ನಮಸ್ಕಾರ ಕರ್ನಾಟಕ, ನಮ್ಮ ರಾಜ್ಯ ಸರ್ಕಾರವು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಮತ್ತು ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು, ಸ್ವಾವಲಂಬಿ ಸಾರಥಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆ ಮೂಲಕ, ಯುವಕರು ತಮ್ಮ ಸ್ವಂತ ವಾಹನವನ್ನು ಖರೀದಿಸಲು ಸಹಾಯಧನವನ್ನು ಪಡೆಯಬಹುದು. ಇಲ್ಲಿದೆ ಈ ಯೋಜನೆಯ ಸಂಪೂರ್ಣ ವಿವರಗಳು.
ಸ್ವಾವಲಂಬಿ ಸಾರಥಿ ಯೋಜನೆ
ಕರ್ನಾಟಕ ಸ್ವಾವಲಂಬಿ ಸಾರಥಿ ಯೋಜನೆಯಡಿ, ಸರಕಾರವು ಸರಕು ಸಾಗಣೆ ವಾಹನಗಳು, ಟ್ಯಾಕ್ಸಿಗಳು ಮತ್ತು ಪ್ಯಾಸೆಂಜರ್ ಆಟೋ ರಿಕ್ಷಾಗಳ ಖರೀದಿಗೆ ಸಬ್ಸಿಡಿ ಒದಗಿಸುತ್ತದೆ. ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುವವರು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಾಗಿರಬೇಕು.
ಸಬ್ಸಿಡಿ ವಿವರಗಳು
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 4,00,000 ರೂ. ಅಥವಾ ವಾಹನದ ಮೊತ್ತದ 75%
ಅಲ್ಪಸಂಖ್ಯಾತರಿಗೆ: 3,00,000 ರೂ. ಅಥವಾ ವಾಹನದ ಮೊತ್ತದ 50%
ಒಬಿಸಿ ಅಭ್ಯರ್ಥಿಗಳಿಗೆ: 3,00,000 ರೂ.
ಪ್ಯಾಸೆಂಜರ್ ಆಟೋರಿಕ್ಷಾಗಳಿಗೆ: 75,000 ರೂ.
ಅರ್ಹತಾ ಮಾನದಂಡಗಳು
ಅರ್ಜಿದಾರರು ಕರ್ನಾಟಕದ ನಿವಾಸಿಗಳಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯವು 4,50,000 ರೂ. ಗಿಂತ ಕಡಿಮೆ ಆಗಿರಬೇಕು.
ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದ ನಡುವೆ ಇರಬೇಕು.
ಚಾಲನಾ ಪರವಾನಿಗೆ ಹೊಂದಿರಬೇಕು.
ಅರ್ಜಿದಾರರು ಕಳೆದ 5 ವರ್ಷಗಳಲ್ಲಿ ಯಾವುದೇ ಸರ್ಕಾರದ ಯೋಜನೆಯ ಲಾಭವನ್ನು ಪಡೆಯಿರಬಾರದು.
ಅಗತ್ಯ ದಾಖಲೆಗಳು
- ನಿವಾಸದ ಪುರಾವೆ
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಬ್ಯಾಂಕ್ ಖಾತೆ ವಿವರಗಳು
- ಆದಾಯ ಪ್ರಮಾಣಪತ್ರ
- ಚಾಲನಾ ಪರವಾನಿಗೆ
- ಆಧಾರ್ ಕಾರ್ಡ್
- ಅಲ್ಪಸಂಖ್ಯಾತರ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ವಾಹನದ ವಿವರಗಳು
- ಸ್ವಯಂ ಘೋಷಣೆ ನಮೂನೆ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸಲು, ಸಂಬಂಧಿಸಿದ ನಿಗಮ ಮಂಡಳಿಗೆ ಭೇಟಿ ನೀಡಿ. ಈಗಾಗಲೇ ಕರ್ನಾಟಕ ಸರ್ಕಾರವು ಅರ್ಜಿಗಳನ್ನು ಆಹ್ವಾನಿಸಿದೆ.
ಇತರೆ ವಿಷಯಗಳು:
ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ, ಪಿಎಂ ಸೂರ್ಯಘರ್ ಯೋಜನೆಗೆ ಅರ್ಜಿ ಆಹ್ವಾನ.
ರಾಜ್ಯದ ರೈತರಿಗೆ ಸಿಹಿ ಸುದ್ದಿ, ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.