ಬೆಂಗಳೂರಿನಲ್ಲಿ SRF ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ ತಿಂಗಳಿಗೆ ₹31,000 ರಿಂದ ₹35,000.

NIANP Recruitment 2024: ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯ ವಿಜ್ಞಾನ ಸಂಸ್ಥೆ (NIANP) 2024ನೇ ಸಾಲಿನ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನಲ್ಲಿ 1 ಸೀನಿಯರ್ ರಿಸರ್ಚ್ ಫೆಲೋ (SRF) ಹುದ್ದೆ ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹31,000-₹35,000 ಸಂಬಳ ನೀಡಲಾಗುತ್ತದೆ.

ಹುದ್ದೆಯ ಮಾಹಿತಿ:

ಸಂಸ್ಥೆರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯ ವಿಜ್ಞಾನ ಸಂಸ್ಥೆ
ಹುದ್ದೆಸೀನಿಯರ್ ರಿಸರ್ಚ್​ ಫೆಲೋ(SRF)
ಒಟ್ಟು ಹುದ್ದೆ1
ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ
ವೇತನ ಮಾಸಿಕ ₹ 31,000-35,000
ಅರ್ಜಿ ಸಲ್ಲಿಸಲು ಕೊನೆಯ ದಿನಜುಲೈ 22, 2024
ಉದ್ಯೋಗದ ಸ್ಥಳಬೆಂಗಳೂರು

ವಿದ್ಯಾರ್ಹತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಎಂ.ಎಸ್ಸಿ, ಎಂ.ವಿ.ಎಸ್ಸಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.

ವಯೋಮಿತಿ:

ಗರಿಷ್ಠ 35 ವರ್ಷ. ಮೀಸಲಾತಿ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ, ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ.

ವೇತನ: ₹31,000-₹35,000 ತಿಂಗಳಿಗೆ.

ಉದ್ಯೋಗದ ಸ್ಥಳ: ಬೆಂಗಳೂರು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ನೋಟಿಫಿಕೇಶನ್ ದಿನಾಂಕ: 01/07/2024
  • ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 22, 2024

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ತಮ್ಮ ಭರ್ತಿ ಮಾಡಿದ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲಾತಿಗಳನ್ನು drcdeva@gmail.com ಗೆ ಇ-ಮೇಲ್ ಮೂಲಕ ಕಳುಹಿಸಬಹುದು.

ಕೆಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ.

Leave a Reply

Your email address will not be published. Required fields are marked *

rtgh