ರೈತರು ಪಹಣಿಯಲ್ಲಿನ ತಪ್ಪಾದ ಹೆಸರನ್ನು ಹೀಗೆ ಸರಿಪಡಿಸಿ!

ಹಲೋ ಸ್ನೇಹಿತರೆ, ರೈತರು ತಮ್ಮ ಜಮೀನಿನ ಪ್ರಮುಖ ದಾಖಲೆಯಾದ ಪಹಣಿಯಲ್ಲಿ ಹೆಸರು ತಪ್ಪಾಗಿದ್ದರೆ. ಈ ತಪ್ಪಾದ ಹೆಸರನ್ನು ಸರಿಪಡಿಸಿಕೊಳ್ಳಲು ರೈತರಿಗೆ ಅವಕಾಶ ನೀಡಲಾಗಿದೆ. ಅದಕ್ಕಾಗಿ ಬೇಕಾದ ದಾಖಲೆಗಳು ಮತ್ತು ಹೆಸರು ಸರಿಪಡಿಸುವ ಪ್ರಕ್ರಿಯೆ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Name Correction in Farmers Pahani

RTC ಯಲ್ಲಿ ಹೆಸರು ತಿದ್ದುಪಡಿ ಪ್ರಕ್ರಿಯೆ

ಅಗತ್ಯ ದಾಖಲೆಗಳೊಂದಿಗೆ ಭೂಮಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ. ಭೂಮಿ ಕೇಂದ್ರವು ನೀವು ಸಲ್ಲಿಸಿದ ಅರ್ಜಿಯನ್ನು ಗ್ರಾಮ ಲೆಕ್ಕಾಧಿಕಾರಿಗೆ ರವಾನಿಸುತ್ತದೆ. ಸ್ವೀಕರಿಸಿದ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ದಾಖಲೆ ತಪ್ಪಾಗಿದ್ದರೆ ಅದನ್ನು ತಿರಸ್ಕರಿಸಲಾಗುತ್ತದೆ. ದಾಖಲೆಗಳು ಸರಿಯಾಗಿದ್ದರೆ ಪಹಣಿಯನ್ನ ಸರಿಪಡಿಸಲು ಭೂಮಿ ಕೇಂದ್ರಕ್ಕೆ ಆದೇಶಿಸುತ್ತಾರೆ. ಅವರ ಆದೇಶದ ಮೇರೆಗೆ, ಹೆಸರನ್ನು ಬದಲಾಯಿಸಿ ಕೆಲವೇ ದಿನಗಳಲ್ಲಿ ಸರಿಪಡಿಸಿದ ಪಹಣಿ ನಿಮ್ಮ ಕೈ ಸೇರಲಿದೆ.

ಇದನ್ನು ಓದಿ: ಕೊನೆಗೂ ಇಳಿಕೆಯಾದ ಬಂಗಾರದ ಬೆಲೆ; 10 ಗ್ರಾಂ ಚಿನ್ನದ ಬೆಲೆ ಇಷ್ಟೇನಾ? 

ಮಾಹಿತಿಯನ್ನು ಸರಿ ಇದೆಯಾ ಇಲ್ಲವಾ ಎಂದು ಹೇಗೆ ಚೆಕ್‌ ಮಾಡುವುದು?

ಮೊದಲು https://landrecords.karnataka.gov.in/service2/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಮೊಬೈಲ್ ಫೋನ್‌ನಲ್ಲಿ ನಿಮಗೆ ಸಂಬಂಧಿಸಿದ ಭೂ ದಾಖಲೆಗಳ ಮಾಹಿತಿಯನ್ನು ವೀಕ್ಷಿಸಬಹುದು. ನಿಮ್ಮ ಭು ಪ್ರದೇಶ ಇರುವ ತಾಲೂಕು, ಹೋಬಳಿ, ಗ್ರಾಮ, ಸರ್ವೆ ಸಂಖ್ಯೆ, ಹಿಸ್ಸಾ ಸಂಖ್ಯೆ ಮತ್ತು ಮಾದರಿ ವರ್ಷವನ್ನು ಆಯ್ಕೆ ಮಾಡುವ ಮೂಲಕ ನೀವು ವಿವರಗಳ ಮೊಬೈಲ್ ನಲ್ಲಿ ಪರಿಶೀಲಿಸಬಹುದು.

ಅಗತ್ಯವಿರುವ ದಾಖಲೆಗಳು:

  • ಆಧಾರ್ ಕಾರ್ಡ್‌
  • ಪಹಣಿ ಪತ್ರ, ನೆಮ್ಮದಿ ಕೇಂದ್ರ/ತಹಶೀಲ್ದಾರ್ ಕಚೇರಿಯಲ್ಲಿ ಪಡೆಯಿರಿ
  • 20 ರೂ. ಇ-ಸ್ಟ್ಯಾಂಪ್ ಪೇಪರ್ ಅನ್ನು ತೆಗೆದುಕೊಂಡು ಹೆಸರನ್ನು ಸರಿಪಡಿಸಲು ವಿವರಗಳನ್ನು ಭರ್ತಿ ಮಾಡಬೇಕು. ನಂತರ ನೋಟರೈಸೇಶನ್ ಅನ್ನು ನೋಟರಿ ವಕೀಲರಿಂದ ಮಾಡಿಸಬೇಕು.
  • ಪಹಣಿಯಲ್ಲಿನ ಹೆಸರು ತಿದ್ದುಪಡಿಗಾಗಿ ಮಾದರಿ ಅರ್ಜಿಯನ್ನು ಸಿದ್ಧಪಡಿಸಿ ಇಲಾಖೆಗೆ ನೀಡಬೇಕು.

ಇತರೆ ವಿಷಯಗಳು:

ಪ್ರಯಾಣಿಕರಿಗೆ ಸಿಹಿ ಸುದ್ದಿ! ರೈಲಿನಲ್ಲಿ ಆರಂಭವಾಗಲಿದೆ ‘ಸೂಪರ್ ಅಪ್ಲಿಕೇಷನ್ʼ

ಇಂದಿರಾ ಕ್ಯಾಂಟೀನ್ ಪ್ರಿಯರಿಗೆ ಸಿಹಿ ಸುದ್ದಿ, ಡಿಜಿಟಲ್ ಟಚ್ ಮೂಲಕ ಹೋಟೆಲ್-ರೆಸ್ಟೋರೆಂಟ್ ರೀತಿ ಆರ್ಡರ್ ನೀಡಲು ಅವಕಾಶ.

Leave a Reply

Your email address will not be published. Required fields are marked *

rtgh