ರಾಜ್ಯದ ರೈತರಿಗೆ ಸಿಹಿ ಸುದ್ದಿ, ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.
ಕರ್ನಾಟಕ ರಾಜ್ಯದ ತೋಟಗಾರಿಕೆ ಇಲಾಖೆ, ತೋಟಗಾರಿಕೆ ಬೆಳೆ ಬೆಳೆಯುವ ಮತ್ತು ಬೆಳೆಯಲು ಇಚ್ಛಿಸುವ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ರೈತರಿಗೆ ವಿಶೇಷ ಯೋಜನೆಗಳ ಅಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ. ಈ ಅರ್ಹ ಫಲಾನುಭವಿಗಳು ತಮ್ಮ ಅರ್ಜಿಗಳನ್ನು ಕಚೇರಿಯಲ್ಲಿ ಸಲ್ಲಿಸಬಹುದು.
ಯೋಜನೆಗಳು ಮತ್ತು ಅನುಕೂಲಗಳು
ಯೋಜನೆಯ ಹೆಸರು | ಸಹಾಯಧನ ಪ್ರಮಾಣ | ಅರ್ಹ ಫಲಾನುಭವಿಗಳು |
---|---|---|
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ | ಶೇ.50 ರಷ್ಟು | ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರು |
ಹೊಸ ಪ್ರದೇಶ ವಿಸ್ತರಣೆ | ||
ಕೃಷಿಹೊಂಡ | ||
ಈರುಳ್ಳಿ ಶೇಖರಣ ಘಟಕ | ||
ನೆರಳುಪರದೆ | ||
ಪ್ಯಾಕ್ ಹೌಸ್ ಮತ್ತು ತಳ್ಳುವಗಾಡಿ | ||
ಮಿನಿ ಟ್ರಾಕ್ಟರ್ (20 ಪಿಟಿಒ ಹೆಚ್ಪಿ) | ||
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಹನಿ ನೀರಾವರಿ) | ಶೇ.55 (ಸಾಮಾನ್ಯ ವರ್ಗ) ಮತ್ತು ಶೇ.90 (ಪರಿಶಿಷ್ಟ ವರ್ಗ) | ಸಾಮಾನ್ಯ ಮತ್ತು ಪರಿಶಿಷ್ಟ ವರ್ಗದ ರೈತರು |
ಕೇಂದ್ರ ಪುರಸ್ಕೃತ ಖಾದ್ಯ ತೈಲ ಅಭಿಯಾನ – ತಾಳೆ ಬೆಳೆ ಯೋಜನೆ | ಶೇ.50 ರಷ್ಟು | ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರು |
ವಿಶೇಷ ಮೀಸಲು
- ಅಲ್ಪಸಂಖ್ಯಾತ ವರ್ಗ: ಶೇ.15
- ವಿಕಲಾಂಗಚೇತನ ವರ್ಗ: ಶೇ.5
- ರೈತ ಮಹಿಳೆಯರು: ಶೇ.33
ಈ ಯೋಜನೆಗಳ ಅನುಕೂಲಗಳನ್ನು ಪಡೆದುಕೊಳ್ಳಲು ಆಸಕ್ತ ರೈತ ಫಲಾನುಭವಿಗಳು ತಮ್ಮ ಸಂಬಂಧಿಸಿದ ತಾಲ್ಲೂಕಿನ ತೋಟಗಾರಿಕೆ ಕಚೇರಿಯ ಸಂಪರ್ಕವನ್ನು ಹೊಂದಿ, ಹೆಚ್ಚಿನ ಮಾಹಿತಿಯನ್ನು ಪಡೆದು, ಅರ್ಜಿಯನ್ನು ಸಲ್ಲಿಸಬಹುದು.
ಪ್ರಕಟಣೆ: ಬಳ್ಳಾರಿ ತೋಟಗಾರಿಕೆ ಉಪ ನಿರ್ದೇಶಕ ಶ್ರೀ ಸಂತೋಷ್ ಸಪ್ಪಂಡಿ.
ಇತರೆ ವಿಷಯಗಳು :
LPG ಬಳಸುವವರಿಗೆ ಸಿಹಿ ಸುದ್ದಿ, ಸಿಲಿಂಡರ್ ಮೇಲೆ ವಿಶೇಷ ರಿಯಾಯಿತಿ ಲಭ್ಯ.
SSLC ವಿದ್ಯಾರ್ಥಿಗಳಿಗೆ ಸಿಗಲ್ಲಿದೆ ಉಚಿತ ಲ್ಯಾಪ್ಟಾಪ್, ಇಂದೇ ಈ ಕಚೇರಿಗೆ ಭೇಟಿ ನೀಡಿ.