ಹಲೋ ಸ್ನೇಹಿತರೆ, ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಹಣ ಎರಡು ತಿಂಗಳುಗಳಿಂದ ಸರ್ಕಾರ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಿಲ್ಲ ಎಂದು ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇಂದು ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಅವರ ಖಾತೆಗೆ ಇಂದು ಸರ್ಕಾರ ವರ್ಗಾಯಿಸಲಿದೆ.
ಗೃಹಲಕ್ಷ್ಮಿ ಹಣ ಖಾತೆಗೆ ಸೇರಲು ಯಾಕೆ ವಿಳಂಬವಾಗುತ್ತಿದೆ ಎನ್ನುವುದರ ಕುರಿತು ಕೆಲವು ದಿನಗಳ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದ್ದು, ಪ್ರತೀ ತಿಂಗಳಿಗೆ 2,400 ಕೋಟಿ ರೂ. ಖರ್ಚಾಗುತ್ತಿದೆ. ಮಂಡ್ಯದಲ್ಲಿ ಡಿಪಿಟಿಗೆ ಪುಷ್ ಮಾಡಿ ಮೂರು ದಿನಗಳಾಗಿದೆ ಆದರೆ ಇನ್ನೂ ನಾಲ್ಕೈದು ಜಿಲ್ಲೆಗಳಿಗೆ ಯೋಜನೆಯ ಹಣ ದೊರೆಯಬೇಕಿದೆ. ಸ್ಥಳೀಯ ಮಟ್ಟವಾಗಿ ಯಜಮಾನಿಯರ ಖಾತೆಗೆ ವರ್ಗಾವಣೆಯಾಗಬೇಕು. ದೊಡ್ಡ ಮೊತ್ತದ ಹಣ ಆಗಿರುವ ಕಾರಣ ಹಣ ಜಮಾ ವಿಳಂಬ ಆಗುತ್ತಿರುತ್ತದೆ ಎಂದರು.
ಇದನ್ನು ಓದಿ: ರಾಜ್ಯದ ರೈತರಿಗೆ ಕೃಷಿ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ!
ಜೂನ್ ತಿಂಗಳ ಹಣ ಮಹಿಳೆಯರ ಖಾತೆಗೆ ವರ್ಗಾವಣೆಯಾಗಿದೆ. ಜುಲೈ ತಿಂಗಳ ಹಣ ಇನ್ನೆರಡು ದಿನಗಳಲ್ಲಿ ಖಾತೆಗಳಿಗೆ ವರ್ಗಾವಣೆಯಾಗಲಿದೆ. ಆಗಸ್ಟ್ ತಿಂಗಳ ಹಣ ಕೂಡ ಯಜಮಾನಿಯರ ಖಾತೆಗೆ ವರ್ಗಾವಣೆಯಾಗಲಿದೆ. ಒಂದು ದಿನಕ್ಕೆ ನನಗೆ 500 ಕರೆಗಳು ಬರುತ್ತವೆ. ಮಂತ್ರಿಯಾಗಿ ಎಲ್ಲ ಕರೆಗಳಿಗೂ ನಾನು ಉತ್ತರ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಇದೀಗ ತಾಂತ್ರಿಕ ದೋಷಗಳೆಲ್ಲವೂ ಬಗೆಹರಿದಿದ್ದು, ಇಂದೇ ಮಹಿಳೆಯರ ಅವರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಎರಡು ತಿಂಗಳ ಒಟ್ಟು 4 ಸಾವಿರ ಹಣವನ್ನು ಖಾತೆಗೆ ಜಮೆ ಮಾಡಲಾಗುತ್ತಿದೆ. ಹಾಗಾಗಿ 2000 ನಿರೀಕ್ಷೆಯಲ್ಲಿದ್ದ ಮಹಿಳೆಯರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ.
ಇತರೆ ವಿಷಯಗಳು:
ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿಗೆ ಪರಿಹಾರ ವಿತರಣೆ! ರೈತರ ಖಾತೆಗೆ ನೇರ ವರ್ಗಾವಣೆ
ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ಪಡೆಯಲು ಆ.31 ಕೊನೆಯ ದಿನಾಂಕ!