ಹಲೋ ಸ್ನೇಹಿತರೇ, ಜಮ್ಮು-ಕಾಶ್ಮೀರದಲ್ಲಿ ದಶಕ ನಂತರ ಇಂದು ಬುಧವಾರ ಮೊದಲ ಹಂತದ ಚುನಾವಣೆಗೆ ಮತದಾನ ನಡೆದಿದೆ. 2ನೇ ಹಂತದಲ್ಲಿ, ಸೆಪ್ಟೆಂಬರ್ 25 ರಂದು ಜಮ್ಮು ಮತ್ತು ಕಾಶ್ಮೀರದ 26 ವಿಧಾನಸಭಾ ಸ್ಥಾನಗಳಿಗೆ ಮತದಾನವನ್ನು ನಡೆಯಲಿದ್ದು, ಮೂರನೇ ಹಾಗೂ ಕೊನೆಯ ಹಂತದಲ್ಲಿ ಅಕ್ಟೋಬರ್ 1 ರಂದು ಜಮ್ಮು ಮತ್ತು ಕಾಶ್ಮೀರದ 40 ವಿಧಾನಸಭಾ ಸ್ಥಾನಗಳಿಗೆ ಮತದಾನವನ್ನು ನಡೆಯಲಿದೆ.
ಈಗಾಗಲೇ ಭರ್ಜರಿಯಾಗಿ ಚುನಾವಣಾ ಪ್ರಚಾರವನ್ನು ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಶ್ರೀನಗರದ ಶೇರ್-ಎ-ಕಾಶ್ಮೀರ್ ಸ್ಟೇಡಿಯಮ್ನಲ್ಲಿ ಬಿಜೆಪಿ ಅಭ್ಯರ್ಥಿಗಳ ಬೆಂಬಲಾರ್ಥ ರ್ಯಾಲಿಯಲ್ಲಿ ಮಾತನಾಡಿದ ಅವರು,ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಭರವಸೆಯನ್ನು ಬಿಜೆಪಿ ಈಡೇರಿಸಲಿದೆ ಎಂದರು.
ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಮೊದಲ ದಿನದ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಮತಚಲಾಯಿಸಿರುವುದನ್ನ ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದು,ಇದು ಪ್ರಜಾಪ್ರಭುತ್ವದ ಮೇಲಿನ ಅಪಾರ ವಿಶ್ವಾಸವನ್ನು ತೋರಿಸಿದೆ. ತಮ್ಮ ಮತವು ಬದಲಾವಣೆಯನ್ನು ತರಬಹುದು, ಸಬಲೀಕರಣದತ್ತ ಮೊದಲ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಇನ್ನೂ ರೈತರಿಗೆ ವಾರ್ಷಿಕವಾಗಿ 10,000 ರೂ.ಗಳ ನೆರವು ಪ್ರತಿಯ ಕುಟುಂಬದ ಯಜಮಾನಿಗೆ 18,000 ರೂ.ಗಳ ವಾರ್ಷಿಕ ನೆರವು ಹಾಗೂ ಆರೋಗ್ಯ ವಿಮೆ ರಕ್ಷಣೆಯನ್ನು ಈಗಿನ ಐದು ಲಕ್ಷ ರೂ.ಗಳಿಂದ ಏಳು ಲಕ್ಷ ರೂ.ಗಳಿಗೆ ಹೆಚ್ಚಿಸುವುದು ಇವು ಪ್ರಧಾನಿಯವರ ಇತರ ಭರವಸೆಗಳಲ್ಲಿ ಸೇರಿವೆ.
ಇದನ್ನೂ ಓದಿ: ಪಿಎಫ್ ಹಿಂಪಡೆಯುವ ಮಿತಿ ₹1 ಲಕ್ಷಕ್ಕೆ ಏರಿಕೆ! ಉದ್ಯೋಗಿಗಳ ಭರ್ಜರಿ ನ್ಯೂಸ್
ಕಳೆದ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯಲ್ಲಿ ವ್ಯಾಪಕ ಬದಲಾವಣೆಗಳಾಗಿವೆ ಎಂದ ಪ್ರಧಾನಿ ಮೋದಿ ಅವರು, ಹಿಂದೆ ಚುನಾವಣಾ ಪ್ರಚಾರಗಳು ಸಂಜೆ ಆರು ಗಂಟೆಗೆ ಅಂತ್ಯಗೊಳ್ಳುತ್ತಿದ್ದವು, ಮನೆಮನೆಗೆ ತೆರಳಿ ಪ್ರಚಾರವನ್ನು ಅಸಾಧ್ಯವಾಗಿತ್ತು, ಇಂದು ತಡರಾತ್ರಿಯಲ್ಲಿಯೂ ಚುನಾವಣಾ ಪ್ರಚಾರ ನಡೆಯುತ್ತಿದೆ. ಈಗ ಜನರು ಪ್ರಜಾಪ್ರಭುತ್ವವನ್ನು ಸಂಭ್ರಮಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಸರೆನ್ಸ್ ಮತ್ತು PDO ತಮ್ಮ ಸ್ವಂತವಾಗಿ ಲಾಭಗಳಿಗಾಗಿ ಪ್ರಜಾಪ್ರಭುತ್ವ ಮತ್ತು ಕಾಶ್ಮೀರಿಯತ್ ಅನ್ನು ತುಳಿದಿವೆ. 1980ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜಕೀಯವನ್ನು ತಮ್ಮ ಜಹಗೀರು ಎಂದು ಅವು ಪರಿಗಣಿಸಿದ್ದವು. ತಮ್ಮ ಕುಟುಂಬದವರನ್ನು ಹೊರತುಪಡಿಸಿ ಇತರ ಯಾರಾ ಮುಂದೆ ಬರುವುದನ್ನು ಅವು ಬಯಸಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ವಾಗ್ದಾಳಿಯನ್ನು ನಡೆಸುವ ಮೂಲಕ ತಿಳಿಸಿದ್ದಾರೆ.
ಕಾಂಗ್ರೆಸ್, ನ್ಯಾಷನಲ್ ಕಾನ್ಸರೆನ್ಸ್ ಹಾಗೂ ಪಿಡಿಪಿಯೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಅವು ಏಕೆ ನಿಲ್ಲಿಸುತ್ತಿದ್ದವು? ಅದು ತಮ್ಮ ಕುಟುಂಬ ಆಡಳಿತಕ್ಕೆ ಸವಾಲು ಹಾಕುವ ಹೊಸಮುಖಗಳನ್ನು ಮುಂದಕ್ಕೆ ತರುತ್ತದೆ ಎನ್ನುವುದು ಅವುಗಳಿಗೆ ತಿಳಿದಿತ್ತು. ಪರಿಣಾಮವಾಗಿ ಯುವಜನರು ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಕಳೆದುಕೊಳ್ಳತೊಡಗಿದ್ದರು ಎಂದು ಮೋದಿಯವರು ತಿಳಿಸಿದರು.
ಇತರೆ ವಿಷಯಗಳು:
ಮೋದಿ ಹುಟ್ಟು ಹಬ್ಬದ ಪ್ರಯುಕ್ತ 32,000 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ!
ಈ ನೌಕರರ ಪಿಂಚಣಿ ಮೊತ್ತ ಪರಿಷ್ಕರಣೆ!