ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಎಲ್ಲರಿಗೂ ತಿಳಿಸಬೇಕಾದ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರಿಗೆ ನೀಡುವ ₹2,000 ಮಾಸಿಕ ಸಹಾಯಧನವನ್ನು ಮುಂದುವರಿಸಲು ನಿರ್ಧರಿಸಿದೆ. ಈ ಯೋಜನೆ ಕಳೆದ ವರ್ಷದ ಆಗಸ್ಟ್ನಲ್ಲಿ ಪ್ರಾರಂಭವಾಯಿತು.
ಈ ಬಾರಿಯ ಲೋಕಸಭಾ ಚುನಾವಣೆ ಸೋತಿದ್ದರೂ, ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಮುಂದುವರಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕಾರ, ಅವರ ಅಧಿಕಾರಾವಧಿಯವರೆಗೆ ಈ ಯೋಜನೆ ಜಾರಿಗೆ ಇರುತ್ತದೆ.
ಗೃಹಲಕ್ಷ್ಮಿ ಯೋಜನೆ ಕುರಿತು ಮಾಹಿತಿ ಸರಿಯಾಗಿ ಸಿಗದಿರುವ ಕಾರಣ ಕೆಲವೊಮ್ಮೆ ಗೊಂದಲ ಉಂಟಾಗಿದೆ. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜನತೆಗೆ ಭರವಸೆ ನೀಡಿದ್ದು, ಹಣ ಬರದಿರುವವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದಿದ್ದಾರೆ.
ಅದೇ ಸಮಯದಲ್ಲಿ, ಸರ್ಕಾರ ಆರ್ಥಿಕವಾಗಿ ಸಧೃಡ ಮಹಿಳೆಯರನ್ನು (ITR) ಪಾವತಿಸುತ್ತಿರುವುದರಿಂದ, ಅವರ ಹೆಸರನ್ನು ಗೃಹಲಕ್ಷ್ಮಿ ಯೋಜನೆಯ ಪಟ್ಟಿಯಿಂದ ತೆಗೆದುಹಾಕಲು ನಿರ್ಧರಿಸಿದೆ. ಇದೇ ಆ. 1 ರಿಂದ ಈ ನಿಯಮ ಜಾರಿಗೊಳ್ಳಲಿದ್ದು, ನಕಲಿ ದಾಖಲೆಗಳೊಂದಿಗೆ ಅರ್ಜಿದಾರರ ಹೆಸರನ್ನು ಕೂಡ ಅಳಿಸಲಾಗುವುದು.