ನಮಸ್ಕಾರ ಕರ್ನಾಟಕ, ರಾಜ್ಯದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ರಾಜ್ಯದ ಎಲ್ಲಾ ರೈತರಿಗೆ ವಿಶೇಷ ಘೋಷಣೆಯನ್ನು ಮಾಡಿದ್ದಾರೆ. ಇನ್ನು ರಾಜ್ಯದ ಪ್ರತಿಯೊಬ್ಬ ರೈತನಿಗೂ, ಅವರ ಜಮೀನು ನೀರಾವರಿ ಅಥವಾ ಒಣಜಮೀನು ಇರಲಿ, ಕೃಷಿ ಹೊಂಡವನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ನೀಡಿದ ಸೂಚನೆಯಂತೆ, ಎಲ್ಲ ಜಮೀನಿನಲ್ಲಿಯೂ ಕೃಷಿ ಹೊಂಡವನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ. ಇದುವರೆಗೆ ನೀರಾವರಿ ಜಮೀನುಗಳಲ್ಲಿ ಈ ಅವಕಾಶ ನೀಡಲಾಗಿರಲಿಲ್ಲ. ಈಗ, ರಾಜ್ಯದ ಎಲ್ಲ ಜಮೀನಿನಲ್ಲಿಯೂ ಕೃಷಿ ಹೊಂಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ರಾಜ್ಯ ಸರ್ಕಾರವು ಪ್ರತಿಯೊಬ್ಬ ರೈತನಿಗೂ ಕೃಷಿ ಹೊಂಡ ನಿರ್ಮಾಣಕ್ಕಾಗಿ ಶೇಕಡಾ 50 ರಷ್ಟು ಸಬ್ಸಿಡಿ ಸಹಾಯಧನವನ್ನು ನೀಡಲು ಮುಂದಾಗಿದೆ. ಈ ಕ್ರಮದಿಂದ, ರಾಜ್ಯಾದ್ಯಾಂತ ಪ್ರತಿಯೊಂದು ಜಮೀನಿನಲ್ಲಿ ಕೃಷಿ ಹೊಂಡ ಇರುವಂತೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಇದಕ್ಕೂ ಮೀರಿಸಿ, ಕೃಷಿ ಹೊಂಡಗಳಿಗೆ ಸುರಕ್ಷತೆಯ ನಿರ್ವಹಣೆಯನ್ನು ಕಡ್ಡಾಯವಾಗಿ ಮಾಡಬೇಕಾಗಿದೆ. ಇಲ್ಲದಿದ್ದರೆ, ಮನುಷ್ಯರು ಮತ್ತು ಜಾನುವಾರುಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ.
ನೀವು ರೈತರಾಗಿದ್ದರೆ ಅಥವಾ ರೈತ ಕುಟುಂಬಕ್ಕೆ ಸೇರಿದವರಾಗಿದ್ದರೆ, ನಿಮ್ಮ ಜಮೀನಿನಲ್ಲಿ ಕೃಷಿ ಹೊಂಡವನ್ನು ನಿರ್ಮಿಸಲು ಸರ್ಕಾರದ ಸಹಾಯಧನವನ್ನು ಪಡೆಯಲು ಅರ್ಜಿ ಸಲ್ಲಿಸಲು ಮತ್ತು ಇತರ ಮಾಹಿತಿ ತಿಳಿದುಕೊಳ್ಳಲು ಈ ಘೋಷಣೆಯು ಪ್ರಮುಖವಾಗಿದೆ.
ಇನ್ನು ಮುಂದೆ ನೀರಾವರಿ ಪ್ರದೇಶಗಳಲ್ಲಿಯೂ ಕೃಷಿ ಹೊಂಡಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ವಿಧಾನಪರಿಷತ್‌ನಲ್ಲಿ ಸದಸ್ಯ ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಚಲುವರಾಯಸ್ವಾಮಿ, ಈಗಾಗಲೇ 106 ತಾಲೂಕುಗಳಲ್ಲಿ ಕೃಷಿ ಹೊಂಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಮತ್ತು ಈ ಕ್ರಮದ ಮೂಲಕ ಎಲ್ಲ ರೈತರಿಗೆ ಅನುಕೂಲವಾಗುತ್ತದೆ ಎಂದರು.
ನೀವು ಕೃಷಿ ಹೊಂಡವನ್ನು ನಿರ್ಮಿಸಲು ಸಹಾಯಧನ ಪಡೆಯಲು, ಸರ್ಕಾರಿ ತಂತ್ರಜ್ಞರಿಗೆ ಸಂಪರ್ಕಿಸಿ, ಅಗತ್ಯವಿರುವ ಅರ್ಜಿಯನ್ನು ಸಲ್ಲಿಸಬಹುದು.
ಇತರೆ ವಿಷಯಗಳು:
ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ, ಇಲ್ಲಿದೆ ಪಿಂಚಣಿ ಕುರಿತು ಸಂಪೂರ್ಣ ಮಾಹಿತಿ.
2024-25ನೇ ಸಾಲಿನ ʻNMMSʼ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ವಿದ್ಯಾರ್ಥಿಗಳು ಈ ದಿನಾಂಕದೊಳಗೆ ಅಪ್ಲೇ ಮಾಡಿ