ಹಲೋ ಸ್ನೇಹಿತರೆ, ದೇಶದಾದ್ಯಂತ ಕೇಂದ್ರ ಸರ್ಕಾರದ ಕೋಟ್ಯಾಂತರ ನೌಕರರು ಪ್ರಸಕ್ತ ವರ್ಷದ 7ನೇ ವೇತನ ಆಯೋಗದ ಎರಡನೇಯ ತುಟ್ಟಿಭತ್ಯೆ (DA) ಮತ್ತು ತುಟ್ಟಿಭತ್ಯೆ ಪರಿಹಾರ (DR) ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಹಾಗೆಯೇ ಸರ್ಕಾರ ಘೋಷಣೆಗಾಗಿ ಕಾಯುತ್ತಿದ್ದಾರೆ. ಕಳೆದ ಜನವರಿಯಲ್ಲಿ ಸರ್ಕಾರ ಶೇಕಡಾ 4 ರಷ್ಟು DR ಅನ್ನು ಏರಿಕೆ ಮಾಡಿತ್ತು. ಈ ವರ್ಷದ DA ಏರಿಕೆಗೆ ಬಗ್ಗೆ ಮಹತ್ವದ ಮಾಹಿತಿ ಬಿಡುಗಡೆ ಮಾಡಲಾಗಿದೆ ಕೊನೆವರೆಗೂ ಲೇಖನವನ್ನು ಓದಿ.

ಈ ಬಾರಿ 2024ನೇ ಸಾಲಿನ ಎರಡನೇ ಡಿಎ ಘೋಷಣೆ ಆಗುವ ದಿನಾಂಕ? ಎಷ್ಟು ಹೆಚ್ಚಳ ಆಗಲಿದೆ? ಉದ್ಯೋಗಿಗಳು ಏನೆಲ್ಲ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲಿ ತಿಳಿಸಲಾಗಿದೆ.
ಇದೇ ಸೆಪ್ಟಂಬರ್ ಮೊದಲ ವಾರದಲ್ಲಿ ಕೇಂದ್ರವು 7ನೇ ವೇತನ ಆಯೋಗದಡಿ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಹೆಚ್ಚಳದ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಹೆಚ್ಚಿದೆ. ಈ ಬಾರಿ ಕೇಂದ್ರವು DA ಮತ್ತು DR ನಲ್ಲಿ ಶೇಕಡಾ 3ರಷ್ಟು ಹೆಚ್ಚಳವನ್ನು ಘೋಷಿಸಬಹುದು ಎಂದು ಅಂದಾಜಿಸಲಾಗಿದೆ.
ಇದನ್ನು ಸಹ ಓದಿ: ಮುಂದಿನ ತಿಂಗಳಿನಿಂದ ಹೊಸ ‘BPL’ ಕಾರ್ಡ್ ವಿತರಣೆ! ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ
ಕಾಲಕ್ಕೆ ತಕ್ಕಂತೆ ಹೆಚ್ಚಾಗುವ ಬೆಲೆ ಏರಿಕೆ, ಹಣದುಬ್ಬರ ನಿರ್ವಹಿಸುವ ಉದ್ದೇಶದಿಂದ ಸರ್ಕಾರ ತನ್ನ ನೌಕರರಿಗೆ ವರ್ಷದಲ್ಲಿ ಎರಡು ಬಾರಿ ಅಂದರೆ 6 ತಿಂಗಳಿಗೊಮ್ಮೆ ಈ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಏರಿಕೆ ಮಾಡುತ್ತದೆ. ಜನವರಿಯಲ್ಲಿ ಏರಿಕೆ ಆಗುವುದನ್ನು ಮಾರ್ಚ್ ತಿಂಗಳಿನಲ್ಲಿ ಹಾಗೂ ಜುಲೈ ನಲ್ಲಿ ಏರಿಕೆ ಆಗುವುದನ್ನು ಸೆಪ್ಟಂಬರ್‌ನಲ್ಲಿ ಘೋಷಣೆ ಮಾಡುತ್ತದೆ.
ಇತರೆ ವಿಷಯಗಳು:
ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ!
ಬೆಂಗಳೂರು ಸೇರಿ ಮಲೆನಾಡಿನಲ್ಲಿ ಮತ್ತೆ ಹೆಚ್ಚಲಿದೆ ಮಳೆ, ಆರೆಂಜ್ ಅಲರ್ಟ್ ಘೋಷಣೆ.