ಹಲೋ ಸ್ನೇಹಿತರೆ, ರಾಜ್ಯ ಸರ್ಕಾರವು ಶಾಲಾ ಕಾಲೇಜು ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು, ಕಲಿಕೆ ಭಾಗ್ಯ ಯೋಜನೆಯಡಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳು ವಿದ್ಯಾಭ್ಯಾಸಕ್ಕೆ ಮಂಡಳಿಯು ಕಲಿಕೆ ಭಾಗ್ಯ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರೆ. ಫಲಾನುಭವಿಯು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಕಟ್ಟಡ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ಹಿಂದುಳಿಯದಂತೆ ತಡೆಯಲು ಮತ್ತು ಶೈಕ್ಷಣಿಕವಾಗಿ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ನರ್ಸರಿಯಿಂದ ಸ್ನಾತಕೋತ್ತರ ಪದವಿಯವರೆಗಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
ಅರ್ಹತೆ ಮತ್ತು ಮಾನದಂಡಗಳು
- ವಿದ್ಯಾರ್ಥಿಯ ತಂದೆ ಅಥವಾ ತಾಯಿ ಕಟ್ಟಡ ಕಾರ್ಮಿಕರಾಗಿದ್ದು, ಮಂಡಳಿಯಲ್ಲಿ ಹೆಸರು ನೋಂದಣಿಯಾಗಿರಬೇಕು ಹಾಗೂ ನೋಂದಣಿಯು ಚಾಲ್ತಿಯಲ್ಲಿರಬೇಕು.
- ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಮುಂದಿನ ತರಗತಿಗೆ ದಾಖಲಾಗಿರಬೇಕು.
- ನೋಂದಾಯಿತಿ ಕಾರ್ಮಿಕರ ಇಬ್ಬರು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.
ಇದನ್ನು ಓದಿ: ಉದ್ಯೋಗಿಗಳಿಗೆ ಶಾಕ್: ಇನ್ಮುಂದೆ 3 ತಿಂಗಳಿಗೊಮ್ಮೆ ವೇತನ ಖಾತೆಗೆ!
ಕಲಿಕಾ ಭಾಗ್ಯ ವಿದ್ಯಾರ್ಥಿವೇತನ ವಿವರ
- 1 – 3ನೇ ತರಗತಿ ವಿದ್ಯಾರ್ಥಿಗಳಿಗೆ – ರೂ.2,000/-.
- 4 – 6ನೇ ತರಗತಿ ವಿದ್ಯಾರ್ಥಿಗಳಿಗೆ – ರೂ.3,000/-.
- 7 – 8ನೇ ತರಗತಿ ವಿದ್ಯಾರ್ಥಿಗಳಿಗೆ – ರೂ.4,000/-.
- 9 – 10ನೇ ತರಗತಿ ವಿದ್ಯಾರ್ಥಿಗಳಿಗೆ – ರೂ.6,000/-.
- ಪ್ರಥಮ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ – ರೂ. 6,000/-.
- ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ- ರೂ.8,000/-.
- ಐಟಿಐ ಮತ್ತು ಡಿಪ್ಲೊಮ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ – ರೂ. 7,000/-.
- ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ – ರೂ.10,000/-.
- ವೃತ್ತಿಪರ ಕೋರ್ಸ್‌ಗಳಿಗೆ – ರೂ.20,000/-.
- ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ – ರೂ. 25,000/
ಇತರೆ ವಿಷಯಗಳು:
ಆಗಸ್ಟ್ 31st ಆರ್‌ಸಿ ಮತ್ತು ಡಿಎಲ್ ಇರುವವರು ಈ ಕೆಲಸ ಮಾಡಿ! ಇಲ್ಲದಿದ್ದರೆ ಲೈಸೆನ್ಸ್ ಆಗಲಿದೆ ರದ್ದು
ಪಾನ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ! ಈ ರೀತಿಯ ದಾಖಲೆಯಾಗಿ ಸಹ ಬಳಸಬಹುದು