ನೆರೆಯ ರಾಜ್ಯಗಳ ಮದ್ಯದ ಬೆಲೆಗೆ ಅನುಗುಣವಾಗಿ ರಾಜ್ಯದಲ್ಲಿ ಮದ್ಯ & ಬಿಯರ್ ನ ಬೆಲೆಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರದ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.
ಇದರಿಂದ ರಾಜ್ಯದಲ್ಲಿ ಮದ್ಯದ ಬೆಲೆಯಲ್ಲಿ ಸ್ವಲ್ಪಮಟ್ಟಿನಲ್ಲಿ ವ್ಯತ್ಯಾಸವಾಗಲಿದೆ. ಪರಿಷ್ಕೃತ ಬೆಲೆ ಆಗಸ್ಟ್ 27ರಿಂದಲೇ ಜಾರಿಗೆ ಬರಲಿದೆ. ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವಂತಹ ಪ್ರೀಮಿಯಂ ಬ್ರಾಂಡ್ ಗಳ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಲಿದ್ದು, ಮದ್ಯಪ್ರಿಯರಿಗೆ ಇಂದು ಸಿಹಿ ಸುದ್ದಿ ಸಿಕ್ಕಂತಾಗಿದೆ.
ಕರಡು ಅಧಿಸೂಚನೆಯನ್ನು ಹೊರಡಿಸಿ ಒಂದೂವರೆ ತಿಂಗಳಾದರೂ ಅಂತಿಮಗೊಳಿಸದೇ ಇರುವ ಕಾರಣ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬ್ರಾಂಡ್ ಗಳ ಮದ್ಯಕ್ಕೆ ತುಂಬಾ ಕೊರತೆಯುಂಟಾಗಿತ್ತು. ಸರ್ಕಾರದ ಆಕ್ಷೇಪಣೆಯನ್ನು ಸ್ವೀಕರಿಸಿದ ನಂತರ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಅಂತಿಮ ಅಧಿಸೂಚನೆಯಂತೆ ಸ್ಲ್ಯಾಬ್ ಗಳ ಸಂಖ್ಯೆಯು 18 ರಿಂದ 16ಕ್ಕೆ ಇಳಿಸಲಾಗಿದೆ.
ಮೊದಲ 3 ಸ್ಲ್ಯಾಬ್ ಗಳಲ್ಲಿ ಬೆಲೆಯ ವ್ಯತ್ಯಾಸವಾಗುವುದಿಲ್ಲ. ನಾಲ್ಕನೇ ಸ್ಲ್ಯಾಬ್ ನಲ್ಲಿ ಎಣ್ಣೆಯ ದರವು ಸ್ವಲ್ಪ ಮಟ್ಟಿಗೆ ಏರಿಕೆಯಾಗಲಿದೆ. ಉಳಿದಂತೆ 5ನೇ ಸ್ಲಾಬ್ ನ ನಂತರ 16ನೇ ಸ್ಲ್ಯಾಬ್ ವರೆಗೆ ಬೆಲೆಯು ಕಡಿಮೆಯಾಗಲಿದೆ. ಆ ಸ್ಲ್ಯಾಬ್ ಗಳಲ್ಲಿನ ವಿಸ್ಕಿ, ರಮ್, ಬ್ರಾಂಡಿಗಳ ದರ ಸಹಜವಾಗಿಯೇ ಕಡಿಮೆಯಾಗಲಿದೆ. ಒಟ್ಟಾರೆ ಮದ್ಯದ ಬೆಲೆ ಕಡಿಮೆಯಾಗಲಿದ್ದು, ಮದ್ಯದ ಮಾರುಕಟ್ಟೆಯ ವಿಸ್ತರಣೆಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.
ಇತರೆ ವಿಷಯಗಳು:
ಸರ್ಕಾರಿ ನೌಕರರಿಗೆ ಬಂಪರ್ ಬಹುಮಾನ.. ನೌಕರರ ವೇತನ ಹಾಗೂ ಪಿಂಚಣಿಯಲ್ಲಿ ಭಾರಿ ಏರಿಕೆ!
ಯಾತ್ರಿಕರಿಗೆ ಹೊಸ ನಿಯಮ! ನೋಂದಣಿ ಶುಲ್ಕ ರದ್ದು, ಅನುಕೂಲಕರ ಶುಲ್ಕ ಡಬಲ್