ಮಳೆರಾಯ ಬಿಡುವು ನೀಡದೆ ಅಬ್ಬರಿಸುತ್ತಿದ್ದಾನೆ. ಇದೇ ಕಾರಣಕ್ಕೆ ಈಗ ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ ಶುರುವಾಗಿದೆ. ಮಲೆನಾಡು ಕರ್ನಾಟಕ, ಕರಾವಳಿ ಕರ್ನಾಟಕ ಮಾತ್ರವಲ್ಲ ಉತ್ತರ ಕರ್ನಾಟಕ ಭಾಗದಲ್ಲೂ ಮಳೆ ಅಬ್ಬರಿಸುತ್ತಿದೆ. ಹಾಗಾದ್ರೆ ಇದೀಗ ರಜೆ ಘೋಷಣೆ ಮಾಡಿರುವ ಜಿಲ್ಲೆಗಳು ಯಾವುವು?
ಕೇವಲ 3 ತಿಂಗಳ ಹಿಂದೆ ಕರ್ನಾಟಕದ ಜನರು ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದರು. ಹೀಗೆ ಬೇಗ ಭರ್ಜರಿ ಮಳೆ ಬರಲಿ ದೇವರೆ ಅಂತಾ ಬೇಡಿಕೆ ಕೂಡ ಇಟ್ಟಿದ್ದರು. ಆದರೆ ಈಗ ನೋಡಿ ಮಳೆ ಅಬ್ಬರಕ್ಕೆ ಇಡೀ ಕರ್ನಾಟಕ ಬೆಚ್ಚಿಬಿದ್ದಿದೆ. ಅಲ್ಲದೆ ಮಳೆ ನಿಂತರೆ ಸಾಕು ಅಂತಾ ಜನ ಬೇಡುವ ಪರಿಸ್ಥಿತಿ ಬಂದಿದೆ.
ಕರ್ನಾಟಕದಲ್ಲಿ ಈಗ ಭರ್ಜರಿ ಮಳೆ ಬೀಳುತ್ತಿರುವ ಕಾರಣ ಜನರು ಕೂಡ ಬೆಚ್ಚಿಬಿದ್ದಿದ್ದು ಮಳೆ ಆರ್ಭಟ ಕಡಿಮೆ ಆಗಲಿ ದೇವರೆ ಅಂತಾ ಪೂಜೆ & ಪ್ರಾರ್ಥನೆಯನ್ನು ಮಾಡ್ತಿದ್ದಾರೆ. ಆದರೂ ಭರ್ಜರಿ ಮಳೆ ಮುಂದುವರಿದಿದ್ದು, ನಾಳೆ ಕೂಡ ಶಾಲಾ & ಕಾಲೇಜು ಬಂದ್ ಆಗಲಿವೆ. ಯಾಕಂದ್ರೆ ಭಾರಿ ಮಳೆ ಕಾರಣಕ್ಕೆ ಶಾಲಾ & ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಕರ್ನಾಟಕದ ಕರಾವಳಿ & ಮಲೆನಾಡು ಪ್ರದೇಶ ಮಾತ್ರವಲ್ಲದೆ ಅನೇಕ ಜಿಲ್ಲೆಗಳು ಬೆಚ್ಚಿಬಿದ್ದಿವೆ. ಅದರಲ್ಲೂ ಕಾವೇರಿ ನದಿಯ ಅಕ್ಕಪಕ್ಕ ಇರುವ ಜಿಲ್ಲೆಗಳಲ್ಲಿ ಭಾರಿ ಪ್ರವಾಹ ಭೀತಿ ಎದುರಾಗಿದ್ದು ಕೆಆರ್‌ಎಸ್, ಕಬಿನಿ, ಹೇಮಾವತಿ, ಹಾರಂಗಿ ಸ್ಥಿತಿ ಕೈಮೀರಿ ಹೋಗಿದೆ.
ಇಂತಹ ಸಮಯಕ್ಕೆ ಮತ್ತೊಮ್ಮೆ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಕಾಲ ಭರ್ಜರಿ ಮಳೆ ಬೀಳಲಿದೆ ಎನ್ನಲಾಗಿದೆ. ಹೀಗಾಗಿ ಹಲವು ಶಾಲಾ & ಕಾಲೇಜುಗಳು ಬಂದ್ ಆಗಲಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.
ಈಗಿನ ಮಾಹಿತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಹಲವು ಶಾಲೆಗಳಿಗೆ ರಜೆ ಘೋಷಣೆ ಮಾಡಿ, ಆದೇಶ ನೀಡಲಾಗಿದೆ. ಇದರ ಜೊತೆಗೆ, ಕರಾವಳಿ ಭಾಗದ ಇನ್ನೂ ಹಲವು ಪ್ರದೇಶದಲ್ಲಿ ರಜೆ ಘೋಷಣೆ ಆಗುವ ನಿರೀಕ್ಷೆ ಇದೆ.
ಹಾಗೇ ಈ ನಡುವೆ ಬೆಳಗಾವಿ ಜಿಲ್ಲೆಯಲ್ಲೂ ಶಾಲೆಗಳಿಗೆ ಈ ಸಮಯದಲ್ಲಿ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಶಾಲಾ & ಕಾಲೇಜುಗಳಿಗೆ ರಜೆಯನ್ನ ಘೋಷಣೆ ಮಾಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಈ ನಡುವೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಇದೇ ರೀತಿ ಮುಂದುವರಿಯಲಿದೆ. ಮುಂದಿನ 4 ದಿನಗಳ ಕಾಲ ಕರ್ನಾಟಕದ ಕರಾವಳಿ & ಮಲೆನಾಡು ಪ್ರದೇಶದಲ್ಲಿ ಮಳೆ ಅಬ್ಬರ ಇದೇ ರೀತಿ ಮುಂದುವರಿಯುವ ಮುನ್ಸೂಚನೆ ಇದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಇತರೆ ವಿಷಯಗಳು :
ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್ ಅಪ್ಡೇಟ್, ಇನ್ಮುಂದೆ ಒಟ್ಟು 1.78 ಲಕ್ಷದ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮಿ ಹಣ.
ಸ್ವಂತ ಮನೆ ಇಲ್ಲದವರಿಗೆ ಸಿಹಿ ಸುದ್ದಿ, 3 ಕೋಟಿ ಹೊಸ ಮನೆಗಳು ಬಿಡುಗಡೆ, ಇಂದೇ ಈ ಕೆಲಸ ಮಾಡಿ ಸ್ವಂತ ಮನೆ ಪಡೆದುಕೊಳ್ಳಿ.