ಬೆಂಗಳೂರಿನಲ್ಲಿದೆ ಸರ್ಕಾರಿ ಉದ್ಯೋಗಾವಕಾಶ, ಮಾಸಿಕ ವೇತನ ₹ 26,700 ನೀಡಲಿದ್ದಾರೆ.

JNCASR Recruitment 2024: ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್( Jawaharlal Nehru Centre For Advanced Scientific Research) ಖಾಲಿ ಇರುವ 2 ಆಫೀಸ್ ಎಕ್ಸಿಕ್ಯೂಟಿವ್​​(Office Executive) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಶೈಕ್ಷಣಿಕ ಅರ್ಹತೆ:

ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಸಂಸ್ಥೆಯ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ 13, 2024ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:

ಮಾಸಿಕ ₹ 26,700 ನೀಡಲಿದ್ದಾರೆ.

ಉದ್ಯೋಗದ ಸ್ಥಳ:

ಬೆಂಗಳೂರು.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಸಂದರ್ಶನ

ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 28/06/2024
ಇ-ಮೇಲ್ ಕಳುಹಿಸಲು ಕೊನೆಯ ದಿನ: ಜುಲೈ 13, 2024

ಅಪ್ಲೈ ಮಾಡೋದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ acoord@jncasr.ac.in ಗೆ ಕಳುಹಿಸಬೇಕು.

Apply OnlineClick here

Leave a Reply

Your email address will not be published. Required fields are marked *

rtgh