ನಮಸ್ಕಾರ ಕರ್ನಾಟಕ, ರಾಜ್ಯ ಸರ್ಕಾರ ಗೃಹಿಣಿಯರಿಗಾಗಿ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಸಂಬಂಧಿಸಿದ ಬಿಗ್ ಅಪ್ಡೇಟ್ಸ್ ಪ್ರಕಟಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗಾಗಲೇ ಗೃಹಿಣಿಯರ ಖಾತೆಗೆ ಜೂನ್ ತಿಂಗಳ ಹಣವನ್ನು ಜಮೆ ಮಾಡಿದ್ದು, ಆದರೆ ಈ ಹಣವು ಎಲ್ಲಾ ಖಾತೆಗಳಿಗೆ ತಲುಪಿಲ್ಲ. ಈ ಸಂದರ್ಭದಲ್ಲಿ, ಎನ್‌ಪಿಸಿಐ ಚೆಕ್ ಮಾಡುವಂತೆ ಸೂಚನೆ ನೀಡಿದೆ.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲ ಮಹಿಳೆಯರ ಖಾತೆಗೆ ಹಣ ಜಮೆ ಆಗಿಲ್ಲ. ರಾಜ್ಯದ ಪ್ರತೀ ಕುಟುಂಬದ ಹಿರಿಯ ಯಜಮಾನಿಗೆ ಈ ಯೋಜನೆಯ ಹಣ ನೀಡಬೇಕು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದಾದರೂ ಸಹ ಲಕ್ಷಾಂತರ ಮಂದಿಯ ಖಾತೆಗೆ ಹಣ ಇನ್ನೂ ಸಂದಾಯವಾಗಿಲ್ಲ.
ಗೃಹಲಕ್ಷ್ಮೀ ಯೋಜನೆ ಆರಂಭಗೊಂಡು 11 ತಿಂಗಳು ಕಳೆದರೂ, ಕೆಲವು ಫಲಾನುಭವಿಗಳಿಗೆ ಇದುವರೆಗೂ ಒಂದೇ ರೂಪಾಯಿ ಹಣ ಕೂಡ ಬಂದಿಲ್ಲ. ಇನ್ನು ಕೆಲವರಿಗೆ ಕಳೆದ ತಿಂಗಳ ಹಣ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಆಗಿಲ್ಲ. ಹೀಗಾಗಿ ಇಂತಹ ಫಲಾನುಭವಿಗಳಿಗಾಗಿ ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಂದಾಯವಾಗಿಲ್ಲವೆಂದರೆ, ನೀವು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಆಧಾರ್ ಜೋಡಣೆಗೆ ಕೆವೈಸಿ ಮಾಡಿಸಿಕೊಳ್ಳಬೇಕು. ಆಧಾರ್ ಕೆವೈಸಿ ಮಾಡಿದ ನಂತರ, ಪದೇ ಪದೇ ಬ್ಯಾಂಕಿಗೆ ಹೋಗುವ ಅಗತ್ಯವಿಲ್ಲ. ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂದು ತಿಳಿಯಲು, ನೀವು DBT Karnataka ಮೊಬೈಲ್ ಆಪ್ ಡೌನ್‌ಲೋಡ್ ಮಾಡಬಹುದು.
DBT Karnataka ಆಪ್‌ನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಂತರ ಓಟಿಪಿ ಹಾಕಿ, ಸ್ವಂತ ಪಾಸ್‌ವರ್ಡ್ ರಚನೆ ಮಾಡಿ, ಲಾಗಿನ್ ಬಟನ್ ಕ್ಲಿಕ್ ಮಾಡುವ ಮೂಲಕ ಪಾವತಿಯ ಸ್ಥಿತಿಯನ್ನು ಪರಿಶೀಲಿಸಬಹುದು. ನಿಮ್ಮ ಖಾತೆಗೆ ಯಾವ ದಿನದಂದು ಹಣ ಜಮೆ ಆಗಿದೆ, ಇದುವರೆಗೆ ಎಷ್ಟು ಹಣ ಪಾವತಿಯಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಆದ್ದರಿಂದ, ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ ಎಂದು ಚಿಂತಿಸದೆ, ಡಿಬಿಟಿ ಆಪ್ ಬಳಸಿ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ.
ಇತರೆ ವಿಷಯಗಳು :
ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಇನ್ಮುಂದೆ 300 ಯೂನಿಟ್ ಉಚಿತ ವಿದ್ಯುತ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದಿಂದ ಸೂರ್ಯಘರ್ ಯೋಜನೆ ಘೋಷಣೆ
ಸ್ವಂತ ಮನೆ ಇಲ್ಲದವರಿಗೆ ಸಿಹಿ ಸುದ್ದಿ, 3 ಕೋಟಿ ಹೊಸ ಮನೆಗಳು ಬಿಡುಗಡೆ, ಇಂದೇ ಈ ಕೆಲಸ ಮಾಡಿ ಸ್ವಂತ ಮನೆ ಪಡೆದುಕೊಳ್ಳಿ.