ಹಲೋ ಸ್ನೇಹಿತರೆ, ರಾಜ್ಯದಲ್ಲಿ ಇತ್ತಿಚಿಗೆ ದಿನೇ ದಿನೇ ಮದ್ಯದ ದರವನ್ನು ಹೆಚ್ಚಳ ಮಾಡಲಾಗಿತ್ತು. ಹೀಗಾಗಿ ಎಣ್ಣೆ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡಲಾಗಿತ್ತು. ಇದು ಭಾರೀ ಅಕ್ರೋಶಕ್ಕೆ ಕಾರಣವಾಗಿತ್ತು. ಆದರೇ ಇದೀಗ ಶೀಘ್ರವೇ ಕರ್ನಾಟಕದಲ್ಲಿ ಶೇ.15ರಿಂದ 25ರಷ್ಟು ಮದ್ಯದ ದರ ಇಳಿಕೆ ಮಾಡುವ ಮುನ್ಸೂಚನೆ ಹೊರಬಿದ್ದಿದೆ.
ಇಂಥ ಖುಷಿ ಸುದ್ದಿಯೊಂದು ರಾಜ್ಯ ಸರ್ಕಾರದ ಉನ್ನತ ಮೂಲಗಳಿಂದ ಹೊರ ಬಿದ್ದಿದ್ದೂ. ಮಾಹಿತಿಯ ಪ್ರಕಾರ ಕರ್ನಾಟಕ ಅಬಕಾರಿ ತಿದ್ದುಪಡಿ ನಿಯಮಗಳು 2024ಕ್ಕೆ ಜೂನ್ ನಲ್ಲಿ ತಿದ್ದುಪಡಿಗೆ ನೀಡಲಾಗಿತ್ತು. ಈಗ ಈ ತಿದ್ದುಪಡಿ ಕಾಯ್ದೆಯನ್ನು ಮುಂದಿನ ವಾರದೊಳಗೆ ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಾಜ್ಯ ಅಬಕಾರಿ ಇಲಾಖೆಯ ಉನ್ನತ ಮೂಲಗಳ ಮಾಹಿತಿ ಪ್ರಕಾರ ಹೊರ ರಾಜ್ಯಗಳಿಗಿಂತ ಭಾರತೀಯ ನಿರ್ಮಿತ ಮದ್ಯದ ಮೇಲಿನ ಅಬಕಾರಿ ಸುಂಕದ ಮೇಲಿನ ಸ್ಲ್ಯಾಬ್ ಗಳ ಸಂಖ್ಯೆಯನ್ನು 18 ರಿಂದ 16ಕ್ಕೆ ಇಳಿಸುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಕರ್ನಾಟಕದಲ್ಲಿ ಮದ್ಯದ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳ ಪ್ರಕಾರ ಹೇಳಲಾಗುತ್ತಿದೆ.
ಇತರೆ ವಿಷಯಗಳು:
ಗ್ರಾಹಕರಿಗೆ ಭಾರೀ ಶಾಕ್ ನೀಡಿದ SBI: ಸಾಲದ ಬಡ್ಡಿ ದರದಲ್ಲಿ ದಿಢೀರ್ ಏರಿಕೆ!
ರಾಜ್ಯದ್ಯಂತ ವಿದ್ಯಾರ್ಥಿಗಳ ಗಮನಕ್ಕೆ! NMMS ಪರೀಕ್ಷೆ ಅರ್ಜಿ ಆಹ್ವಾನ