ಹಲೋ ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಂತಿನ ಹಣ ಬರುವಿಕೆಗಾಗಿ ಕಾಯುತ್ತಿದ್ದಾರೆ. 11 ಮತ್ತು 12ನೇ ಕಂತಿನ ಹಣ ರೂ 4,000 ಫಲಾನುಭವಿಗಳ ಖಾತೆಗೆ DBT ಪೇಮೆಂಟ್ ಮೂಲಕ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಈ ಬಗ್ಗೆ ಜನಾಂದೋಲನಾ ಸಮಾವೇಶದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಂದಿನಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಲಿದೆ ಎಂದು ಮಾಹಿತಿ ನೀಡಿದರು.
ಇಂದಿನಿಂದ ಗೃಹಲಕ್ಷ್ಮಿ ಯೋಜನೆಯ 2 ಕಂತಿನ ಹಣ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಯಜಮಾನಿಯರು ಮನೆಯಲ್ಲೇ ಕುಳಿತು ಮೊಬೈಲ್ ನಲ್ಲೇ ಹಣ ಬಂದಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನೂ 2 ದಿನದ ಒಳಗೆ 11 ಮತ್ತು 12ನೇ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ 4000 ರೂಪಾಯಿ ಬರುವ ಸಾಧ್ಯತೆ ಕೂಡ ಇದೇ ಎನ್ನಲಾಗಿದೆ.
ಇದನ್ನು ಓದಿ: SSC 5000 ಪೋಸ್ಟ್‌ಗಳ ಭರ್ಜರಿ ನೇಮಕಾತಿ! 10 ರಿಂದ ಪದವಿ ವರೆಗಿನ ಎಲ್ಲಾರಿಗೂ ಉದ್ಯೋಗ
ಗೃಹಲಕ್ಷ್ಮಿ ಹಣ ಸ್ಟೇಟಸ್ ತಿಳಿದುಕೊಳ್ಳುವ ವಿಧಾನ?
- ಮೊದಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿಕೊಳ್ಳಿ.
- ನಂತರ ಪ್ಲೇ ಸ್ಟೋರ್ ನಲ್ಲಿ DBT Karnataka ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
- ಡೌನ್ಲೋಡ್ ಮಾಡಿದ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ
- ನಂತರ App ನಲ್ಲಿ ಆಧಾರ್ ಕಾರ್ಡ್ ನಂಬರ್ ಮತ್ತು ಮೊಬೈಲ್ ನಂಬರ್ ಹಾಕಿ
- ನಂತರ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ನಂಬರ್ ಗೆ ಓಟಿಪಿ ಕಳುಹಿಸಲಾಗುತ್ತದೆ ಅದನ್ನು ಟೈಪ್ ಮಾಡಿ.
- ನಂತರ ನಾಲ್ಕು ಡಿಜಿಟ್ ಇರುವ ಯಾವುದೇ ಕೋಡನ್ನು ನೀವು ಕ್ರಿಯೇಟ್ ಮಾಡಬೇಕಾಗುತ್ತದೆ.
- ನಂತರ ಮುಖಪುಟದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನಭಾಗ್ಯ ಯೋಜನೆ ಹಣ ಬಂರಿರುವ ಎಲ್ಲಾ ವಿವರಗಳನ್ನು ನೀಡಬಹುದು.
ಇತರೆ ವಿಷಯಗಳು:
ಕೊನೆಗೂ ಇಳಿಕೆಯಾದ ಬಂಗಾರದ ಬೆಲೆ; 10 ಗ್ರಾಂ ಚಿನ್ನದ ಬೆಲೆ ಇಷ್ಟೇನಾ?
Good News : ವರ್ಷದ ಸಂಭ್ರಮಕ್ಕೆ ಗೃಹಜ್ಯೋತಿ ಯೋಜನೆಯ 8,844 ಕೋಟಿ ರೂ. ಬಿಲ್ ಪಾವತಿಸಿದ ಸರ್ಕಾರ