ನಮಸ್ಕಾರ ಕರ್ನಾಟಕ, ಚಿನ್ನದ ಆಭರಣ ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಮಹಿಳೆಯರಿಗೆ ಬಂಗಾರದ ಆಭರಣಗಳೆಂದರೆ ಅಚ್ಚುಮೆಚ್ಚು. ಹಬ್ಬ ಹರಿದಿನಗಳು, ಶುಭ ಸಮಾರಂಭಗಳಿಗೆ ಹಾಗೂ ಮದುವೆಯಂತಹ ಶುಭ ಸಂಭ್ರಮಗಳಿಗೆ ಚಿನ್ನದ ಆಭರಣವನ್ನ ಖರೀದಿಸುವುದು ವಾಡಿಕೆ.
ಆದರೆ, ಕೆಲ ದಿನಗಳಿಂದ ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆಯಾಗಿ ದಾಖಲೆಯ ಮಟ್ಟ ತಲುಪಿತ್ತು. ಇದೀಗ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಳಿಕೆಯಾಗಿದ್ದು,ಚಿನ್ನವನ್ನ ಕೊಳ್ಳುವವರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಚಿನ್ನ ಖರೀದಿ ಮಾಡಲು ಕಾದು ಕುಳಿತಿದ್ದ ಗ್ರಾಹಕರಿಗೆ ಇಂದಿಗ ಶುಭ ಸುದ್ದಿ ಸಿಕ್ಕಿದ್ದು, ಚಿನ್ನ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿರುವುದು ಭಾರಿ ದೊಡ್ಡ ಸುದ್ದಿ ನೀಡಿದಂತೆ ಆಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಭರ್ಜರಿ ಏರಿಕೆಯಾಗಿದ್ದ ಚಿನ್ನದ ದರ ಇಂದು (ಶುಕ್ರವಾರ) ಇಳಿಕೆ ಕಂಡಿದ್ದು, ಬೆಳ್ಳಿ ಬೆಲೆ ಸಹ ಇಂದು ಇಳಿಕೆಯಾಗಿದೆ.
ಆಭರಣ ಚಿನ್ನ (22 ಕ್ಯಾರೆಟ್) ದ ಬೆಲೆ ಪ್ರತಿ ಗ್ರಾಂಗೆ 45 ರೂಪಾಯಿ ಕಡಿಮೆಯಾಗಿದ್ದರೆ, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 47 ರೂಪಾಯಿ ಕಡಿಮೆಯಾಗಿದೆ. ಗುರುವಾರ 6,97,500 ರೂಪಾಯಿ ಇದ್ದ 100 ಗ್ರಾಂ ಆಭರಣ ಚಿನ್ನದ ಬೆಲೆ ಇಂದು 6,93,000 ರೂಪಾಯಿಗೆ ಕುಸಿತವಾಗಿದೆ.
ಶುಕ್ರವಾರ ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6930 ರೂಪಾಯಿ ಆಗಿದೆ. 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 7277 ರೂಪಾಯಿ ಆಗಿದೆ.
ಗುರುವಾರ 7,48,400 ರೂಪಾಯಿ ಇದ್ದ 100 ಗ್ರಾಂ ಶುದ್ದ ಚಿನ್ನದ ಬೆಲೆ ಶುಕ್ರವಾರ 7,27,700 ರೂಪಾಯಿಗೆ ಕಡಿಮೆಯಾಗಿದೆ. ಇಂದು 1 ಗ್ರಾಂ ಶುದ್ಧ ಚಿನ್ನದ ಬೆಲೆ 7277 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಇನ್ನೂ ಕೇಂದ್ರ ಸರ್ಕಾರದಿಂದ ಮಧ್ಯಂತರ ಬಜೆಟ್ ಮಂಡನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು,ಈ ಸಂದರ್ಭದಲ್ಲಿ ಗ್ರಾಹಕರು ಬಂಗಾರದ ಬೆಲೆ ಕಡಿಮೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದು, ನಿರೀಕ್ಷೆಯಂತ ಚಿನ್ನದ ಬೆಲೆಯಲ್ಲಿ ಕಡಿಮೆಯಾಗು ಸಾಧ್ಯತೆ ಇದೆ.
ಇನ್ನು, ಚಿನ್ನದ ಬೆಲೆಗೆ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ದೆಹಲಿಯಲ್ಲಿ ಶುಕ್ರವಾರ ಒಂದೇ ದಿನ ಪ್ರತಿ ಕೆಜಿ ಬೆಳ್ಳಿ ಬೆಲೆ 1300 ರೂ. ಇಳಿಕೆಯಾಗಿದ್ದು, 94,700ಕ್ಕೆ ಇಳಿದಿದೆ. ಗುರುವಾರ ಬೆಳ್ಳಿ ಬೆಲೆಯಲ್ಲಿ 1000 ರೂ. ಏರಿಕೆಯಾಗಿತ್ತು. ಬೆಂಗಳೂರು ನಗರದಲ್ಲಿಯೂ ರೂ. ಪ್ರತಿ ಕೆಜಿಗೆ 1300 ರೂ.ಗೆ ಕುಸಿದಿದೆ.
ಇತರೆ ವಿಷಯಗಳು :
ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್ ಅಪ್ಡೇಟ್, ಇನ್ಮುಂದೆ ಒಟ್ಟು 1.78 ಲಕ್ಷದ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮಿ ಹಣ.
ಸ್ವಂತ ಮನೆ ಇಲ್ಲದವರಿಗೆ ಸಿಹಿ ಸುದ್ದಿ, 3 ಕೋಟಿ ಹೊಸ ಮನೆಗಳು ಬಿಡುಗಡೆ, ಇಂದೇ ಈ ಕೆಲಸ ಮಾಡಿ ಸ್ವಂತ ಮನೆ ಪಡೆದುಕೊಳ್ಳಿ.