ನಮಸ್ಕಾರ ಕರ್ನಾಟಕ, ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರದಿಂದ ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ.
ಈ ಯೋಜನೆಯಡಿ, ಕುಟುಂಬದ ಮುಖ್ಯಸ್ಥೆ ಮಹಿಳೆಗೆ ಪ್ರತಿ ತಿಂಗಳು ₹2,000 ನಗದು ಸಹಾಯಧನವನ್ನು ಅವರ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಈಗಾಗಲೇ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ, ನಗದು ಜಮಾ ಮಾಡದಿರುವ ಸಂದರ್ಭಗಳಲ್ಲಿ, ಅರ್ಜಿ ಸ್ಥಿತಿಯಲ್ಲಿ “ಐಟಿ ಮತ್ತು ಜಿಎಸ್‍ಟಿ ಪಾವತಿದಾರ” ಎಂದು ಸೂಚನೆ ಕಂಡುಬಂದಿದ್ದರೆ, ಈ ವಿಷಯವನ್ನು ಗಮನದಲ್ಲಿರಿಸಬೇಕು.
ಆದರೆ, ಐಟಿ ಮತ್ತು ಜಿಎಸ್‍ಟಿ ಪಾವತಿದಾರರ ಪಟ್ಟಿಗೆ ಸೇರದ ಫಲಾನುಭವಿಗಳಿಗೆ, ಹಣ ಜಮೆಯಾಗದಿದ್ದರೆ, ತಮ್ಮ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ.
ಅಗತ್ಯ ದಾಖಲೆಗಳಾದ ಪಡಿತರ ಚೀಟಿ ಸಂಖ್ಯೆ, ಪಾನ್ ನಂಬರ್, ಆದಾಯ ತೆರಿಗೆ ಇಲಾಖೆ ಅಥವಾ ವಾಣಿಜ್ಯ ತೆರಿಗೆ ಇಲಾಖೆಯಿಂದ ಪಡೆದ ಪತ್ರ, ನೋಟರಿಯಿಂದ ಅಥವಾ ಆಡಿಟರ್‌ರಿಂದ ಪಡೆದ ಪತ್ರ, ಹಾಗೂ ಅರ್ಜಿದಾರರ ಮನವಿ ಪತ್ರವನ್ನು ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳಲು ಕ್ರಮವಹಿಸುವುದು.
ಇತರೆ ವಿಷಯಗಳು:
ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ, ಪಿಎಂ ಸೂರ್ಯಘರ್ ಯೋಜನೆಗೆ ಅರ್ಜಿ ಆಹ್ವಾನ.
ರಾಜ್ಯದ ರೈತರಿಗೆ ಸಿಹಿ ಸುದ್ದಿ, ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.