ಮಕ್ಕಳ ಹೆಸರಿನಲ್ಲಿ ಈ ಖಾತೆ ತೆರೆಯಲು ಅನುಮತಿ! ಮೋದಿ ಮತ್ತೊಂದು ಘೋಷಣೆ

ಹಲೋ ಸ್ನೇಹಿತರೆ, ಪೋಷಕರು ಮಕ್ಕಳ ಹೆಸರಿನಲ್ಲಿ ಎನ್‌ಪಿಎಸ್ ಖಾತೆ ತೆರೆಯಲು ಸರ್ಕಾರ ಅನುಮತಿ ನೀಡಿದ್ದೂ ಈ ಯೋಜನೆಗೆ ಎನ್ಪಿಎಸ್ ವಾತ್ಸಲ್ಯ ಎಂದು ಹೆಸರಿಡಲಾಗಿದೆ. ಮಕ್ಕಳಿಗೆ ದೀರ್ಘಾವಧಿಗೆ ಅಥವಾ ಪ್ರೌಢಾವಸ್ಥೆಯಲ್ಲಿ ಸ್ಥಿರವಾದ ಆರ್ಥಿಕ ಭವಿಷ್ಯವನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಏನಿದು ಯೋಜನೆ? ಖಾತೆ ಹೇಗೆ ತೆರೆಯುವುದು ಈ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.

NPS Vatsalya Scheme

ಈ ಯೋಜನೆ ಅಡಿಯಲ್ಲಿ, ಪೋಷಕರು ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ನೇರವಾಗಿ NSP ಯಲ್ಲಿ ಹೂಡಿಕೆ ಮಾಡಬಹುದು. ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಬಯಸುವ ಮತ್ತು ನಿವೃತ್ತಿಯ ನಂತರ ಅವರಿಗೆ ಆರ್ಥಿಕ ಭದ್ರತೆಯನ್ನು ನೀಡಲು ಬಯಸುವ ಈ ಜನರಿಗೆ ಈ ಯೋಜನೆ ಉತ್ತಮವಾಗಿದೆ.

ಏನಿದು ಯೋಜನೆ?

ಇದು ಹಳೆಯ ಯೋಜನೆಯಾದ NSP ರೂಪಾಂತರವಾಗಿದೆ, ಇದನ್ನು ವಿಶೇಷವಾಗಿ ಯುವ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಡಿ, ಪೋಷಕರು ತಮ್ಮ ಮಕ್ಕಳಿಗೆ ಎನ್ಪಿಎಸ್ ಖಾತೆಯನ್ನು ತೆರೆಯಬಹುದು ಮತ್ತು ಮಗುವಿಗೆ 18 ವರ್ಷ ತುಂಬುವವರೆಗೆ ಪ್ರತಿ ತಿಂಗಳು ಅಥವಾ ವರ್ಷ ನಿಗದಿತ ಮೊತ್ತವನ್ನು ಠೇವಣಿ ಮಾಡಬಹುದು.

ಇದನ್ನು ಓದಿ: ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, ಸಾಲ ಸೌಲಭ್ಯಕ್ಕೆ ಆನ್ ಲೈನ್ ಅರ್ಜಿ ಆಹ್ವಾನ.

ಖಾತೆ ತೆರೆಯುವುದು ಹೇಗೆ?

ಎನ್ಪಿಎಸ್ ಖಾತೆಯ ಪ್ರಕ್ರಿಯೆಯು ಸರಳವಾಗಿದೆ. ಪಿಂಚಣಿ ನಿಧಿ ನಿಯಂತ್ರಕರ ವೆಬ್ಸೈಟ್ E-NPS ನಲ್ಲಿ ನೀವು ಈ ಖಾತೆಯನ್ನು ತೆರೆಯಬಹುದು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿಯೂ ಸಹ ಈ ಸೌಲಭ್ಯವನ್ನು ಒದಗಿಸುತ್ತವೆ.

ಈ ಯೋಜನೆ ಪ್ರಯೋಜನಗಳು:

  1. ಎನ್ಪಿಎಸ್ ವಾತ್ಸಲ್ಯ ಖಾತೆ ತೆರೆದರೆ 18 ವರ್ಷ ಪೂರ್ಣಗೊಂಡ ನಂತರ ಸಾಮಾನ್ಯ ಎನ್ಪಿಎಸ್ ಖಾತೆಯಾಗಿ ಪರಿವರ್ತಿಸಬಹುದು.
  2. ಅಗತ್ಯವಿದ್ದಲ್ಲಿ ಸಾಮಾನ್ಯ ಎನ್ಪಿಎಸ್ ಖಾತೆಗೆ ಪರಿವರ್ತಿಸದೆಯೇ ಸಂಪೂರ್ಣ ಹಣವನ್ನು ಹಿಂಪಡೆಯಬಹುದು.
  3. ಈ ಯೋಜನೆಯು ಪೋರ್ಟಬಿಲಿಟಿ ಸೇವೆ ಒದಗಿಸುತ್ತದೆ, ಅಂದರೆ ಕೆಲಸ ಬದಲಾದರೂ ಸಹ ಖಾತೆ ಬದಲಾಗುವುದಿಲ್ಲ.
  4. ಈ ಖಾತೆಯು ದೀರ್ಘಕಾಲದವರೆಗೆ ಮುಂದುವರಿದರೆ ದೊಡ್ಡ ಮೊತ್ತ ಸಿಗುತ್ತದೆ.
  5. ನಿವೃತ್ತಿಯ ಸಮಯದಲ್ಲಿ, ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಜೊತೆಗೆ 60% ಅನ್ನು ಹಿಂಪಡೆಯಬಹುದು.
  6. ನಿವೃತ್ತಿಯ ಸಮಯದಲ್ಲಿ ನಿಧಿಯ ಒಂದು ಭಾಗವನ್ನು ತೆರಿಗೆ ಇಲ್ಲದೆ ಪಡೆಯುಬಹುದು.

ಇತರೆ ವಿಷಯಗಳು:

ಕೃಷಿ ಭೂಮಿ ದಾಖಲೆಗಳ ಆಧಾರ್ ಜೋಡಣೆ 60% ಪೂರ್ಣ! ಬಾಕಿ ಇದ್ದವರು ತಕ್ಷಣ ಮಾಡಿ

LPG ಬಳಸುವವರಿಗೆ ಸಿಹಿ ಸುದ್ದಿ, ಸಿಲಿಂಡರ್ ಮೇಲೆ ವಿಶೇಷ ರಿಯಾಯಿತಿ ಲಭ್ಯ.

Leave a Reply

Your email address will not be published. Required fields are marked *

rtgh