲ ಸೋಲ ಮಾಡುವ ಪರಿಸ್ಥಿತಿ ಬಂದೊದಗಿದೆ ಏಕೆಂದರೆ ಚಿನ್ನದ ದರ ಇಂದಿದ್ದಂತೆ ನಾಳೆ ಇರುವುದಿಲ್ಲ.

ಗ್ರಾಹಕರು ಚಿನ್ನದ ದರ ಇಳಿಕೆಯಾಗುತ್ತದೆ ಎಂದು ಆಶಿಸುತ್ತಿರುವಾಗಲೇ ಒಮ್ಮೆಲೆ ನಿಮ್ಮ ಕೈಗೆ ಸಿಗಲಾರೆ ಎಂದು ತುತ್ತ ತುದಿಗೇರುತ್ತದೆ. ಹೀಗಿರುವಾಗ ಚಿನ್ನ ಕೊಳ್ಳುವ ಗ್ರಾಹಕರು ಪರಿತಾಪ ಪಡುವುದಂತೂ ನಿಜವಾಗಿದೆ.

ಕೊಂಚ ಚಿನ್ನದ ದರ ಕಡಿಮೆಯಾದರೂ ಗ್ರಾಹಕರು ನಾ ಮುಂದು ತಾ ಮುಂದು ಎಂದು ಚಿನ್ನ ಖರೀದಿಯಲ್ಲಿ ತೊಡಗುತ್ತಾರೆ. ಇಂದಿನ ಚಿನ್ನ ಬೆಳ್ಳಿಯ ರೇಟ್‌ಗಳನ್ನು ಇಲ್ಲಿಯೇ ತಿಳಿದುಕೊಂಡು ಆಭರಣ ಖರೀದಿಸಿ ಎಂದೇ ನಾವು ಸಲಹೆ ನೀಡುತ್ತೇವೆ. ಹಾಗಿದ್ದರೆ ಇಂದಿನ ದರಗಳ ಬಗ್ಗೆ ತಿಳಿದುಕೊಳ್ಳೋಣ.

ಮಹಾನಗರಗಳಲ್ಲಿ ಚಿನ್ನದ ದರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 6,860 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 6,905, ರೂ. 6,860, ರೂ. 6,860 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 6,875 ರೂ. ಆಗಿದೆ.

ಪ್ರತಿ ಗ್ರಾಮ್ ಚಿನ್ನದ ಬೆಲೆ ಹೇಗಿದೆ? ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ, 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,613 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 6,860 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,484 ಆಗಿದೆ.

ಅದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 44,904 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 54,880 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 59,872 ಆಗಿದೆ.

ಇನ್ನು ಹತ್ತು ಗ್ರಾಂ, (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 56,130 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 68,600 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 74,840 ಆಗಿದೆ.

ನೂರು ಗ್ರಾಂ, (100GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,61,300 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 6,86,000 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,48,400 ಆಗಿದೆ.

ಬೆಳ್ಳಿಯ ದರವೇನು?
ಪೂಜಾ ಸಾಮಾಗ್ರಿಗಳು ಹಾಗೂ ಆಭರಣ ರೂಪದಲ್ಲಿ ಬಳಕೆಯಾಗುವ ಬೆಳ್ಳಿ ಕೂಡ ಇತ್ತೀಚಿನ ದಿನಗಳಲ್ಲಿ ದುಬಾರಿ ಎಂಬ ಹಣೆಪಟ್ಟಿ ಗಿಟ್ಟಿಸಿಕೊಂಡಿದೆ. ಬೆಳ್ಳಿಯ ಕಾಲ್ಗೆಜ್ಜೆ, ಸೊಂಟದ ಪಟ್ಟಿ, ಕಡ, ಬಳೆ ಹೀಗೆ ಬೆಳ್ಳಿಯಲ್ಲಿ ಕೂಡ ತರೇಹಾವಾರಿ ಆಭರಣಗಳು ದೊರೆಯುತ್ತಿವೆ. ಹೀಗಿದ್ದಾಗ ಮಹಿಳೆಯರ ಮನಸ್ಸು ಸಾಮಾನ್ಯವಾಗಿ ಬೆಳ್ಳಿಯ ಆಭರಣಗಳ ಕಡೆಗೆ ಹೋಗುತ್ತದೆ.

ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 94,700 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ.945.00 ರೂ. 9,450 ಹಾಗೂ ರೂ. 94,500 ಗಳಾಗಿವೆ.

ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 99,200 ಆಗಿದ್ದರೆ, ದೆಹಲಿಯಲ್ಲಿ ರೂ. 94,700, ಮುಂಬೈನಲ್ಲಿ ರೂ. 94,700 ಹಾಗೂ ಕೊಲ್ಕತ್ತದಲ್ಲೂ ರೂ. 94,700 ಗಳಾಗಿದೆ.

ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *

rtgh